ಬದುಕಿಗೆ ಬಲ, ಯುಗಾದಿಯ ಫಲ: ಯುಗಾದಿ ವಿಶೇಷ ಬರಹ

ಯುಗಾದಿ ಎಂದರೆ ಹೊಸತರ ಸಮ್ಮಿಶ್ರಣ. ಈ ಯುಗಾದಿಯಲ್ಲಿ ಫಲವೂ ಸಿಗುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಪಂಚ ಎಂದರೆ ಐದು, ಅಂಗ ಎಂದರೆ ಭಾಗ, ವಾರ, ತಿಥಿ, ಯೋಗ, ನಕ್ಷತ್ರ ಮತ್ತು ಕರಣ ಇವೇ ಆ ಐದು ಅಂಗಗಳು. ಈ ಐದು ಭಾಗಗಳಿಂದ ಕೂಡಿದ ವಿವರವೇ ಪಂಚಾಂಗ, ಪಂಚ + ಅಂಗ = ಪಂಚಾಂಗ, ಇವುಗಳಲ್ಲಿ ಒಂದು ಭಾಗವನ್ನು ಬಿಟ್ಟರೂ ಪಂಚಾಂಗ ಶಾಸ್ತ್ರ ಪೂರ್ಣವಾಗುವುದಿಲ್ಲ. ಇದು ಐದು ಬೆರಳುಗಳ ಪೂರ್ಣಹಸ್ತವಿದ್ದಂತೆ. ಯಾವುದೇ ಶುಭ ಕಾರ್ಯವನ್ನು […]

ಬೇವು ಬೆಲ್ಲದ ಮೂಲಕ ಒಳಿತಿನ ಸಂದೇಶ ಸಾರುವ ಸಂಭ್ರಮದ ಯುಗಾದಿ: ಯುಗಾದಿ ಹಬ್ಬದ ವಿಶೇಷ ಬರಹ

ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ. ನಮ್ಮಹಿಂದೂಗಳಲ್ಲಿ ಹಬ್ಬಗಳ ಆಚರಣೆ ಬಹಳ ಇದೆ. ಅವುಗಳಲ್ಲಿ ಯುಗಾದಿಯು ಬಹಳ ಮುಖ್ಯವಾದ ಹಬ್ಬವಾಗಿದೆ. ಯುಗಾದಿ ಎ೦ಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಆರಂಭ ಎಂಬುದಾಗಿ ಹೇಳಬಹುದಾಗಿದೆ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಿಂದೂ ಧರ್ಮಕ್ಕನುಸಾರ ಹಬ್ಬಗಳಲ್ಲಿ ಯುಗಾದಿ ಹಬ್ಬವು […]

ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ. ಪುಟ್ಟ ಮರಿಹಕ್ಕಿಗೆ  ಒಂದೊಂದೇ […]

ಕೋಟ: ಕಡಲ ಕಿನಾರೆಯಲ್ಲಿ‌‌ ಮೊಳಗಿತು ವಿಷ್ಣು ಸಹಸ್ರನಾಮ

ಉಡುಪಿ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.ಕೋಟ ಮಣೂರು ಪಡುಕರೆ ಸಮುದ್ರ ದಡದಲ್ಲಿ ಪ್ರಾಕೃತಿಕ ವಿಕೋಪಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ತಡೆ, ಧರ್ಮ ಜಾಗೃತಿ, ಪರಿಸರ ಸಂರಕ್ಷಣೆಗೆ ಸಹಸ್ರನಾಮ ಪಠಣ ಪೂರಕವಾಗಿದೆ. ಮನುಕುಲದ ಒಳಿತಿಗೆ ಧಾರ್ಮಿಕ ಕೈಂಕರ್ಯ ಹೆಚ್ಚಿನ ಶಕ್ತಿ ನೀಡಲಿದೆ ಇಂಥಹ ಕಾರ್ಯಗಳು ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು. ಸಮುದ್ರ […]

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಉಡುಪಿ: ಕರಾವಳಿಯ ಹೆಸರಾಂತ ಸುದ್ದಿಜಾಲತಾಣ ಉಡುಪಿXPRESS ನಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಹಾಗೂ ಈ ಸಂಭ್ರಮದ ದೀಪಾವಳಿ ಹಬ್ಬಕ್ಕೆ ನಾಡಿನ ಗಣ್ಯರಿಂದ ಶುಭಾಶಯಗಳು.