ಎಲಿವೇಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಿದ ಹೋಂಡಾ ಕಾರ್ಸ್ ಇಂಡಿಯಾ: ಆರಂಭಿಕ ಬೆಲೆ 11 ಲಕ್ಷ ರೂ.ಗಳು

ಹೋಂಡಾ ಕಾರ್ಸ್ ಇಂಡಿಯಾ ಅಂತಿಮವಾಗಿ ಭಾರತದಲ್ಲಿ ಎಲಿವೇಟ್ ಎಸ್‌ಯುವಿ ಕಾರುಗಳನ್ನು ಆರಂಭಿಕ ಬೆಲೆ 11 ಲಕ್ಷ ರೂ (ಎಕ್ಸ್ ಶೋ ರೂಂ)ಗಳೊಂದಿಗೆ ಬಿಡುಗಡೆ ಮಾಡಿದೆ. ಎಲಿವೇಟ್ ಕಾರುಗಳನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ಮತ್ತು ಸಿಂಗಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಹೊಂದಬಹುದು. ಎಲಿವೇಟ್‌ನ ವಿತರಣೆಗಳು ಇಂದು ದೇಶಾದ್ಯಂತ ಪ್ರಾರಂಭವಾಗಲಿವೆ. ಎಲಿವೇಟ್ ನಾಲ್ಕು ವೇರಿಯೆಂಟ್ ನಲ್ಲಿ ಲಭ್ಯವಿದೆ – SV, V, VX, ಮತ್ತು ZX. ಏಕೈಕ 1.5-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು ಹೊಂಡಾ ಸಿಟಿ ಸೆಡಾನ್‌ನಿಂದ ಎರವಲು ಪಡೆಯಲಾಗಿದೆ. […]

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡ್ ಮಾಡಿದ ವಿಕ್ರಮ!!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಕ್ರಮ್ ಲ್ಯಾಂಡರ್‌ಗೆ ಮತ್ತೆ ತನ್ನ ಎಂಜಿನ್‌ಗಳನ್ನು ಫೈರ್ ಮಾಡುವಂತೆ ಆದೇಶಿಸಿತು. ಲ್ಯಾಂಡರ್ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30-40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೋಮವಾರ ಪ್ರಕಟಿಸಿದೆ. “ವಿಕ್ರಮ್ ಚಂದ್ರನ ಮೇಲೆ ಮೃದುವಾಗಿ ಇಳಿದನು, ಮತ್ತೊಮ್ಮೆ! ವಿಕ್ರಮ್ ಲ್ಯಾಂಡರ್ ತನ್ನ ಮಿಷನ್ ಉದ್ದೇಶಗಳನ್ನು ಮೀರಿದೆ. ಇದು ಹಾಪ್(ಕುಪ್ಪಳಿಕೆ) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. ಆಜ್ಞೆಯ ಮೇರೆಗೆ, ಅದು ಎಂಜಿನ್‌ಗಳನ್ನು ಫೈ ಮಾಡಿತು. […]

ಚಂದ್ರಯಾನ–3ರ ಕೌಂಟ್‌ಡೌನ್‌ ಧ್ವನಿ ಇನ್ನಿಲ್ಲ

ಬೆಂಗಳೂರು: ಚಂದ್ರಯಾನ-3 ಉಪಗ್ರಹ ಉಡಾವಣೆಯ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀಹರಿಕೋಟಾದಿಂದ ಚಂದ್ರಯಾನ 3 ಉಡಾವಣೆಗೂ ಮುನ್ನಿನ ಕೌಂಟ್ ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನರಾಗಿದ್ದಾರೆ. ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಇವರು ಶನಿವಾರ ಮೃತಪಟ್ಟಿದ್ದಾರೆ. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ‌ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ […]

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಲ್ಕೋಡ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಗಡಿ ಭಾಗದ ಗ್ರಾಮಸ್ಥರು

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ನೂರಾರು ಗ್ರಾಮಸ್ಥರು ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪವನ್ನು ವಿರೋಧಿಸಿದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಸಾಂಗ್ಲಿ, ಮೀರಜ್ ಮತ್ತು ಇಚಲಕರಂಜಿ ಜಿಲ್ಲೆಯ ಹಳ್ಳಿಗಳು ಮತ್ತು ಪಟ್ಟಣಗಳ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಪಡೆಯುವ ವಿಷಯದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಗ್ರಾಮಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿದರು. ಅಸಮಾಧಾನದ ನಡುವೆ, ಮಹಾರಾಷ್ಟ್ರ ಸರ್ಕಾರವು ಸುಲ್ಕುಡ್ ಗ್ರಾಮದಲ್ಲಿ ದೂಧ ಗಂಗಾ ನದಿಗೆ ಬ್ಯಾರೇಜ್ ನಿರ್ಮಿಸುವ ಮೂಲಕ ಇಚಲಕರಂಜಿ ಜಿಲ್ಲೆಗೆ ನೀರು ಹರಿಸಲು […]

ತನ್ನ ಕಾರ್ಯಯೋಜನೆ ಪೂರ್ಣಗೊಳಿಸಿ ನಿದ್ದೆಗೆ ಜಾರಿದ ಪ್ರಗ್ಯಾನ್ ರೋವರ್!! ಎಚ್ಚರಕ್ಕಾಗಿ ಮುಂದಿನ ಸೂರ್ಯೋದಯದ ನಿರೀಕ್ಷೆ

ಬೆಂಗಳೂರು: ಚಂದ್ರಯಾನ-3 ರ ಪ್ರಗ್ಯಾನ್ ರೋವರ್ ಅನ್ನು ಚಂದ್ರನ ಮೇಲೆ ನಿದ್ರಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶನಿವಾರ ಹೇಳಿದೆ. ರೋವರ್ ಅನ್ನು 14 ದಿನಗಳ ನಂತರ ಸೆಪ್ಟೆಂಬರ್ 22, 2023 ರಂದು ಎಚ್ಚರಗೊಳಿಸಲು ಬಾಹ್ಯಾಕಾಶ ಸಂಸ್ಥೆ ಆಶಿಸುತ್ತಿದೆ. ರೋವರ್ ನ ಬ್ಯಾಟರಿಗಳು ಸಂಪೂರ್ಣವಾಗಿ ಚಾರ್ಜ್ ಆಗಿದೆ ಮತ್ತು ಪೇಲೋಡ್ ಗಳನ್ನು ಆಫ್ ಮಾಡಲಾಗಿದೆ. ಇನ್ನು 14 ದಿನಗಳು ನಿದ್ದೆಯಲ್ಲಿರುವ ರೋವರ್ ಸೆಪ್ಟೆಂಬರ್ 22 ರಂದು ಎಚ್ಚರಗೊಂಡಲ್ಲಿ ಮತ್ತೊಮ್ಮೆ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಬಹುದು ಹಾಗಾಗದಿದ್ದಲ್ಲಿ […]