ಮಾ.25 ರಿಂದ 27: ಹಿರಿಯಡಕ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಸ್ಥಾನದಲ್ಲಿ ಸಿರಿಸಿಂಗಾರದ ನೇಮೋತ್ಸವ 

ಹಿರಿಯಡಕ: ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ 6ನೇ ವರ್ಷದ ಸಿರಿ ಸಿಂಗಾರದ ನೇಮೋತ್ಸವ ಕಾರ್ಯಕ್ರಮಗಳು ಮಾ.25 ರಿಂದ ಮಾ.27ರ ವರೆಗೆ ಹಿರಿಯಡಕ‌ ಪಡುಭಾಗದಲ್ಲಿ (ಪಡಂ‌) ನಡೆಯಲಿದೆ. ಮಾ.25 ರಂದು ಪೂರ್ವಾಹ್ನ 8 ಗಂಟೆಗೆ ಕ್ಷೇತ್ರಶುದ್ದಿ, ಕಲಶಾರಾಧನೆ, ಪ್ರಾರಂಭ ಪೂಜೆ ಪೂರ್ವಾಹ್ನ ಗಂಟೆ 9.00ಕ್ಕೆ : ಮಹಾಚಪ್ಪರದ ಗಜಕಂಬ ಪ್ರತಿಷ್ಠೆ ಪೂರ್ವಾಹ್ನ ಗಂಟೆ 11.00ಕ್ಕೆ : ಕಂಬಿಗಾರ ದರ್ಶನ ಪೂರ್ವಾಹ್ನ ಗಂಟೆ 11.30ಕ್ಕೆ : ಮಹಾಚಪ್ಪರ ಆರೋಹಣ ಅಪರಾಹ್ನ ಗಂಟೆ 12.30ಕ್ಕೆ : ಮಹಾ ಅನ್ನ ಸಂತರ್ಪಣೆ […]

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಪೆರ್ಡೂರು: ಶ್ರೀ ಕ್ಷೇತ್ರ ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ರಥೋತ್ಸವವು ಕೊರಂಗ್ರರಪಾಡಿ ಶ್ರೀ ಕೆ. ಜಿ. ವಿಠ್ಠಲ್ ತಂತ್ರಿಯವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಜಾತ್ರಾ ಮಹೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.

ಅಯೋಧ್ಯೆಯಲ್ಲಿ 25000 ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ ನಿರ್ಮಾಣ: ಪೇಜಾವರ ಶ್ರೀ

ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳ‌ಕುರಿತು ಮಾಹಿತಿ ನೀಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆಯುತ್ತಿದ್ದು ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಗೆಗಳನ್ನು ಅಳವಡಿಸುವ […]

ಶ್ರೀ ಧೂಮಾವತಿ ದೈವಸ್ಥಾನ ಬೈಲೂರು: ದೈವಸ್ಥಾನಗಳ ಜೀರ್ಣೋದ್ಧಾರದಿಂದ ನಾಡು ಅಭಿವೃದ್ಧಿ: ಶಾಸಕ ರಘುಪತಿ ಭಟ್

ಉಡುಪಿ: ತುಳುನಾಡು ವಿಶ್ವದಾದ್ಯಂತ ಹೆಸರು ಪಡೆದಿದೆ. ಪ್ರಸ್ತುತ ನಶಿಸಿ ಹೋದ ದೈವಸ್ಥಾನ, ದೇವಸ್ಥಾನಗಳನ್ನು ಹುಡುಕಿ, ಜೀರ್ಣೋದ್ಧಾರ ಮಾಡುವ ಮೂಲಕ ನಮ್ಮ ನಾಡು ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದ ಶ್ರೀ ಧೂಮಾವತಿ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇರಳದ ಜ್ಯೋತಿಷ ವಾಚಸ್ಪತಿ ದೈವಜ್ಞ ಎ.ವಿ. ಮಾಧವನ್ ಪೊದುವಾಳ್ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು. ತಂತ್ರಿಗಳಾದ […]

ಇಂದು ವಿ.ಹಿಂ.ಪ. ಮತ್ತು ಬಜರಂಗದಳ ಘಟಕದ ವತಿಯಿಂದ ಪೆರ್ಡೂರು ಜಾತ್ರಾ ಮಹೋತ್ಸವದ ಆರಾಟೋತ್ಸವದ ಪ್ರಯುಕ್ತ ಧಾರ್ಮಿಕ ಮತ್ತು ಮನೋರಂಜನಾ ಕಾರ್ಯಕ್ರಮ

ಪೆರ್ಡೂರು: ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಪೆರ್ಡೂರು ಘಟಕ ಇವರ ವತಿಯಿಂದ ಮಹತೋಭಾರ ಶ್ರೀ ಅನಂತಪದ್ಮನಾಭ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಆರಾಟೋತ್ಸವದಂದು ಮಾ.18 ಸಂಜೆ 7 ಗಂಟೆಗೆ ಆರಾಟಕಟ್ಟೆ ಬಳಿ ಧಾರ್ಮಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಹಿನ್ನೆಲೆ ಗಾಯಕ ಮೂಲ್ಕಿ ರವೀಂದ್ರ ಪ್ರಭು ಮತ್ತು ಬಳಗದವರಿಂದ ‘ರಾಗ್ ರಂಗ್’ ಭಕ್ತಿ, ಭಾವ, ಜಾನಪದ ಗೀತೆಗಳು ಸುಗಮ ಸಂಗೀತ ಕಾರ್ಯಕ್ರಮ ತದನಂತರ ‘ಬೃಹತ್ […]