ವಿಯೆಟ್ನಾಂಗೆ ತೆರಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ನವದೆಹಲಿ : ಜಿ20 ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ವಿಯೆಟ್ನಾಂ ಪ್ರವಾಸ ಕೈಗೊಂಡರು. ದ್ವಿಪಕ್ಷೀಯ ಮಾತುಕತೆ ವೇಳೆ ಭಾರತ ಮತ್ತು ಯುಎಸ್ ನಡುವೆ ಮತ್ತಷ್ಟು ಬಾಂಧವ್ಯ ವೃದ್ಧಿಸಲು ಆರ್ಥಿಕ, ಸಾರ್ವಜನಿಕ ಸಂಪರ್ಕ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಗಿತ್ತು. ಭಾರತ ಮತ್ತು ಯುಎಸ್ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಉಭಯ ದೇಶಗಳ ನಾಯಕರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಒಳಗೊಳ್ಳುವಿಕೆ ಸೇರಿದಂತೆ ಎಲ್ಲಾ ನಾಗರಿಕರಿಗೆ ಸಮಾನ […]
ಶೇ 7ರಷ್ಟು ಮಾರುಕಟ್ಟೆ ಪಾಲು ಪಡೆದ ಆಯಪಲ್ : ಭಾರತೀಯರಲ್ಲಿ ಹೆಚ್ಚುತ್ತಿದೆ ಐಫೋನ್ ಒಲವು

ನವದೆಹಲಿ: ಭಾರತದಲ್ಲಿ ಐಫೋನ್ಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಆಯಪಲ್ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುತ್ತಿದೆ.ಈಗ ಭಾರತದಲ್ಲೇ ತನ್ನ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿರುವ ಆಯಪಲ್ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 7ರಷ್ಟು ಪಾಲು ಪಡೆಯುವತ್ತ ಮುನ್ನಡೆದಿದೆ. ವರ್ಷದ ಮೊದಲಾರ್ಧದಲ್ಲಿ ಆಯಪಲ್ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 6 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ ಮತ್ತು ಸೂಪರ್-ಪ್ರೀಮಿಯಂ ಸ್ಮಾರ್ಟ್ಫೋನ್ ವಿಭಾಗದಲ್ಲಿ (50,000-100,000 ರೂ.ಗಳ ನಡುವೆ ಬೆಲೆ) ಪ್ರಾಬಲ್ಯ ಸಾಧಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಅಂಕಿ ಅಂಶಗಳು […]
ಮೊರಾಕೊ ಭೂಕಂಪ: 2,000 ಕ್ಕೂ ಹೆಚ್ಚು ಜನ ಸಾವು; 3 ಲಕ್ಷ ಜನ ಬಾಧಿತ

ಶುಕ್ರವಾರ ತಡರಾತ್ರಿ ಮೊರಾಕೊದ ಅಟ್ಲಾಸ್ ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಹಲವಾರು ಕಟ್ಟಡಗಳು ಧರಾಶಾಯಿಯಾಗಿದ್ದು ಜನರು ತಮ್ಮ ಮನೆಗಳಿಂದ ಪಲಾಯನಗೈದಿದ್ದಾರೆ. ಸುಮಾರು 2,000 ಜನರು ಗಾಯಗೊಂಡಿದ್ದಾರೆ. ಮರಕೆಚ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊರಾಕೊಗೆ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. […]
ಉಕ್ರೇನ್ ಬಿಕ್ಕಟ್ಟು ವಿಷಯದಲ್ಲಿ ಹೊಸ ವಾಕ್ಯ ಸೇರಿಸಿದ ಭಾರತ : G20 Summit

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಆರಂಭವಾಗಿರುವ ಜಿ-20 ಶೃಂಗಸಭೆಯಲ್ಲಿ ಉಕ್ರೇನ್ ಸಂಘರ್ಷದ ಕುರಿತ ಭಾರತ ತನ್ನ ಹೇಳಿಕೆಯಲ್ಲಿ ಹೊಸ ವಾಕ್ಯ( ಮೊದಲಿನ ಕರಡಿನಲ್ಲಿ ಹೊಸ ವಾಕ್ಯವೊಂದನ್ನ) ಸೇರಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಜಿ20 ಶೃಂಗಸಭೆಯ ಕೊನೆಯಲ್ಲಿ ಜಂಟಿ ನಾಯಕರ ಘೋಷಣೆಗೆ ಉಕ್ರೇನ್ ಬಿಕ್ಕಟ್ಟು ವಿಷಯದಲ್ಲಿ ಭಾರತ ಹೊಸ ಹೇಳಿಕೆಯನ್ನು ಪ್ರಸ್ತಾಪಿಸಿದೆ. ಹರಿಯಾಣದ ನುಹ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 3-6 ರವರೆಗೆ ನಡೆದ G20 ಶೆರ್ಪಾ ಸಭೆಯಲ್ಲಿ ಉಕ್ರೇನ್ ಸಂಘರ್ಷ ವಿವರಿಸಲು ವಾಕ್ಯದಲ್ಲಿ ಯಾವುದೇ ಒಮ್ಮತವಿಲ್ಲ ಎಂಬುವುದನ್ನು […]
ದಾಖಲೆ ಬರೆದ ಭಾರತದ ಅಧ್ಯಕ್ಷತೆಯ ಜಿ-20 ಶೃಂಗಸಭೆ : 73 ಘೋಷಣೆಗಳಿಗೆ ವಿಶ್ವನಾಯಕರ ಒಪ್ಪಿಗೆ

ನವದೆಹಲಿ: ಇಲ್ಲಿ ನಡೆಯುತ್ತಿರುವ ಐತಿಹಾಸಿಕ ಜಿ-20 ಶೃಂಗಸಭೆಯು ಹಲವು ಮೊದಲುಗಳಿಗೆ ನಾಂದಿ ಹಾಡಿದೆ.ವಿಶ್ವನಾಯಕರ ಕೂಟವಾದ ಜಿ20 ಶೃಂಗವು ಭಾರತದ ಅಧ್ಯಕ್ಷತೆಯಲ್ಲಿ ಒಂದು ಭೂಮಿ, ಒಂದು ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 112 ಘೋಷಣೆಗಳನ್ನು ಅಂಗೀಕರಿಸಿದೆ. ಇದು ಜಿ20 ಶೃಂಗಸಭೆಯ ಇತಿಹಾಸದಲ್ಲಿ ದಾಖಲೆ ಬರೆದಿದೆ. ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಶೃಂಗ ಇದಾಗಿದ್ದರೆ, ವಿಶ್ವದಲ್ಲಿನ ಹಲವು ದೈತ್ಯ ಸವಾಲುಗಳು ಮತ್ತು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 73 ಸಂಕಲ್ಪಗಳನ್ನು(ರೆಸಲ್ಯೂಶನ್) ಅಂಗೀಕರಿಸಲಾಗಿದೆ. ಇದು ಈವರೆಗೂ ಯಾವುದೇ […]