ಶ್ರೀ ಕೃಷ್ಣ ಮಠದಲ್ಲಿ ವಿಶೇಷ ರಥೋತ್ಸವ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಬೆಳಿಗ್ಗೆ  ರಥಬೀದಿಯಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನಿಟ್ಟು  ವಿಶೇಷ ರಥೋತ್ಸವವು ನಡೆಯಿತು.ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀ ಪಾದರು ಪಾಲ್ಗೊಂಡಿದ್ದರು.

ಶ್ರೀ ಕೃಷ್ಣ ಮಠದಲ್ಲಿ ಕಡೆಕಾರ್ ಶ್ರೀಶ ಭಟ್ ಅವರಿಗೆ ಸನ್ಮಾನ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ 20ನೆಯ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ,ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಉತ್ತಮ ಕೊಡುಗೆಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಸಲಹಾ ಸಮಿತಿಯ ಸದಸ್ಯರಾದ ಕಡೆಕಾರ್ ಶ್ರೀಶ ಭಟ್ ಇವರನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸನ್ಮಾನಿಸಿ ಅನುಗ್ರಹಿಸಿದರು.

ವಿವಾಹದಲ್ಲಿ ವಿಳಂಬವಾಗುತ್ತಿದೆಯೆ? ಈ ದೇವಿಯನ್ನು ಪೂಜೆಸಿದ್ರೆ ನಿಮ್ ಕಷ್ಟ ಪರಿಹಾರವಾಗುತ್ತೆ

ಬೇಡಿ ಬಂದ ಭಕ್ತರ ಕಷ್ಟವನ್ನು ಈ ದೇವಿಯೂ ದೂರ ಮಾಡುತ್ತಾರೆ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಪದ್ಧತಿಯಾಗಿದೆ. ಭಕ್ತರ ಜೀವನದಲ್ಲಿರುವ ಸಂಕಷ್ಟಗಳನ್ನು ಆದಿ ಶಕ್ತಿ ನಿವಾರಿಸುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಂತೆಯೇ ಮಂಗಳಿಕ ದೋಷದಂತಹ ವಿವಾಹ ದೋಷವನ್ನು ಸಹ ಈ ದೇವಿಯೂ ನಿವಾರಿಸುತ್ತಾರೆ. ಹೀಗಾಗಿ ಮದುವೆ ಸಂಬಂಧ ಸಮಸ್ಯೆಗಳನ್ನು ಎದುರಿಸುತ್ತಿರೋರು ಈ ದೇವಿಯ ಆರಾಧನೆ ಮಾಡಿದ್ರೆ ಖಂಡಿತ ಉತ್ತಮ ಫಲ ಸಿಗಲಿದೆ. ಹೌದು, ನವರೂಪದಲ್ಲಿರೋ ದುರ್ಗೆ ಮಾತೆಯ ಪ್ರತಿರೂಪವಾಗಿರೋ ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ಮದುವೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. […]

ಶ್ರೀ ಕೃಷ್ಣ ಮಠ: ವಿದ್ಯಾಸಿಂಹಾಚಾರ್ಯ ಅವರಿಗೆ ಶ್ರೀಪೂರ್ಣಪ್ರಜ್ಞ ಪ್ರಶಸ್ತಿ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಿದ್ವಾಂಸರಾದ ಮಾಹುಲಿ ವಿದ್ಯಾಸಿಂಹಾಚಾರ್ಯ,ಮುಂಬೈ  ಇವರನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು “ಶ್ರೀಪೂರ್ಣಪ್ರಜ್ಞ ಪ್ರಶಸ್ತಿ” ನೀಡಿ ಅನುಗ್ರಹಿಸಿದರು. ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು,ಪ್ರಯಾಗದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಕಾರ್ಯಾಲಯ ಉದ್ಘಾಟನೆ

ಉಡುಪಿ: ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ, ಉಡುಪಿ ಶ್ರೀಕೃಷ್ಣ ಮಠದ ಆವರಣದ ಶ್ರೀರಾಮಧಾಮದಲ್ಲಿ 2019 ದಶಂಬರ 13 ,14 ,15 ರಂದು ನಡೆಯಲಿರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಕಾರ್ಯಾಲಯವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥಶ್ರೀಪಾದರು ಉದ್ಘಾಟನೆ ಮಾಡಿದರು. ತುಳು ಶಿವಳ್ಳಿ ಸಂಸ್ಕೃತಿಯನ್ನು ಜಗದಗಲಕೆ ಪರಿಚಯಿಸುವ ಈ ಸಮ್ಮೇಳನದಲ್ಲಿ ದೇಶ ವಿದೇಶಗಳಲ್ಲಿರುವ ಶಿವಳ್ಳಿ ಬ್ರಾಹ್ಮಣರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಶ್ರೀಗಳು ತಿಳಿಸಿದರು. ಸಮ್ಮೇಳನದ ರೂಪುರೇಷೆಯನ್ನು ಕೆ ಬಾಲಕೃಷ್ಣ ಮಡಮಂತ್ತಾಯ  ತಿಳಿಸಿದರು. […]