ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಆದ ಕಾರ್ಕಳ‌ ಉತ್ಸವ: ವಿ ಸುನಿಲ್ ಕುಮಾರ್

ಕಾರ್ಕಳ: ಹತ್ತು ದಿನಗಳ ಕಾಲ ವೈಭವವಾಗಿ ಸಂಪನ್ನಗೊಂಡ ಹಲವು ಹೆಗ್ಗಳಿಕೆಯ “ಕಾರ್ಕಳ ಉತ್ಸವ” ಈಗ ರಾಜ್ಯದ ಸಾಂಸ್ಕೃತಿಕ  “ಬ್ರ್ಯಾಂಡ್” ಆಗಿ ಪರಿವರ್ತನೆಗೊಂಡಿದೆ ಎಂದು ಇಂಧನ, ಕನ್ನಡ, ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮಾ.೧೦ ರಿಂದ ೨೦ರ ವರೆಗೆ ನಡೆದ ಕಾರ್ಕಳ ಉತ್ಸವ ಈಗ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಾತ್ರವಲ್ಲ‌ ಕಾರ್ಕಳವನ್ನು ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉತ್ಸವವನ್ನು ಆಯೋಜಿಸಬೇಕೆಂಬ ಕಲ್ಪನೆ ಹುಟ್ಟಿದ್ದೆ ಒಂದು ವಿಶೇಷ ಸಂದರ್ಭದಲ್ಲಿ. […]

ಮೂಡುಪೆರಂಪಳ್ಳಿ ಕಂಬಿಗಾರ ಬಬ್ಬುಸ್ವಾಮಿ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ

ಮಣಿಪಾಲ: ಮೂಡುಪೆರಂಪಳ್ಳಿ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಗುಡಿಯ ಶೀಲಾನ್ಯಾಸ ಕಾರ್ಯಕ್ರಮವು ಸನ್ನಿಧಾನದಲ್ಲಿ ನಡೆಯಿತು. ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿ ಕಾಡುಬೆಟ್ಟು ಶನೈಶ್ಚರ ದೇವಸ್ಥಾನ ಟ್ರಸ್ಟ್: ವಾರ್ಷಿಕ ಮಹೋತ್ಸವ

ಉಡುಪಿ: ಶ್ರೀ ಅಬ್ಬಗ ಧಾರಗ ವೀರಭದ್ರ ಮತ್ತು ಶನೈಶ್ಚರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು ಉಡುಪಿ ಇದರ ವಾರ್ಷಿಕ ಮಹೋತ್ಸವ (ವರ್ಧಂತಿ) ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಕೊರಂಗ್ರಪಾಡಿ ವಿದ್ವಾನ್  ಕೆ.ಪಿ. ಕುಮಾರ್, ಗುರು ತಂತ್ರಿ, ಮಾರ್ಗದರ್ಶನದಲ್ಲಿ ಶ್ರೀ ದೇವರ ದಿವ್ಯ ಸನ್ನಿಧಿಯಾದ ಸಹಪಾರಿವಾರ ಗರ್ಭಿತ ಶ್ರೀ ವೀರಭದ್ರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾಥನೆ, ನವಕ ಕಲಾಭಿಷೇಕ, ಗಣಪತಿ ಪ್ರೀತ್ಯರ್ಥ ಗಣಯಾಗ, ಶ್ರೀ ನಾಗದೇವರಿಗೆ ಪವಮಾನ ಕಲಶಾಭಿಷೇಕ ನೆಡೆಯಿತು. ಶ್ರೀ ಶನೈಶ್ಚರ ದೇವರರಿಗೆ ಪ್ರಧಾನ ಕಲಾಭಿಷೇಕ, ಸಾನಿಧ್ಯ ಹೋಮ ಮತ್ತು […]

ಕಾರ್ಕಳ ಉತ್ಸವ: ಮಾ.22ರ ವರೆಗೆ ಮುಂದುವರಿಕೆ

ಕಾರ್ಕಳ: ಕಾರ್ಕಳ ಉತ್ಸವದ ಆಹಾರ ಮೇಳ, ವಸ್ತು ಪ್ರದರ್ಶನ ಹಾಗೂ ದೀಪಾಲಂಕಾರವನ್ನು ಮಾ. 22 ಮಂಗಳವಾರದವರೆಗೆ ಮುಂದುವರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಾರ್ಕಳ ಉತ್ಸವವು ಮಾ.10ರಿಂದ 20ರ ವರೆಗೆ ನಡೆಯಲು ನಿರ್ಧಾರ ಹೊಂದಿದ್ದು, ಆದರೆ ಬಹು ಜನರ ಬೇಡಿಕೆ ಮೇರೆಗೆ ಪುನಃ 2 ದಿನ ಹೆಚ್ಚುವರಿ ನಡೆಯಲಿದೆ.

ಭಾರತೀಯ ಸದ್ಚಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ

ಉಡುಪಿ: ನೆರೆಯ ಕೇರಳದವನಾಗಿದ್ದರೂ ಉಡುಪಿ ಭೇಟಿಯ ಕನಸು ಬಹಳ ತಡವಾಗಿ ನನಸಾಗುತ್ತಿದೆ. ಕಳೆದ ಹಲವು ಶತಮಾನಗಳಿಂದ ಭಾರತೀಯ ಸನಾತನ ಸದ್ವಿಚಾರಗಳ ಮೇಲೆ ಉಡುಪಿ ಮಠಗಳ ಪ್ರಭಾವ ಮಹತ್ತರವಾದುದು. ಇವತ್ತು ಶ್ರೀ ಕೃಷ್ಣನ ದರ್ಶನ ಹಾಗೂ ಸ್ವಾಮೀಜಿಯವರ ದರ್ಶನದಿಂದ ಅತ್ಯಂತ ಸಂತೋಷಗೊಂಡಿದ್ದೇನೆ. ಈ ಹಿಂದೆ 1978 ರಲ್ಲಿ ಕೇರಳದಲ್ಲಿ ಸನಾತನ ಧರ್ಮರಕ್ಷಣೆಯ ಸಲುವಾಗಿ ಬೃಹತ್ ಸಂತ ಸಮಾವೇಶ ಮತ್ತು ಹಿಂದು ಸಂಗಮ ನಡೆದಾಗ ಶ್ರೀ ವಿಶ್ವೇಶತೀರ್ಥ ಶ್ರೀಪಾದರೇ ನೇತೃತ್ವ ವಹಿಸಿ ನೀಡಿದ ಮಾರ್ಗದರ್ಶನ ಅವಿಸ್ಮರಣೀಯ. ಆ ಧರ್ಮೋತ್ಸವದಲ್ಲಿ ಸಂಯೋಜಕ […]