ಗ್ರಾಮಾಭಿವೃದ್ದಿಯ ಹರಿಕಾರ ಧರ್ಮದರ್ಶಿ “ಶ್ರೀ ವೀರೇಂದ್ರ ಹೆಗ್ಗಡೆ”ಯವರಿಗೆ ರಾಜ್ಯಸಭೆ ನಾಮಾಂಕನದ ಗೌರವ

ನವೆಂಬರ್ 25, 1948 ರಂದು ಪ್ರಕೃತಿಯ ಒಡಲಲ್ಲಿ ಧರ್ಮದೇವತೆ ಶ್ರೀ ಮಂಜುನಾಥ ನೆಲೆಯಾದ ಪವಿತ್ರ ಭೂಮಿಯಲ್ಲಿ ಜನನ. ಕಡು ಕುಗ್ರಾಮವಾದ ಹಳ್ಳಿಯಲ್ಲಿ ಸೌಕರ್ಯಗಳೇ ಇಲ್ಲದಿದ್ದ ಕಾಲವದು. ಕುಡುಮ ಎಂಬ ಪುಟ್ಟ ಹಳ್ಳಿಯನ್ನು ಧರ್ಮಸ್ಥಳವಾಗಿಸಿ ದೇಶ ವಿದೇಶದ ಭಕ್ತ ಸಾಗರ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ ಕೀರ್ತಿ ಶ್ರೀಯುತ ವೀರೇಂದ್ರ ಹೆಗ್ಗಡಿಯವರಿಗಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ತಂದೆ ರತ್ನವರ್ಮ ಹೆಗ್ಗಡೆಯವರು ನಿಧನರಾದಾಗ ವೀರೇಂದ್ರ ಹೆಗ್ಗಡೆಯವರು ಇನ್ನೂ ಹದಿಹರೆಯದ ಹುಡುಗ. ಎಳವೆಯಲ್ಲೇ ಕ್ಷೇತ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಇವರು […]

ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರ, ದೊಡ್ಡಣ್ಣಗುಡ್ಡೆ ಇದರ 16 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಉಡುಪಿ: ಶ್ರಿ ಚಕ್ರಪೀಠ ಸುರಪೂಜಿತ, ಶ್ರೀ ದುರ್ಗಾ ಆದಿ ಶಕ್ತಿ ಕ್ಷೇತ್ರ, ದೊಡ್ಡಣ್ಣಗುಡ್ಡೆ ಇದರ 16 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ದಿನಾಂಕ 15 ಮೇ ರವಿವಾರದಿಂದ 17 ಮೇ ಮಂಗಳವಾರದವರೆಗೆ ನಡೆಯಲಿದೆ. ಮೇ 15 ರವಿವಾರದಂದು ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ವಾಸ್ತು ರಾಕ್ಷೋಘ್ನಾದಿ ಪ್ರಕ್ರಿಯೆ, ಆದಿವಾಸ ಪ್ರಕ್ರಿಯೆ ಜರುಗಲಿದೆ. ಮೇ16 ಸೋಮವಾರದಂದು ಬೆಳಿಗ್ಗೆ 7ರಿಂದ ಸಪರಿವಾರ ದೇವರುಗಳ ಪ್ರಧಾನ ಹೋಮ, ಕಲಶಾಭಿಷೇಕ. ಬೆಳಿಗ್ಗೆ 9.32ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ […]

ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಮನ್ಮಹಾರಥೋತ್ಸವ

ಬ್ರಹ್ಮಾವರ: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಎಪ್ರಿಲ್ 22ರಂದು ಪೂರ್ವಾಹ್ನ ಶತ ರುದ್ರಾಭಿಷೇಕ, ಮಧ್ಯಾಹ್ನ ಶ್ರಿ ಮನ್ಮಹಾರಥಾರೋಹಣ, ಅನ್ನಸಂತರ್ಪಣೆ, ಸಂಜೆ ರಥೋತ್ಸವ, ಡಮರು ಸೇವೆ, ಕೆರೆ ಉತ್ಸವ, ಗಿರಿಜಾ ಕಲ್ಯಾಣ, ಭೂತ ಬಲಿ, ಎಪ್ರಿಲ್ 23ರಂದು ಬೆಳಗ್ಗೆ ತುಲಾಭಾರ, ರಾತ್ರಿ ಓಕುಳಿ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಬ್ರಹ್ಮಾವರ: ಮಕ್ಕಳನ್ನು ಅಂಕಕ್ಕೆ ಸಮೀತಗೊಳಿಸದೆ, ಅವರಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಮಾಜಮುಖಿ ಉದ್ದೇಶ ಬೆಳೆಸಬೇಕು. ಪ್ರಾಮಾಣಿಕ, ಸಾತ್ವಿಕ ಜೀವನದಿಂದ ಸಾರ್ಥಕ ಬದುಕು ಸಾಧ್ಯತೆ ಇದೆ ಎಂದು ಶ್ರೀ ಛಲವಾದಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಬಸವನಾಗಿ ದೇವ ಸ್ವಾಮೀಜಿ ಹೇಳಿದರು. ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಆಡಳಿತ ಮಂಡಳಿ ಧರ್ಮದರ್ಶಿ ಗೋಕುಲ್‍ದಾಸ್ ಬಾರಕೂರು ಮಾತನಾಡಿ, ದೇವಸ್ಥಾನದ ಚಾಕರಿಗೆ ಮಾತ್ರ […]

ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ: ವಿಜೃಂಭಣೆಯ ಶ್ರೀ ಮನ್ಮಹಾರಥೋತ್ಸವ

ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಶ್ರೀ ಮನ್ಮಹಾರಥೋತ್ಸವ ಬುಧವಾರ ವಿಜೃಂಭಣೆಯಿಂದ  ನಡೆಯಿತು. ವಾದ್ಯಘೋಷಗಳು, ತಾಲೀಮು ಪ್ರದರ್ಶನ, ತಟ್ಟಿರಾಯ ಮುಂತಾದ ವಿಶೇಷತೆಗಳು ಉತ್ಸವಕ್ಕೆ ಮೆರಗು ತಂದಿದೆ. ರಥೋತ್ಸವ ಮೆರವಣಿಗೆಯ ನಂತರ ವಿಶೇಷ ಸುಡುಮದ್ದಿನ ಪ್ರದರ್ಶನವನ್ನು ಜಾತ್ರೆಯ ಮೆರುಗನ್ನು ಹೆಚ್ಚಿಸಿತು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್. ಚಂದ್ರಶೇಖರ ಅಡಿಗ, ಎನ್. ಕೃಷ್ಣ ಅಡಿಗ, ಎನ್. ರಾಘವೇಂದ್ರ ಅಡಿಗ, […]