ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಮನ್ಮಹಾರಥೋತ್ಸವ

ಬ್ರಹ್ಮಾವರ: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಎಪ್ರಿಲ್ 22ರಂದು ಪೂರ್ವಾಹ್ನ ಶತ ರುದ್ರಾಭಿಷೇಕ, ಮಧ್ಯಾಹ್ನ ಶ್ರಿ ಮನ್ಮಹಾರಥಾರೋಹಣ, ಅನ್ನಸಂತರ್ಪಣೆ, ಸಂಜೆ ರಥೋತ್ಸವ, ಡಮರು ಸೇವೆ, ಕೆರೆ ಉತ್ಸವ, ಗಿರಿಜಾ ಕಲ್ಯಾಣ, ಭೂತ ಬಲಿ, ಎಪ್ರಿಲ್ 23ರಂದು ಬೆಳಗ್ಗೆ ತುಲಾಭಾರ, ರಾತ್ರಿ ಓಕುಳಿ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಬ್ರಹ್ಮಾವರ: ಮಕ್ಕಳನ್ನು ಅಂಕಕ್ಕೆ ಸಮೀತಗೊಳಿಸದೆ, ಅವರಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಮಾಜಮುಖಿ ಉದ್ದೇಶ ಬೆಳೆಸಬೇಕು. ಪ್ರಾಮಾಣಿಕ, ಸಾತ್ವಿಕ ಜೀವನದಿಂದ ಸಾರ್ಥಕ ಬದುಕು ಸಾಧ್ಯತೆ ಇದೆ ಎಂದು ಶ್ರೀ ಛಲವಾದಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಬಸವನಾಗಿ ದೇವ ಸ್ವಾಮೀಜಿ ಹೇಳಿದರು. ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಆಡಳಿತ ಮಂಡಳಿ ಧರ್ಮದರ್ಶಿ ಗೋಕುಲ್‍ದಾಸ್ ಬಾರಕೂರು ಮಾತನಾಡಿ, ದೇವಸ್ಥಾನದ ಚಾಕರಿಗೆ ಮಾತ್ರ […]
ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ: ವಿಜೃಂಭಣೆಯ ಶ್ರೀ ಮನ್ಮಹಾರಥೋತ್ಸವ

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಶ್ರೀ ಮನ್ಮಹಾರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ವಾದ್ಯಘೋಷಗಳು, ತಾಲೀಮು ಪ್ರದರ್ಶನ, ತಟ್ಟಿರಾಯ ಮುಂತಾದ ವಿಶೇಷತೆಗಳು ಉತ್ಸವಕ್ಕೆ ಮೆರಗು ತಂದಿದೆ. ರಥೋತ್ಸವ ಮೆರವಣಿಗೆಯ ನಂತರ ವಿಶೇಷ ಸುಡುಮದ್ದಿನ ಪ್ರದರ್ಶನವನ್ನು ಜಾತ್ರೆಯ ಮೆರುಗನ್ನು ಹೆಚ್ಚಿಸಿತು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್. ಚಂದ್ರಶೇಖರ ಅಡಿಗ, ಎನ್. ಕೃಷ್ಣ ಅಡಿಗ, ಎನ್. ರಾಘವೇಂದ್ರ ಅಡಿಗ, […]
ಹಿರಿಯಡಕ ರಥೋತ್ಸವದ ಮೆರವಣಿಗೆಯ ಸುಂದರ ಚಿತ್ರಗಳು

ಹಿರಿಯಡ್ಕ: ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ರಥೋತ್ಸವ ಮೆರವಣಿಗೆಯು ಎ.19 ರಂದು ಅದ್ದೂರಿಯಾಗಿ ನಡೆಯಿತು. ಹಿರಿಯಡ್ಕ ಶಬರಿ ಸ್ಟುಡಿಯೋ ಕ್ಲಿಕ್ಕಿಸಿದ ಸುಂದರವಾದ ರಥೋತ್ಸವ ಮೆರವಣಿಗೆಯ ಚಿತ್ರಗಳು..
ಉಡುಪಿ ಶ್ರೀ ಕೃಷ್ಣಮಠಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

ಉಡುಪಿ: ಶ್ರೀಕೃಷ್ಣಮಠಕ್ಕೆ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಎ.19 ರಂದು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದು, ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಉಡುಪಿ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್, ಕಾಪು ಶಾಸಕರಾದ ಲಾಲಾಜಿ ಮೆಂಡನ್, ಮುಖಂಡರಾದ ಉದಯಕುಮಾರ್ ಶೆಟ್ಟಿ, ಮಠದ ದಿವಾನರಾದ ವರದರಾಜ ಆಚಾರ್, ಪರ್ಯಾಯ ಸಮಿತಿಯ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.