ಹೊಸ ಸಂಸತ್ ಭವನಕ್ಕೆ ಶ್ರೀಗಣೇಶ: ಅಧಿವೇಶನಕ್ಕೂ ಮುನ್ನ ಕ್ಯಾಬಿನೆಟ್ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ

ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಇಂದು ಪ್ರಾರಂಭವಾಯಿತು. ನೂತನ ಸಂಸತ್ ಭವನದ ಮೊದಲ ಹಾಗೂ ಐತಿಹಾಸಿಕ ಅಧಿವೇಶನ ಇದಾಗಿದೆ. ನಾನು ಭಾರತದ ಸಂಸದರು ಮತ್ತು ಜನರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಸದನವನ್ನುದ್ದೇಶಿಸಿ ಹೇಳಿದರು. PM @narendramodi acknowledges Samvatsari a cherished tradition. On this day of 'Micchami Dukkadam,' he extends apologies to anyone he […]

ಎಲ್​ಐಸಿ ಉದ್ಯೋಗಿಗಳು, ಏಜೆಂಟರಿಗೆ ಕೇಂದ್ರದಿಂದ ಗಣೇಶ ಹಬ್ಬಕ್ಕೆ ಭರ್ಜರಿ ಉಡುಗೊರೆ

ನವದೆಹಲಿ: ಎಲ್​ಐಸಿ ಉದ್ಯೋಗಿಗಳು ಮತ್ತು ಏಜೆಂಟರಿಗೆ ಕೇಂದ್ರ ಸರ್ಕಾರ ಗಣೇಶ ಚತುರ್ಥಿಗೆ ಭರ್ಜರಿ ಉಡುಗೊರೆ ನೀಡಿದೆ. ಗ್ರಾಚ್ಯುಟಿ ಮಿತಿ, ಕುಟುಂಬ ಪಿಂಚಣಿ, ವಿಮೆ ಕವರೇಜ್​ನಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಹಣಕಾಸು ಸಚಿವಾಲಯ ಅನುಮೋದನೆ ಪಡೆದುಕೊಂಡಿದೆ. ಕುಟುಂಬ ಪಿಂಚಣಿ ಹೆಚ್ಚಳ, ಏಜೆಂಟರ ಗ್ರಾಚ್ಯುಟಿ ಮಿತಿ ಏರಿಕೆ ಸೇರಿದಂತೆ ವಿವಿಧ ಕೊಡುಗೆಗಳನ್ನು ಕೇಂದ್ರ ಸರ್ಕಾರ ಎಲ್​ಐಸಿ ಸಿಬ್ಬಂದಿಗೆ ಪ್ರಕಟಿಸಿದೆ.ಇದು ಭಾರತೀಯ ಜೀವ ವಿಮಾ ನಿಗಮದ(ಎಲ್​ಐಸಿ) ಉದ್ಯೋಗಿಗಳು ಮತ್ತು ಏಜೆಂಟರು ಖುಷಿ ಪಡುವ ಸುದ್ದಿ. ಭಾರತದ ಅತಿದೊಡ್ಡ ಜೀವ ವಿಮಾ ಸಂಸ್ಥೆ […]

ಗಣೇಶ ಚತುರ್ಥಿಯಂದೇ ಹೊಸ ಸಂಸತ್ ಭವನದೊಳಗೆ ಪ್ರವೇಶ: ಪ್ರಧಾನಿ ಮೋದಿ

ನವದೆಹಲಿ: ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್ತಿಗೆ ತೆರಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಣಪತಿಯನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ, ಈಗ ದೇಶದ ಅಭಿವೃದ್ಧಿಗೆ ಯಾವುದೇ ಅಡೆತಡೆಗಳಿಲ್ಲ ನಿರ್ವಿಘ್ನ ರೂಪದಿಂದ ಭಾರತವು ತನ್ನ ಎಲ್ಲಾ ಕನಸು ಎಲ್ಲ ಸಂಕಲ್ಪಗಳನ್ನು ಪರಿಪೂರ್ಣಗೊಳಿಸಲಿದೆ. ಗಣೇಶ್ ಚತುರ್ಥಿಯ ದಿನದಂದು ನವ ಪಯಣ ಹೊಸ ಭಾರತ ಎಲ್ಲಾ ಕನಸುಗಳನ್ನು ಚರಿತಾರ್ಥಗೊಳಿಸಲಿದೆ. ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಬಹಳ ಪ್ರಮುಖವಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿದರು. #WATCH | Prime Minister […]

ಮೊಬೈಲ್ ಗಳಿಗೆ ‘ತುರ್ತು ಎಚ್ಚರಿಕೆ’ ಸಂದೇಶ: ಕೇಂದ್ರ ಸರ್ಕಾರದಿಂದ ಪರೀಕ್ಷಾರ್ಥ ಪ್ರಯೋಗ

ನವದೆಹಲಿ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೂರಸಂಪರ್ಕ ಇಲಾಖೆ (DOT) ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸಲು ರಾಷ್ಟ್ರವ್ಯಾಪಿ ‘ತುರ್ತು ಎಚ್ಚರಿಕೆ’ ಪರೀಕ್ಷೆಯನ್ನು ನಡೆಸಿತು. Vodafone Idea, Jio, Airtel ಮತ್ತು BSNL ನೆಟ್‌ವರ್ಕ್‌ಗಳಲ್ಲಿನ ಚಂದಾದಾರರು ಯಾದೃಚ್ಛಿಕವಾಗಿ ‘ತುರ್ತು ಎಚ್ಚರಿಕೆ: ತೀವ್ರ’ ಎಂಬ ಶೀರ್ಷಿಕೆಯ ಫ್ಲಾಶ್ ಸಂದೇಶವನ್ನು ಸ್ವೀಕರಿಸಿದ್ದಾರೆ.   ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಕಳುಹಿಸಲಾದ ಸಂದೇಶವು, “ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ […]

ಅಕ್ಟೋಬರ್ 1 ರಿಂದ ದೇಶಾದ್ಯಂತ ಜನನ ಪ್ರಮಾಣ ಪತ್ರ ಹೊಸ ಕಾಯಿದೆ ಜಾರಿ: ಒಂದೇ ದಾಖಲೆಯಾಗಿ ಬಳಸಲು ಅನುಮತಿ

ಹೊಸದಿಲ್ಲಿ: ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯಿದೆ, 2023 ರ ಪ್ರಕಾರ ಶಿಕ್ಷಣ ಸಂಸ್ಥೆಗೆ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಮತದಾರರ ಪಟ್ಟಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ, ಸರ್ಕಾರಿ ಕೆಲಸ ಅಥವಾ ನೇಮಕಾತಿಗಾಗಿ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಅನುಮತಿಸುತ್ತದೆ. ಗೃಹ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್ ಜನರಲ್ ಕಚೇರಿ ತನ್ನ ಹೇಳಿಕೆಯಲ್ಲಿ, “ಜನನ ಮತ್ತು […]