ಶ್ರೀ ಕೃಷ್ಣ ಮಠದಲ್ಲಿ :ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲ ಮಹಾಸಂಸ್ಥಾನಂ ಶ್ರೀ ಹೃಷಿಕೇಶ ತೀರ್ಥಪೀಠಮ್ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಸಾಂಸ್ಕೃತಿಕ  ಕಾರ್ಯಕ್ರಮದ ಅಂಗವಾಗಿ   ಚೆನ್ನೈನ ಪದ್ಮಭೂಷಣ ಟಿ.ವಿ.ಶಂಕರನಾರಾಯಣ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ ನಡೆಯಿತು.

ಉಡುಪಿ ಸೋದೆ ಮಠದ ಭೂತರಾಜ ಸ್ವಾಮೀ ಸನ್ನಿದಿಯಲ್ಲಿ ಹಯಗ್ರೀವ ಜಯಂತಿ

ಉಡುಪಿ:  ಉಡುಪಿ ಸೋದೆ ಮಠದ ಭೂತರಾಜ ಸ್ವಾಮೀ ಸನ್ನಿದಿಯಲ್ಲಿ ದೈವಜ್ಞ ಸಮಾಜದ ವತಿಯಿಂದ ಗುರುವಾರ ದಂಡು  ಹಯಗ್ರೀವ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿಯ ಸನ್ನಿಧಿಯನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.  ಉಡುಪಿ  ಶ್ರೀ ಕೃಷ್ಣ ಮಠದ   ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು ಮತ್ತು ಅದಮಾರು  ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥರು ಹಾಗು ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು  ನೂರಾರು   ದೈವಜ್ಞ ಸಮಾಜಬಾಂದವರು ಹಾಗು  ಹಯಗ್ರೀವ ಭಕ್ತ ವೃಂದ ದವರು ಉಪಸ್ಥರಿದರು.

  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ:ಅನುಗ್ರಹ ಸಂದೇಶ, ಸಮ್ಮಾನ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥ ಪೀಠಮ್ ಪರ್ಯಾಯ ಶ್ರೀಪಲಿಮಾರು ಮಠ ಶ್ರೀಕೃಷ್ಣಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಎರಡನೆಯ ದಿನದಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು  ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದಲ್ಲಿ ಕಟೀಲು ದೇವಸ್ಥಾನದ ಅರ್ಚಕರಾದ ವಾಸುದೇವ ಅಸ್ರಣ್ಣ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಗುರ್ಮೆ ಸುರೇಶ ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಿಟ್ಟೆ ವಿನಯ್ ಹೆಗ್ಡೆ, ಹಿಂದುಸ್ಥಾನಿ ಗಾಯಕರಾದ ಉಸ್ತಾದ್ ಫಿಯಾಜ್ ಖಾನ್, […]

ಶ್ರೀ ಕೃಷ್ಣ ಮಠ:ವಿದ್ಯಾರ್ಥಿಗಳಿಂದ ‘ದಾನಶೂರ ಶಿಬಿ’ ಯಕ್ಷಗಾನ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಭಾ ಉಡುಪಿ,  ಪರಮ ಪೂಜ್ಯ ಅಷ್ಠಮಠಾಧೀಶರಿಂದ ಸ್ಥಾಪಿತವಾದ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತಮಹಾಪಾಠಶಾಲೆಯ 115 ನೇಯ ವಾರ್ಷಿಕೋತ್ಸವದ ಪ್ರಯುಕ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ‘ದಾನಶೂರ ಶಿಬಿ’ ಎಂಬ ಪ್ರಸಂಗದ ಯಕ್ಷಗಾನ ನಡೆಯಿತು.

ಶ್ರೀ ಕೃಷ್ಣ ಮಠ: ಸಂಸ್ಕೃತ ಮಹಾಪಾಠ ಶಾಲೆಯ ವಾರ್ಷಿಕೋತ್ಸವ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಭಾ ಉಡುಪಿ, ಪರಮ ಪೂಜ್ಯ ಅಷ್ಠಮಠಾಧೀಶರಿಂದ ಸ್ಥಾಪಿತವಾದ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಿನೀ ಸಂಸ್ಕೃತಮಹಾಪಾಠಶಾಲೆಯ 115 ನೇಯ ವಾರ್ಷಿಕೋತ್ಸವವು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.