ಇಸ್ರೋ : ಆದಿತ್ಯ-ಎಲ್1 ಮಿಷನ್: ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ

ನವದೆಹಲಿ : ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಯೋಜನೆ ಕುರಿತು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದ್ದು, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಸುಮಾರು 16 ಸೆಕೆಂಡುಗಳ ಪಥ ಸರಿಪಡಿಸುವಿಕೆ ಕಾರ್ಯ (TCM – Trajectory Correction Maneuvre) ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದೆ.ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದ್ದು, ನಿರಂತರವಾಗಿ ಸೂರ್ಯನ ಕಡೆಗೆ ಚಲಿಸುತ್ತಿದೆ. ಇಂದು (ಅಕ್ಟೋಬರ್ 6 ರಂದು) ನೌಕೆಯ ಪಥ ಸರಿಪಡಿಸುವಿಕೆ ಪ್ರಕ್ರಿಯೆ ಮಾಡಲಾಯಿತು. ಬಾಹ್ಯಾಕಾಶ ನೌಕೆಯು L1 ಸುತ್ತ […]

ಪಕ್ಷದಲ್ಲಿ ಬೇಗುದಿ : ಮಧ್ಯಪ್ರದೇಶ ಸಿಎಂ ಅಭ್ಯರ್ಥಿ ಘೋಷಿಸದ ಬಿಜೆಪಿ

ಭೋಪಾಲ್: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ (PTI) ಪ್ರಮುಖ ವಿಧಾನಸಭಾ ಚುನಾವಣೆಗೆ ಮಧ್ಯಪ್ರದೇಶ ಸಜ್ಜಾಗಿರುವ ನಡುವೆಯೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಬೂದಿಮುಚ್ಚಿದ ಕೆಂಡವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಚುನಾವಣೆ ಎದುರಿಸಲು ಪಕ್ಷದ ಹೈಕಮಾಂಡ್ ನಿರ್ಧರಿಸಿದ್ದು, ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಕಂಗೆಡಿಸಿದೆ. ಆದಿವಾಸಿಗಳ ಪ್ರಾಬಲ್ಯದ ದಿಂಡೋರಿ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಿವರಾಜ್ ಸಿಂಗ್, “ನಾನು ಒಳ್ಳೆಯ ಸರ್ಕಾರ ನಡೆಸುತ್ತಿದ್ದೇನೆಯೇ ಅಥವಾ ಕೆಟ್ಟ ಸರ್ಕಾರ ನಡೆಸುತ್ತಿದ್ದೇನೆಯೇ ಎಂದು ನಾನು ಕೇಳಬಯಸುತ್ತೇನೆ. ಈ ಸರ್ಕಾರ ಮುಂದುವರಿಯಬೇಕೇ […]

ಇಸ್ರೇಲ್​ಗೆ ಏರ್​ ಇಂಡಿಯಾ ವಿಮಾನ ಅಕ್ಟೋಬರ್​ 14 ರ ವರೆಗೆ ಹಾರಾಟ ರದ್ದು

ನವದೆಹಲಿ: ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ನಡೆಯುತ್ತಿರುವ ‘ರಾಕೆಟ್​ ಕಾಳಗ’ದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಕ್ಕಟ್ಟು ಇನ್ನೂ ಮುಂದುವರೆದಿರುವ ಕಾರಣ ಭಾರತದ ವಿಮಾನಯಾನ ಸಂಸ್ಥೆಯಾದ ಏರ್​ ಇಂಡಿಯಾ ಇಸ್ರೇಲ್​ಗೆ ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಅಕ್ಟೋಬರ್​ 14ರ ವರೆಗೆ ನಿಲ್ಲಿಸಿದೆ. ಇಸ್ರೇಲ್​ನ ಪ್ರಮುಖ ನಗರ​ ಟೆಲ್ ಅವೀವ್‌ಗೆ ಹೊರಡುವ ಮತ್ತು ಅಲ್ಲಿಂದ ಬರುವ ತನ್ನೆಲ್ಲಾ ವಿಮಾನಗಳನ್ನು ಮುಂದಿನ 6 ದಿನಗಳ ಕಾಲ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ.ಹಮಾಸ್ ಉಗ್ರರು ಮತ್ತು ಇಸ್ರೇಲ್ ಪಡೆಗಳ ನಡುವೆ […]

ಏಷನ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿ: ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್‌-ಚಿರಾಗ್ ಗೆ ಚಿನ್ನದ ಪದಕ!!

ಏಷ್ಯನ್ ಗೇಮ್ಸ್ 2023 ರ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಈವೆಂಟ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸವನ್ನು ಸೃಷ್ಟಿಸಿದರು. ಸಾತ್ವಿಕ್-ಚಿರಾಗ್ ರಿಪಬ್ಲಿಕ್ ಆಫ್ ಕೊರಿಯಾದ ಚೋಯ್ ಸೊಲ್ಗ್ಯು ಮತ್ತು ಕಿಮ್ ವೊನ್ಹೋ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಗೆಲುವಿನೊಂದಿಗೆ ಭಾರತವು ಅಕ್ಟೋಬರ್ 7 ರ ಶನಿವಾರದಂದು ತನ್ನ ಪದಕಗಳ ಸಂಖ್ಯೆಯನ್ನು 101 ಕ್ಕೆ ಏರಿಸಿತು. ವಿಶ್ವ ನಂ. 3 ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ […]

ಏಷ್ಯನ್ ಗೇಮ್ಸ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತೀಯ ಪುರುಷರ ಕಬಡ್ಡಿ ತಂಡ

ಶುಕ್ರವಾರ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಭಾರತೀಯ ಪುರುಷರ ಕಬಡ್ಡಿ ತಂಡವು ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿತು. ಪವನ್ ಸೆಹ್ರಾವತ್ ನೇತೃತ್ವದ ಭಾರತವು ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು ಮತ್ತು ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ಧ 61-14 ಅಂತರದಿಂದ ಜಯಗಳಿಸಿತು. ಶನಿವಾರ ಇರಾನ್ ಮತ್ತು ಚೈನೀಸ್ ತೈಪೆ ನಡುವಿನ ಇನ್ನೊಂದು ಸೆಮಿಫೈನಲ್‌ ನಡೆಯಲಿದೆ. ಭಾರತವು ಫೈನಲ್ ನಲ್ಲಿ ಈ ಎರಡಲ್ಲಿ ವಿಜೇತರಾದ ತಂಡವನ್ನು ಎದುರಿಸಲಿದೆ. ಮೊದಲ ನಾಲ್ಕು ಅಂಕಗಳನ್ನು ಗಳಿಸಿದ ಪಾಕಿಸ್ತಾನವು ಪಂದ್ಯವನ್ನು ಬಲಿಷ್ಠವಾಗಿ […]