ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ಶ್ರೀ ಅನಂತ ವ್ರತ

ಉಡುಪಿ :ಕಡೆಕಾರ್ ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ‘ಶ್ರೀಅನಂತನ ವೃತವು ಶ್ರೀಶ ಭಟ್ ಕಡೆಕಾರ್ ಇವರ ನೇತೃತ್ವದಲ್ಲಿ ನಡೆಯಿತು.
ಶ್ರೀ ಕೃಷ್ಣ ಮಠದಲ್ಲಿ ಅನಂತನ ಚತುರ್ದಶಿ ಅಲಂಕಾರ: ಸಂಭ್ರಮದ ಪೂಜೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಅನಂತನ ವೃತದ ಪ್ರಯುಕ್ತ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನಂತಪದ್ಮನಾಭ ದೇವರ ಅಲಂಕಾರ ಮಾಡಿದರು,ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆ ನೆರವೇರಿಸಿದರು.
ಶ್ರೀ ಕೃಷ್ಣ ಮಠದಲ್ಲಿ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ,ಇವರ ಆಶ್ರಯದಲ್ಲಿ ನೃತ್ಯನಿಕೇತನ,ಉಡುಪಿ ಇವರು ಅರ್ಪಿಸುವ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ – 2019 ವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥಶ್ರೀಪಾದರು ಮತ್ತು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟಿಸಿದರು,ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ,ನೃತ್ಯನಿಕೇತನದ ನಿರ್ದೇಶಕಿ ಲಕ್ಷ್ಮಿ ಗುರುರಾಜ್ ಕೊಡವೂರ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೆ.17ರ ವರೆಗೆ ವಿಶೇಷ ಸೋಣಾರತಿ

ಉಡುಪಿ: ಉಡುಪಿಯ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಸೋಣೆ ಮಾಸದ ದಿನಂಪ್ರತಿ ಸೆ. 17ರ ತನಕ ವಿಶೇಷ ಸೋಣಾರತಿ ಸೇವೆ ನಡೆಯಲಿದೆ. ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತೀ ಶುಕ್ರವಾರ ವಿಶೇಷ ಪೂಜೆ, ಜತೆಗೆ ಸೋಣೆ ಮಾಸದ ನಾಲ್ಕು ಶುಕ್ರವಾರವೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಹೂವಿನ ಪೂಜೆ, ರಂಗಪೂಜೆ, ಹಾಲು ಪಾಯಸ, ಅನ್ನಸಂತರ್ಪಣೆ ನಡೆಯಲಿದೆ. ಸೋಣಾರತಿ ಸಮಯದಲ್ಲಿ ಹಲಸಿನ ಮರದ ವಿವಿಧ ಆಕೃತಿಗಳ 12 ಆರತಿಗಳನ್ನು ಬೆಳಗಲಾಗುತ್ತದೆ. ಪ್ರತೀ ಶುಕ್ರವಾರ ಬೆಳಗಲ್ಪಡುವ 14 […]
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಚಿಣ್ಣರ ಉತ್ಸವ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನ ಇವರಿಂದ “ಚಿಣ್ಣರ ಉತ್ಸವ” ಕಾರ್ಯಕ್ರಮ ನಡೆಯಿತು.