ಪರ್ಯಾಯದ ನೆನಪಿನ ಅಂಚೆಚೀಟಿ ಬಿಡುಗಡೆ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಪ್ರದೀಪಕುಮಾರ್ ಕಲ್ಕೂರ ಇವರ ಪ್ರಾಯೋಜಕತ್ವದಲ್ಲಿ ಉಡುಪಿ ಅಂಚೆ ವಿಭಾಗದ ವತಿಯಿಂದ ಪರ್ಯಾಯದ ನೆನಪಿನ ಅಂಚೆಲಕೋಟೆಯನ್ನು ಉಡುಪಿ ಅಂಚೆ ವಿಭಾಗದ ಅಧೀಕ್ಷಕರಾದ ನವೀನಚಂದ್ರ ಬಿಡುಗಡೆಗೊಳಿಸಿದನು. ಕೃಷ್ಣಾಪುರ ಪರ್ಯಾಯ ಮಠಾಧೀಶರಾದ ಪೂಜ್ಯ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಆಶೀವರ್ಚನ ನಡೆಸಿಕೊಟ್ಟರು.

ಇಂದಿನಿಂದ ಶ್ರೀಕೃಷ್ಣಾಪುರ ಪರ್ಯಾಯ ಆರಂಭ: ಚತುರ್ಥ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರತೀರ್ಥ ಸ್ವಾಮೀಜಿ

ಉಡುಪಿ: ಕಾಪು ಬಳಿಯ ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪವಿತ್ರ ಸ್ನಾನ ಮಾಡಿ ಬಳಿಕ ಉಡುಪಿ ಆಗಮಿಸಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿಸಿ ಪರ್ಯಾಯ ಮೆರವಣಿಗೆ ಆರಂಭವಾಯಿತು. ಉಡುಪಿಯ ರಥಬೀದಿಯ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣದೇವರ ದರ್ಶನಮಾಡಿ ನವಗ್ರಹ ದಾನ ನೀಡಿ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದು ಅನಂತೇಶ್ವರದಲ್ಲಿ ಶ್ರೀ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿ ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಶ್ರೀ ಈಶಪ್ರಿಯ ತೀರ್ಥ […]

ಉಡುಪಿ ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ರಾಯಚೂರಿನ ಭಕ್ತರಿಂದ ಹೊರಕಾಣಿಕೆ ಸಮರ್ಪಣೆ

ಶ್ರೀಕೃಷ್ಣಾಪುರ ಪರ್ಯಾಯೋತ್ಸವಕ್ಕೆ, ರಾಯಚೂರಿನ ಶ್ರೀಕೃಷ್ಣಭಕ್ತರಿಂದ 220 ಕ್ವಿಂಟಲ್ ಅಕ್ಕಿ ಮತ್ತು ಬೆಲ್ಲವನ್ನು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗು ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಮುಖಾಂತರ ಭಾವೀಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಪರ್ಯಾಯ ಕಾಣಿಕೆಯಾಗಿ ಅರ್ಪಿಸಿದರು. ಈ ಸಂದರ್ಭದಲ್ಲಿ, ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಜೊತೆಕಾರ್ಯದರ್ಶಿ ರಾಜಗೋಪಾಲ ಭಟ್, ಪ್ರವೀಣ ಉಪಾಧ್ಯಾಯ, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.    

ಅಶ್ವಥ ಎಲೆಯಲ್ಲಿ ಕೃಷ್ಣಾಪುರ ಶ್ರೀಗಳ ಕಲಾಕೃತಿ ರಚಿಸಿ ಪರ್ಯಾಯಕ್ಕೆ ಶುಭಕೋರಿದ ಉಡುಪಿಯ ಯುವ ಕಲಾವಿದ

ಅಶ್ವಥ ಎಲೆಯಲ್ಲಿ ಉಡುಪಿಯ ಯುವ ಕಲಾವಿದರೊಬ್ಬರು ಭಾವೀ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಕಲಾಕೃತಿ ರಚಿಸಿ ಪರ್ಯಾಯ ಮಹೋತ್ಸವಕ್ಕೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು exclusive ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ ಗೊಂಡ ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವಥ ಎಲೆಯಲ್ಲಿ ಶ್ರೀಗಳ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಮಹೇಶ್ ಅವರು ಈ ಹಿಂದೆಯೂ ಅನೇಕ ರಾಜಕೀಯ ನಾಯಕರು, ಸಾಧಕರು, ಸ್ವಾಮೀಜಿಗಳು ಹಾಗೂ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು […]

ಇಂದು ಪರ್ಯಾಯ ಶ್ರೀ ಅದಮಾರು ಮಠಾಧೀಶರಿಗೆ ನಾಗರಿಕ ಅಭಿವಂದನಾ ಸಮಾರಂಭ

ಉಡುಪಿ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ವತಿಯಿಂದ ಜನವರಿ 17ರ ಸೋಮವಾರ ಸಂಜೆ 6.30 ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ನಾಗರಿಕ ಅಭಿವಂದನಾ ಕಾರ್ಯಕ್ರಮ‌ ನಡೆಯಲಿದೆ . ಭಾವೀ ಪರ್ಯಾಯ ಶ್ರೀ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಪ್ರಸಿದ್ಧ ವಿದ್ವಾಂಸ ಕೃಷ್ಣರಾಜ ಕುತ್ಪಾಡಿ ಅಭಿವಂದನಾ ಭಾಷಣ ಮಾಡಲಿರುವರು. ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ […]