ದೇವಾಲಯಗಳ ಒಳಗಡೆ ಮೊಬೈಲ್ ಫೋನ್ ಬಳಕೆ ನಿಷೇಧ 

ಬೆಂಗಳೂರು: ರಾಜ್ಯದ ಮುಜುರಾಯಿ ವ್ಯಾಪ್ತಿಗೆ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ಪ್ರಕಟಿಸಿದೆ. ಕರ್ನಾಟಕದ ದೇವಾಲಯಗಳ ಒಳಗಡೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಮೊಬೈಲ್ ಬಳಕೆ ನಿಷೇಧದ ಬಗ್ಗೆ ಈ ಹಿಂದೆ ಕೂಡ ಸಾಕಷ್ಟು ಚರ್ಚೆ ನಡೆದಿದ್ದು, ಈಗ ಅಧಿಕೃತವಾಗಿ ಮೊಬೈಲ್‌ ಫೋನ್‌ ಬಳಕೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿಷೇಧಹೇರಿ ಆದೇಶ ಪ್ರಕಟಿಸಿದೆ. ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆ ಮಿತಿ […]

ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರ: ಮೇಷ ಹಾಗೂ ವೃಷಭ ರಾಶಿಯವರ ಫಲಗಳು

ವೈದಿಕ ಜ್ಯೋತಿಷ್ಯದಲ್ಲಿ, ಎಲ್ಲಾ ಗ್ರಹಗಳ ಬಗ್ಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅವುಗಳ ಚಲನೆಗಳು ವ್ಯಕ್ತಿಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತವೆ. ಆತ್ಮದ ಅಂಶವಾದ ಸೂರ್ಯನು ಜುಲೈ ತಿಂಗಳಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಿದ್ದಾನೆ. ಸೂರ್ಯನ ಸಂಚಾರವು ವ್ಯಕ್ತಿಗಳ ಜೀವನದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಸೂರ್ಯ 17 ಜುಲೈ 2023 ರಂದು ಬೆಳಿಗ್ಗೆ 04.59 ಕ್ಕೆ ಮಿಥುನ ರಾಶಿಯಿಂದ ಹೊರಟು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರನು ಕರ್ಕ ರಾಶಿಯ ಅಧಿಪತಿ ಮತ್ತು ಸೂರ್ಯನು ಸ್ನೇಹ ಗ್ರಹ. […]

ಮಂಗಳೂರು ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ಆಶ್ರಯದಲ್ಲಿ ನಾಳೆಯಿಂದ 18 ದಿನಗಳ ತುಳು ಭಗವದ್ಗೀತೆ ಪ್ರವಚನ

ಮಂಗಳೂರು: ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ, ಕುಳಾಯಿ ಮಂಗಳೂರು ಇದರ ಆಶ್ರಯದಲ್ಲಿ ಜುಲೈ 3 ರಿಂದ ಬೆಳಗ್ಗೆ 6 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ 18 ದಿವಸಗಳ ಉಚಿತವಾಗಿ ನಡೆಯುವ ತುಳು ಭಗವದ್ಗೀತೆ ಪ್ರವಚನದ 38ನೇ ಬ್ಯಾಚ್ ನಡೆಯಲಿದೆ. ಭಗವದ್ಗೀತೆಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ಸುವರ್ಣ ಅವಕಾಶ ಇಲ್ಲಿದೆ. https://chat.whatsapp.com/JtIbDzma2xtIyp3rFnFWJS ಭಗವದ್ಗೀತೆಯ ಪ್ರವಚನ ಪಡೆದುಕೊಳ್ಳಲು ಈ ಮೇಲಿನ ಲಿಂಗನ್ನು ಕ್ಲಿಕ್ ಮಾಡಿ ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಬಹುದು.

ಇಂದಿನಿಂದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ‘ವಿರಾಟ್ ರಾಮಾಯಣ ‘ದ ನಿರ್ಮಾಣ ಕಾರ್ಯ ಆರಂಭ

ಪಾಟ್ನಾ(ಬಿಹಾರ): ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಲಿರುವ ವಿರಾಟ್​ ರಾಮಾಯಣ ದೇವಾಲಯವು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾದಲ್ಲಿ ನಿರ್ಮಾಣವಾಗಲಿದೆ. ಮಹಾವೀರ ಮಂದಿರ ನ್ಯಾಸ್‌ನ ಮಹತ್ವಾಕಾಂಕ್ಷೆಯ ಯೋಜನೆಯ ವಿರಾಟ್ ರಾಮಾಯಣ ದೇವಾಲಯದ ನಿರ್ಮಾಣ ಕಾರ್ಯವು ಜೂನ್ 20 ಮಂಗಳವಾರದಿಂದ ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ದೊಡ್ಡ ಹೈಡ್ರಾಲಿಕ್ ಮತ್ತು ಇತರ ಯಂತ್ರಗಳು ಕೇಸರಿಯಾ – ಚಾಕಿಯಾ ರಸ್ತೆಯ ಕಥ್ವಾಲಿಯಾ-ಬಹುರಾದ ಜಾಂಕಿ ನಗರವನ್ನು ಈಗಾಗಲೇ ತಲುಪಿದೆ. ಇಂದು ಬೆಳಗ್ಗೆ 11.50 ಕ್ಕೆ ವಿಜಯ್ ಮುಹೂರ್ತದಲ್ಲಿ ಕೆಲಸ ಆರಂಭವಾಗಲಿದೆ. ಮೊದಲು ದೇವಸ್ಥಾನದ ಒಟ್ಟು […]

ಕೇಂದ್ರದ ‘ಪ್ರಸಾದ್ ಯೋಜನೆ’ಗೆ ಒಪ್ಪಿಗೆ; ಚಾಮುಂಡಿ ಬೆಟ್ಟದಲ್ಲಿ ,ಧಾರ್ಮಿಕ ಕ್ಷೇತ್ರದಲ್ಲಾಗುವ ಅಭಿವೃದ್ಧಿಗಳೇನು?

ಮೈಸೂರು : ಪ್ರವಾಸೋದ್ಯಮ ಇಲಾಖೆಯಿಂದ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಪ್ರಸಾದ್ ಯೋಜನೆ ಜಾರಿಗೆ ತಂದಿದೆ.ಚಾಮುಂಡಿ ಬೆಟ್ಟದಲ್ಲಿ ಪ್ರಸಾದ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವಾಸಸ್ಥಾನ ಚಾಮುಂಡಿ ಬೆಟ್ಟ ಆಯ್ಕೆಯಾಗಿತ್ತು. ಬೆಟ್ಟವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಂದಾಜು 45.75 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಆಡಳಿತಾತ್ಮಕವಾಗಿ ಕೇಂದ್ರ ಅನುಮೋದನೆ ನೀಡಿದೆ. ಈ ಹಿಂದೆ ಕೇಂದ್ರದ ಮಹತ್ವದ ಯೋಜನೆ ಪ್ರಸಾದ್‌ಗೆ […]