ಎ.14 ರಿಂದ 16ರ ವರೆಗೆ ಕೆಳಾರ್ಕಳಬೆಟ್ಟು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಬ್ರಹ್ಮಕಲಶೋತ್ಸವ- ಹನುಮ ಜಯಂತಿ ಉತ್ಸವ

ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿನಗರ ಕೆಳಾರ್ಕಳಬೆಟ್ಟು ಇದರ ಶ್ರೀ ದೇವರ ನೂತನ ರಜತ ಬಿಂಬ ಪ್ರತಿಷ್ಠೆ ಪ್ರಯುಕ್ತ ಬ್ರಹ್ಮಕಲಶೋತ್ಸವ ಮತ್ತು ಹನುಮ ಜಯಂತಿ ಉತ್ಸವ ಏಪ್ರಿಲ್‌ 13 ರಿಂದ 16 ರವರಗೆ ನಡೆಯಲಿದೆ ಎಂದು ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್‌ ಶೆಟ್ಟಿ ಬೆಳ್ಕಲೆ ಹೇಳಿದರು. ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್‌ 14 ರಂದು ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ವೀರ ಮಾರುತಿ ದೇವರ ಪುನಃ ಪ್ರತಿಷ್ಠೆ ನಡೆಯಲಿದೆ. ಏಪ್ರಿಲ್‌ 16 […]

ಎ.8 ರಿಂದ ಸಗ್ರಿ ದೇವಳದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ

ಉಡುಪಿ: ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.8 ರಿಂದ 11ರವರೆಗೆ ನವನಿರ್ಮಿತ ಶ್ರೀನಾಗದೇವರ ಗುಡಿ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಸಗ್ರಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮ ಕಲಶೋತ್ಸವ, ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ಕೆ.ರಘುಪತಿ ಭಟ್, ಪ್ರತಿದಿನ ನಡೆಯುವ ಧರ್ಮಸಭೆಗಳಲ್ಲಿ ಅನೇಕ ಮಠಾಧೀಶರು, ಮಂತ್ರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಆ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ […]

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ- ಗ್ರಾಮ ಭಜನೆ’ ಉದ್ಘಾಟನೆ

ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ- ಗ್ರಾಮ ಭಜನೆ’ಯನ್ನು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಶನಿವಾರ  ಉದ್ಘಾಟಿಸಿದರು. ದೇವಸ್ಥಾನವೊಂದು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುವಾಗ ಜಾತಿಮತ ಭೇದವಿಲ್ಲದೆ ಆ ಗ್ರಾಮದ ಎಲ್ಲಾ ಭಕ್ತರ ಮನೆಗಳಲ್ಲಿ ಭಜನೆ ಮಾಡುವುದು ವಿಶಿಷ್ಟ ಕಲ್ಪನೆಯ ಕ್ರಾಂತಿಯಾಗಿದೆ. ನಾವು ಬೇರೆ ಬೇರೆ ರೀತಿಯ ಭಜನೆಗಳನ್ನು ಕಂಡಿದ್ದೇವೆ. ಇದು ಮಾತ್ರ ವಿಶಿಷ್ಟವಾದುದು. ಇದರಿಂದ  ದೇವಸ್ಥಾನದ ಜತೆ ಮನೆಗಳಲ್ಲಿಯೂ ಸಾನಿಧ್ಯ ವೃದ್ಧಿ ಯಾಗುತ್ತದೆ ಎಂದು ಶ್ರೀಪಾದರು ಹೇಳಿದರು. ದೇವಸ್ಥಾನದ […]

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹರಿದು ಬಂತು ದಾಖಲೆಯ ಹೊರೆಕಾಣಿಕೆ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪುನರ್ ಪ್ರತಿಷ್ಟೆ, ಬ್ರಹ್ಮಕಲಶೋತ್ಸವ ಹಾಗೂ ಚತುಃಪವಿತ್ರ ನಾಗಬ್ರಹ್ಮಮಂಡಲೋತ್ಸವಕ್ಕೆ ಸಮಸ್ತ ಮೊಗವೀರ ಕುಲಭಾಂದವರಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ಸಮರ್ಪಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಆಗಮಿಸಿದ ದಕ್ಷಿಣ ವಿಭಾಗದ ಹೊರೆಕಾಣಿಕೆ ಮೆರವಣಿಗೆಯನ್ನು ಎರ್ಮಾಳ್ ನಲ್ಲಿ, ಉತ್ತರದ ಶಿರೂರು ಗಡಿಭಾಗದಿಂದ ಮೊದಲ್ಗೊಂಡು ಆಗಮಿಸಿದ ಉಡುಪಿ ಜಿಲ್ಲೆಯ ಹೊರೆ ಕಾಣಿಕೆ ಮೆರವಣಿಗೆಗೆ ಮುಳೂರಿನಲ್ಲಿ ಚಾಲನೆ ನೀಡಲಾಗಿದೆ. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶ‌ ಸಮಿತಿ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಸಹಿತ ದ.ಕ. […]

ಪುತ್ತಿಗೆ ಶ್ರೀ ನಡೆದಾಡುವ ಭಗವದ್ಗೀತೆ: ಪೇಜಾವರ ಶ್ರೀ 

ಬೆಂಗಳೂರು: ಪುತ್ತಿಗೆ ಶ್ರೀಪಾದರು ನಡೆದಾಡುವ ಭಗವದ್ಗೀತೆ. ಭಗವಂತನ ಸಂದೇಶವನ್ನು ವಿದೇಶದ ಭಕ್ತರಿಗೂ ಸಾರಿದವರು ಎಂದು ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು. ಗುರುವಾರ ನಗರದ. ಬಸವನಗುಡಿ ರಾಮಕೃಷ್ಣ ಆಶ್ರಮದ ಸಮೀಪದ ಗುರುನರಸಿಂಹ ಕಲ್ಯಾಣಮಂಟಪದಲ್ಲಿ ಶ್ರೀಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಬೆಂಗಳೂರು ಅಭಿಮಾನಿಗಳು ಮತ್ತು ಶಿಷ್ಯವೃಂದದವರು ಆಯೋಜಿಸಿದ್ದ `ಗುರು ವಂದನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಗಳದ್ದು. ಮೇರು ವ್ಯಕ್ತಿತ್ವ. ಅವರ ಮುಂದೆ ನಾವೆಲ್ಲರೂ ಕುಬ್ಜರಾಗಿ ಕಾಣುತ್ತೇವೆ. ಸುಜ್ಞಾನೇಂದ್ರತೀರ್ಥ ಅನಂತರದಲ್ಲಿ ಮಠವನ್ನು ಸಮರ್ಥವಾಗಿ ನಿರ್ವಹಿಸಿದರು ಎಂದರು. ಆದರ್ಶ ಗುರು ಶಿಷ್ಯರು : […]