ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನ: ಜೀರ್ಣೋದ್ಧಾರಕ್ಕೆ 15 ಕೋ. ರೂ. ಯೋಜನೆ ಸಿದ್ಧ
ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇಗುಲವನ್ನು ಸಂಪೂರ್ಣ ಜೀರ್ಣೋದ್ದಾರ ಗೊಳಿಸಲು ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಮುಂದಾಗಿದ್ದು, 15 ಕೋಟಿ ರೂಪಾಯಿ ಯೋಜನೆ ಇದೀಗ ಸಿದ್ಧಗೊಂಡಿದ್ದು ಮರ ಮತ್ತು ಶಿಲೆಗೆ ಸಂಬಂಧಿಸಿದ ಕಾಮಗಾರಿ ಇದೀಗ ಪ್ರಗತಿಯಲ್ಲಿದೆ. ಏನೇನು ಕಾಮಗಾರಿ? ನೂತನ ದಾಸೋಹ ಭವನ, ವ್ಯವಸ್ಥಿತ ಅಡುಗೆ ಶಾಲೆ, ಶಿಥಿಲಗೊಂಡ ಸುತ್ತುಪೌಳಿ ತೀರ್ಥ ಮಂಟಪ ಮತ್ತು ಧ್ವಜಸ್ತಂಭಕ್ಕೆ ಬೆಳ್ಳಿ ಕವಚ ಹೊದಿಕೆ, ನೂತನ ಸ್ವಾಗತ ಗೋಪುರ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜೀರ್ಣೋದ್ದಾರ ಕಾಮಗಾರಿಗಳೊಂದಿಗೆ ಶ್ರೀದೇವಿಗೆ ಬ್ರಹ್ಮಕುಂಭಾಭಿಷೇಕವನ್ನು […]
15 ಕೋ.ರೂ. ವೆಚ್ಚದಲ್ಲಿ ಕನ್ನರ್ಪಾಡಿ ಜಯದುರ್ಗ ಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ

ಉಡುಪಿ: ಇತಿಹಾಸ ಪ್ರಸಿದ್ಧ ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ದೇವಸ್ಥಾನ 15 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇವಳದ ‘ಗರ್ಭಗುಡಿ ಹೊರತುಪಡಿಸಿ ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿ ನಿರ್ಮಾಣವಾಗುತ್ತಿದೆ. ನೂತನ ಕೊಡಿಮರ ಸಮರ್ಪಣೆ ಅಂಗವಾಗಿ ಜ.22ರಂದು ಸಂಜೆ 5ಕ್ಕೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ನಗರದ ಜೋಡುಕಟ್ಟೆಯಿಂದ ಜಯದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಸಾಗುವ ಶೋಭಾಯಾತ್ರೆಯಲ್ಲಿ ವಿಷ್ಣುಸಹಸ್ರನಾಮ ಪಾರಾಯಣ, ಪೂರ್ಣಕುಂಭ ಕಲಶದೊಂದಿಗೆ ಚಂಡೆ, […]
ಕಚ್ಚೂರು ದೇವಸ್ಥಾನವನ್ನು ಶೈಕ್ಷಣಿಕ ಕೇಂದ್ರವಾಗಿಸುವ ಪ್ರಯತ್ನ: ಡಿ.ವಿ. ಸದಾನಂದ ಗೌಡ

ಬ್ರಹ್ಮಾವರ: ಕಚ್ಚೂರು ದೇವಸ್ಥಾನವನ್ನು ಶೈಕ್ಷಣಿಕ ಕೇಂದ್ರವಾಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಶಿಕ್ಷಣ ಸಂಸ್ಥೆ ಮಂಜೂರಾತಿಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ರವಿವಾರ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ವಾರ್ಷಿಕ ಉತ್ಸವ ಸಂದರ್ಭ ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ 10 ಎಕರೆ ಜಾಗ ಮಂಜೂರಿಗೆ ಪ್ರಯತ್ನಿಸುತ್ತೇನೆ.ಈ ಕುರಿತು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದರು. […]
ಕಚ್ಚೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಭ್ರಮ: ಮನೆಗುಡಿಯೊಳಗೆ ದೇವರ ಸ್ಥಾಪಿಸಿದರೆ ಸಾಲದು ಮನದೊಳಿರಬೇಕು: ಮಾದರಚೆನ್ನಯ್ಯ ಸ್ವಾಮೀಜಿ

ಬ್ರಹ್ಮಾವರ: ಮನೆ ಗುಡಿಯೊಳಗೆ ದೇವರನ್ನು ಸ್ಥಾಪಿಸಿದರೆ ಸಾಲದು, ಮನದೊಳಗೆ ಭಗವಂತನನ್ನು ಪ್ರತಿಷ್ಠಾಪಿಸಬೇಕು. ಧರ್ಮ ಮಾನವೀಯ ಮೌಲ್ಯದ ಮೇಲೆ ನಿಂತಿದೆ. ನಾವೆಲ್ಲರೂ ಒಂದು ಎನ್ನುವ ಚಿಂತನೆ ದೇವಸ್ಥಾನದ ಮೂಲಕ ಮೂಡಬೇಕು ಎಂದು ಚಿತ್ರದುರ್ಗ ಶ್ರೀ ಮಾದರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮೀಜಿ ಹೇಳಿದರು. ಅವರು ಇತಿಹಾಸ ಪ್ರಸಿದ್ಧ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ರಥೋತ್ಸವ, ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಅಖಿಲ ಕರ್ನಾಟಕ ಶ್ರೀ ಬಬ್ಬುಸ್ವಾಮಿ ದೇಗುಲಗಳ ಹತ್ತು ಸಮಸ್ತರ […]
ಉಡುಪಿ:ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಬಳಿ ಕೊಠಡಿ ಉದ್ಘಾಟನೆ

ಉಡುಪಿ: ಶ್ರೀ ಕೃಷ್ಣ ಮಠದ ಮಧ್ವ ಸರೋವರದ ಹತ್ತಿರ ನಿರ್ಮಿಸಿರುವ ನೂತನ ಕೊಠಡಿಯನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕರ್ನಾಟಕದ ಕಾನೂನು,ಸಂಸದೀಯ ವ್ಯವಹಾರ,ಸಣ್ಣ ನೀರಾವರಿ ಖಾತೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸ್ವಾಮಿಜಿಯವರ ಆಪ್ತಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ,ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೇಶ ಆಚಾರ್ಯ,ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು