ಸಿಂಗಾಪುರದಲ್ಲಿ ಚೀನಾದ ವಿಮಾನ ತುರ್ತು ಭೂಸ್ಪರ್ಶ, 9 ಜನರು ಅಸ್ವಸ್ಥ: ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ

ಬೀಜಿಂಗ್ (ಚೀನಾ): ಎಂಜಿನ್ನಲ್ಲಿ ಬೆಂಕಿ ಕಾಣಿಕೊಂಡಿರುವ ಹಿನ್ನೆಲೆ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಆವರಿಸಿದೆ. ಪರಿಣಾಮ 9 ಪ್ರಯಾಣಿಕರು ಅಸ್ವಸ್ಥಗೊಂಡಿದ್ದಾರೆ. ಚೀನಾದ ಏರ್‌ಲೈನ್‌ನ ಏರ್ ಚೀನಾ ವಿಮಾನದ ಇಂಜಿನ್‌ಗೆ ಬೆಂಕಿ ತಗುಲಿ, ಅದರ ಕ್ಯಾಬಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಇದರಿಂದ ಸಿಂಗಾಪುರದ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಯಿತು.146 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯೊಂದಿಗೆ A320 ಚೀನಾದ ವಿಮಾನ ಭಾನುವಾರ ಸಂಜೆ 4.15ರ ಸುಮಾರಿಗೆ ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಚಾಂಗಿ ವಿಮಾನ ನಿಲ್ದಾಣದ ಅಧಿಕೃತ ಮೂಲಗಳು […]
ಎರಡು ದಿನ ಕಾಶಿ ಪ್ರವಾಸ G20 ಶೃಂಗಸಭೆ ಬಳಿಕ ವಾರಾಣಸಿಗೆ ಭೇಟಿ ನೀಡಿದ ಮಾರಿಷಸ್ ಪ್ರಧಾನಿ

ವಾರಾಣಸಿ: ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಬಳಿಕ ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನಾಥ್ ನೇರವಾಗಿ ವಾರಾಣಸಿಗೆ ಭೇಟಿ ನೀಡಿದ್ದಾರೆ.ಸೋಮವಾರ ವಾರಾಣಸಿಗೆ ಬಂದಿಳಿದ ಇವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಲಾಲ್ ಬಹದ್ದೂರು ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ಅನುಸಾರ ಅವರಿಗೆ ಸ್ವಾಗತ ನೀಡಲಾಗಿದ್ದು, ಮಂಗಳವಾರ ಮಧ್ಯಾಹ್ನ ಅವರು ಮಾರಿಷಸ್ ಮರಳಲಿದ್ದಾರೆಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರಿಗೆ ವಾರಾಣಸಿಯೊಂದಿಗೆ ವಿಶೇಷ ನಂಟಿದೆ. ಇದೇ ಕಾರಣಕ್ಕೆ ಅವರು ಭಾರತಕ್ಕೆ ಭೇಟಿ ನೀಡಿದಾಗ ತಪ್ಪದೇ ಇಲ್ಲಿಗೆ ಆಗಮಿಸುತ್ತಾರೆ ವಾರಾಣಸಿಯೊಂದಿಗೆ ಇದೆ […]
ವಿಶ್ವ ಮಾಧ್ಯಮಗಳಲ್ಲಿ ಭಾರತದ ಗುಣಗಾನ : G20 ಶೃಂಗಸಭೆ ಯಶಸ್ಸು

ನವದೆಹಲಿ: G20 ಶೃಂಗಸಭೆ ಶೇ 100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ. ಭಾರತದ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಗೆ ಜಾಗತಿಕ ಪತ್ರಿಕೆಗಳಲ್ಲಿ ಪ್ರಶಂಸೆಯ ಸುರಿಮಳೆಯೇ ಹರಿದು ಬಂದಿದೆ. ಹಲವು ವಿಶ್ವ ಮಾಧ್ಯಮಗಳು ಭಾರತದ ನೇತೃತ್ವ ಹಾಗೂ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾದ ಬಗೆಯನ್ನು ಗುಣಗಾನ ಮಾಡಿವೆ. .ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಕಾಳಜಿ ವಹಿಸುವಲ್ಲಿ ಭಾರತದ ಅಧ್ಯಕ್ಷತೆ ಜಿ-20 ಶೃಂಗಸಭೆ ಯಶಸ್ವಿಯಾಗಿದೆ. ಎಲ್ಲ ಅಭಿವೃದ್ಧಿ ಮತ್ತು ಭೌಗೋಳಿಕ ಹಾಗೂ ರಾಜಕೀಯ ವಿಷಯಗಳ ಬಗ್ಗೆ 100 ಪ್ರತಿಶತದಷ್ಟ ಒಮ್ಮತ […]
ಯುಎಸ್ ಓಪನ್: 24 ನೇ ಗ್ರ್ಯಾನ್‌ಸ್ಲಾಮ್ ಗೆದ್ದು ಇತಿಹಾಸ ರಚಿಸಿದ ನೊವಾಕ್ ಜೊಕೊವಿಕ್

2008 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ನೊವಾಕ್ ಜೊಕೊವಿಕ್ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ವಿಜಯ ಹದಿನೈದು ವರ್ಷಗಳ ಬಳಿಕವೂ ಹತ್ತಾರು ಆಟಗಾರರ ಸವಾಲುಗಳ ಮಧ್ಯೆಯೂ ಈ ಆಟದಲ್ಲಿ ತಮ್ಮ ಹಿಡಿತವನ್ನು ಸಡಿಲಗೊಳಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಡೇನಿಯಲ್ ಮೆಡ್ವೆಡೆವ್ ಅವರನ್ನು ಮಣಿಸಿದ 36 ವರ್ಷದ ನೊವಾಕ್ ಯುಎಸ್ ಓಪನ್ ನಲ್ಲಿ ತನ್ನ 24ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ರಚಿಸಿದ್ದಾರೆ. ನೋವಾಕ್ ಯುವ ಪೀಳಿಗೆಯ ಎದುರಾಳಿಗಳೊಂದಿಗೆ ದೈಹಿಕವಾಗಿ ಸೆಣಸಾಡಿದ್ದಾರೆ ಮಾತ್ರವಲ್ಲದೆ ಯುದ್ಧತಂತ್ರದಿಂದ ಅವರನ್ನು ಸಂಪೂರ್ಣವಾಗಿ ಸೋಲಿಸಿದ್ದಾರೆ. ಅವರು […]
ಮುಂದಿನ G20 ಶೃಂಗಸಭೆಗೆ ಬ್ರೆಜಿಲ್ ತಯಾರು: ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ ಪ್ರಧಾನಿ ಮೋದಿ

ನವದೆಹಲಿ: ಇಲ್ಲಿ ನಡೆದ ಎರಡು ದಿನಗಳ ಶೃಂಗಸಭೆಯ ಎರಡನೇ ದಿನವಾದ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿ 20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ 1 ರಂದು ಗಣ್ಯ ಗುಂಪಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಪ್ರಧಾನಿ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಿಗೆ ಸುತ್ತಿಗೆಯನ್ನು ಹಸ್ತಾಂತರಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ, “ನಾನು […]