ಕೋಟ: ಕಡಲ ಕಿನಾರೆಯಲ್ಲಿ‌‌ ಮೊಳಗಿತು ವಿಷ್ಣು ಸಹಸ್ರನಾಮ

ಉಡುಪಿ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.ಕೋಟ ಮಣೂರು ಪಡುಕರೆ ಸಮುದ್ರ ದಡದಲ್ಲಿ ಪ್ರಾಕೃತಿಕ ವಿಕೋಪಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ತಡೆ, ಧರ್ಮ ಜಾಗೃತಿ, ಪರಿಸರ ಸಂರಕ್ಷಣೆಗೆ ಸಹಸ್ರನಾಮ ಪಠಣ ಪೂರಕವಾಗಿದೆ. ಮನುಕುಲದ ಒಳಿತಿಗೆ ಧಾರ್ಮಿಕ ಕೈಂಕರ್ಯ ಹೆಚ್ಚಿನ ಶಕ್ತಿ ನೀಡಲಿದೆ ಇಂಥಹ ಕಾರ್ಯಗಳು ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು. ಸಮುದ್ರ […]

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಉಡುಪಿ: ಕರಾವಳಿಯ ಹೆಸರಾಂತ ಸುದ್ದಿಜಾಲತಾಣ ಉಡುಪಿXPRESS ನಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೂ ಈ ಸಂಭ್ರಮದ ದೀಪಾವಳಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭಾಶಯಗಳು.

ಉಡುಪಿ: ತಿರುಮಲ ಸನ್ನಿಧಿಯಲ್ಲಿ ನಡೆದ ಲಡ್ಡೂಪ್ರಸಾದ ಘಟನೆ ಅತ್ಯಂತ ಖಂಡನೀಯ: ಪುತ್ತಿಗೆ ಶ್ರೀ

ಉಡುಪಿ: ಹಿಂದೂ ಧರ್ಮೀಯರ ಅತ್ಯಂತ ಪ್ರಮುಖ ಶ್ರದ್ಧಾಕೇಂದ್ರವಾದ ತಿರುಪತಿಯ ಶ್ರೀವೇಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಪ್ರಸಾದವನ್ನು ಕಲಬೆರಕೆಯ ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರವನ್ನು ಮಾಡಲಾಗಿದೆ. ಈ ಮೂಲಕ ಬಹು ದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಿದ್ದು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ. ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ಸಂರಕ್ಷಣೆಗಾಗಿ […]

ಗಣೇಶ ಚುತುರ್ಥಿಯ ವಿಶೇಷ, ಸ್ವಾರಸ್ಯಗಳನ್ನು ತಿಳಿದುಕೊಳ್ಳೋಣ.

ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದರೆ ಲೋಕವೆಲ್ಲಾ ಬೆಳಗುವ ಹಬ್ಬ. ಗಣೇಶನನ್ನು ಕಣ್ತುಂಬಿಕೊಂಡು ಭಕ್ತರು ಸಂತಸ ಪಡುವ ಹಬ್ಬ. ಈ ಹಬ್ಬದ ಆಚರಣೆಗಳ ಹಿನ್ನೆಲೆ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ಇದು ಪ್ರೀತಿಯ ಆನೆಯ ತಲೆಯ ದೇವತೆಯಾದ ಗಣೇಶನ ಜನ್ಮವನ್ನು ಗೌರವಿಸುತ್ತದೆ. ಇದು ಜನನ, ಜೀವನ ಮತ್ತು ಮರಣದ ಚಕ್ರವನ್ನು ಸಂಕೇತಿಸುತ್ತದೆ ಮತ್ತು ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಸಂಕೀರ್ಣವಾಗಿ ಅಲಂಕರಿಸಿದ ವಿಗ್ರಹಗಳನ್ನು ಸ್ಥಾಪಿಸುವ ಮೂಲಕ ಗುರುತಿಸಲಾಗುತ್ತದೆ. ಗಣೇಶನು ರಕ್ಷಣೆ, ನಿಷ್ಠೆ, ಬುದ್ಧಿವಂತಿಕೆ, ಅದೃಷ್ಟ […]

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು..

ಉಡುಪಿ: ನಾಡಿನ ಸಮಸ್ತ ಜನತೆಗೆ, ಹಾಗೂ ನಮ್ಮ ಗ್ರಾಹಕರಿಗೆ, ಬಂದು-ಮಿತ್ರರಿಗೆ, ಹಿತೈಷಿಗಳಿಗೆ ಕರಾವಳಿಯ ಜನಪ್ರಿಯ ಸುದ್ದಿ ಜಾಲತಾಣ “ಉಡುಪಿ ಎಕ್ಸ್ಪ್ರೆಸ್” ನಿಂದ ಶ್ರೀ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೂ ನಾಡಿನ ಗಣ್ಯರು ನಮ್ಮ ಸುದ್ದಿಯ ಮೂಲಕ ಸಮಸ್ತ ಜನತೆಗೆ ಶುಭ ಹಾರೈಸಿದ್ದಾರೆ.