ಮಂಗಳೂರಿನ ರಂಗಭೂಮಿಯ ರೋಚಕ ಇತಿಹಾಸದಲ್ಲಿ ಅರೆಹೊಳೆ ನಾಟಕೋತ್ಸವದ ಕೊಡುಗೆಯೂ ಶ್ಲಾಘನಾರ್ಹ: ಮನೋಹರ ಪ್ರಸಾದ್

ಮಂಗಳೂರು: ಮಂಗಳೂರಿನ ರಂಗಭೂಮಿಯ  ಚಟುವಟಿಕೆಯಲ್ಲಿ ಹಾಗೂ ಅದರ ಬೆಳವಣಿಗೆಯಲ್ಲಿ ಅರೆಹೊಳೆ ನಾಟಕೋತ್ಸವದ ಕೊಡುಗೆಯೂ ಶ್ಲಾಘನಾರ್ಹ ಎಂದು ಖ್ಯಾತ ಪತ್ರಕರ್ತ ಮನೋಹರ ಪ್ರಸಾದ್ ರವರು ಹೇಳಿದರು. ಅವರು ಅರೆಹೊಳೆ ಪ್ರತಿಷ್ಠಾನವು ಅಸ್ತಿತ್ವ (ರಿ) ಮತ್ತು‌ ಲಯನ್ಸ್ ಮತ್ತು  ಲಿಯೋಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅರೆಹೊಳೆ ನಾಟಕೋತ್ಸವ -2022  ನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ಅರೆಹೊಳೆ ಪ್ರತಿಷ್ಠಾನದ ಗೌರವ ಸಲಹೆಗಾರ ಕೆ ಸಿ ಪ್ರಭು, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ […]

ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇಗುಲದ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಪ್ರಿಲ್ 8 ರಿಂದ 11ರ ವರೆಗೆ ನಡೆಯಲಿರುವ ನವೀಕೃತ ನಾಗದೇವರ ಗುಡಿ ಸಮರ್ಪಣೆ, ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಉತ್ಸವ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಶ್ರೀ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಭಾನುವಾರ ಬಿಡುಗಡೆಗೊಳಿಸಿದರು. ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಪಾತ್ರಿಗಳಾದ ಶ್ರೀ ಗೋಪಾಲಕೃಷ್ಣ ಸಾಮಗ, ಅನಂತ ಸಾಮಗ, ಪಾಡಿಗಾರು ಶ್ರೀನಿವಾಸ ತಂತ್ರಿ‌, ಕಲ್ಲಂಜೆ ವಿಠಲ ಭಟ್, […]

ಮಹಿಮೆಯೋ! ಪವಾಡವೋ! ಶ್ರೀ ಲಕ್ಷ್ಮೀಸಮುದ್ರತೀರ್ಥರ ಕಾಲಾವಧಿಯ ಘಟನೆ..

ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ. 1914-16 ರ ಸಂದರ್ಭದಲ್ಲಿ ನಡೆದ ಅಪೂರ್ವ ಘಟನೆ. ಶ್ರೀ ಶಿರೂರು ಮಠದ 27 ನೇ ಯತಿಗಳಾದ ಶ್ರೀಲಕ್ಷ್ಮೀಸಮುದ್ರತೀರ್ಥರ ಪರ್ಯಾಯದ ಸಂದರ್ಭ. ಜಗತ್ತು ಮೊದಲನೇ ಮಹಾಯುದ್ಧದ ಭೀತಿಯಲ್ಲಿ ತಲ್ಲಣಿಸಿತ್ತು. ಜೊತೆಗೆ ಭಾರತ ದೇಶದಲ್ಲಿ ಸ್ವಾತಂತ್ರ್ಯಸಮರದ ಕಾವು ದಿನೇ ದಿನೇ ಉಲ್ಬಣಿಸುತ್ತಿತ್ತು. ಸಾಲದ್ದಕ್ಕೆ ಅನಿರೀಕ್ಷಿತವಾಗಿ ಹುಟ್ಟಿಕೊಂಡ ಭೀಕರ ಬರಗಾಲಕ್ಕೆ ಭಾರತೀಯರು ತರಗುಟ್ಟಿ ಹೋಗಿದ್ದರು. ಆಗಿನ ಮೈಸೂರು ಈಗಿನ ಕರ್ನಾಟಕ ರಾಜ್ಯದ ಬಹುತೇಕ ಪ್ರದೇಶಗಳಲ್ಲಿದ್ದ ಕೆರೆ, ಬಾವಿ , ನದಿಗಳು ಮಳೆನೀರ ಹನಿ ಕಾಣದೆ ಒಣಗಿ […]

ಹಿರಿಯಡ್ಕ: ನಾಳೆ ತಾಲೂಕು ಮಟ್ಟದ “ಭಜನಾಮೃತ – 2022” ಕಾರ್ಯಕ್ರಮ

ಹಿರಿಯಡ್ಕ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಉಡುಪಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇವರು ಜಂಟಿಯಾಗಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ವಠಾರದ ಶ್ರೀಮತಿ ಪದ್ಮಾವತಿ ಪಿ. ಶೆಟ್ಟಿ ಗುಮ್ಮೆ ವೇದಿಕೆಯಲ್ಲಿ ತಾಲೂಕು ಮಟ್ಟದ “ಭಜನಾಮೃತ – 2022” ಕಾರ್ಯಕ್ರಮ ಮಾರ್ಚ್ 6ರಂದು […]

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನೂತನ ಕೊಡಿಮರ (ಧ್ವಜಸ್ತಂಭ)ದ ಶೋಭಯಾತ್ರೆ

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನೂತನ ಧ್ವಜಸ್ತಂಭದ ಶೋಭಾಯಾತ್ರೆಗೆ ಉಡುಪಿ ಜೋಡುಕಟ್ಟೆಯಲ್ಲಿ ಇಂದು ಚಾಲನೆ ನೀಡಲಾಯಿತು. ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶೋಭಾಯಾತ್ರೆಗೆ ಚಾಲನೆ ನೀಡಿದರು‌. ಬಳಿಕ ಶೋಭಾಯಾತ್ರೆಯು ಉಡುಪಿ ಜೋಡುಕಟ್ಟೆಯಿಂದ – ಕವಿ ಮುದ್ದಣ್ಣ ಮಾರ್ಗ – ಶಿರಿಬೀಡು, ಕಲ್ಸಂಕ ಮಾರ್ಗವಾಗಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ಶಾಸಕ ಕೆ. ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ರವಿರಾಜ್ ಆಚಾರ್ಯ, […]