ಒಂದು ಮಿಲಿಯನ್ ನಾಗರಿಕರಿಗೆ ಇಸ್ರೇಲ್ ಅಲ್ಟಿಮೇಟಮ್: ಗಾಜಾದ ದಕ್ಷಿಣಕ್ಕೆ ಸ್ಥಳಾಂತರಿಸಲು 24 ಗಂಟೆ ಕಾಲಾವಕಾಶ

ಟೆಲ್ ಅವೀವ್: 24 ಗಂಟೆಗಳ ಒಳಗೆ ಒಂದು ಮಿಲಿಯನ್ ನಾಗರಿಕರು ಗಾಜಾ ಪಟ್ಟಣದ ದಕ್ಷಿಣಕ್ಕೆ ಸ್ಥಳಾಂತರಿಸಿಕೊಳ್ಳುವಂತೆ ಇಸ್ರೇಲಿನ ಮಿಲಿಟರಿ ಹೇಳಿದೆ. ಇಸ್ರೇಲ್ ಶೀಘ್ರದಲ್ಲೇ ತನ್ನ ಉತ್ತರ ಭಾಗದಿಂದ ಮಾರಣಾಂತಿಕ ನೆಲದ ಆಕ್ರಮಣವನ್ನು ಪ್ರಾರಂಭಿಸಬಹುದು ಎಂಬ ಊಹಾಪೋಹವನ್ನು ಇದು ಸೃಷ್ಟಿಸಿದೆ. ಹಮಾಸ್ ಕಾರ್ಯಕರ್ತರು ಗಾಜಾ ನಗರದ ಕೆಳಗಿರುವ ಸುರಂಗಗಳಲ್ಲಿ ಅಡಗಿರುವ ಕಾರಣ ಅವರ ಸ್ಥಳಾಂತರ ಆದೇಶವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. “ಗಾಜಾದ ನಿವಾಸಿಗಳೇ, ನಿಮ್ಮ ವೈಯಕ್ತಿಕ ಮತ್ತು ನಿಮ್ಮ ಕುಟುಂಬಗಳ ಸುರಕ್ಷತೆಗಾಗಿ ದಕ್ಷಿಣಕ್ಕೆ ತೆರಳಿ. ನಿಮ್ಮನ್ನು ಮಾನವ […]
ಫೋರ್ಬ್ಸ್ ಟಾಪ್ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಮುಖೇಶ್ ಅಂಬಾನಿ; ಎರಡನೇ ಸ್ಥಾನದಲ್ಲಿ ಗೌತಮ್ ಅದಾನಿ

ನವದೆಹಲಿ: ಭಾರತದ 100 ಶ್ರೀಮಂತ ವ್ಯಕ್ತಿಗಳ 2023 ರ ಫೋರ್ಬ್ಸ್ ಶ್ರೇಯಾಂಕದಲ್ಲಿ ಮುಖೇಶ್ ಅಂಬಾನಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದೇಶದ ಅಗ್ರ 100 ಶ್ರೀಮಂತರ ಒಟ್ಟು ಸಂಪತ್ತು ಈ ವರ್ಷ $799 ಶತಕೋಟಿಯಲ್ಲಿ ಬದಲಾಗದೆ ಉಳಿದಿದೆ. ಭಾರತದ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳ ಮೂರು ಹೊಸ ಹೆಸರು ಸೇರ್ಪಡೆಯಾಗಿದೆ. ಟಾಪ್ 10 ಶ್ರೀಮಂತರು 1) ಮುಖೇಶ್ ಅಂಬಾನಿ- $92 ಬಿಲಿಯನ್ 2) ಗೌತಮ್ ಅದಾನಿ- $68 ಬಿಲಿಯನ್ 3) ಶಿವ ನಾಡರ್- 29.3 ಬಿಲಿಯನ್ 4) ಸಾವಿತ್ರಿ […]
ಇಸ್ರೇಲ್ ನಲ್ಲಿ ಎಲ್ಲ ಸೂಪರ್ ಚಾರ್ಜಿಂಗ್ ಸ್ಟೇಷನ್ ಗಳು ಉಚಿತ ಬಳಕೆಗೆ ಲಭ್ಯ ಎಂದ ಟೆಸ್ಲಾ ದಿಗ್ಗಜ

ಕ್ಯಾಲಿಫೋರ್ನಿಯಾ: ಟೆಸ್ಲಾ ಮಾಲೀಕ ಏಲಾನ್ ಮಸ್ಕ್, ಇಸ್ರೇಲ್‌ನಲ್ಲಿ ಬಳಕೆದಾರರು ತಮ್ಮ ವಾಹನಗಳನ್ನು ಉಚಿತವಾಗಿ ಚಾರ್ಜ್ ಮಾಡಬಹುದು ಎಂದು X ನಲ್ಲಿ ತಿಳಿಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ದದ ಉದ್ವಿಗ್ನತೆಯ ನಡುವೆ ಪ್ರಯಾಣವನ್ನು ಸುಲಭಗೊಳಿಸಲು ಯು.ಎಸ್ ವಾಹನ ತಯಾರಕ ಎಲ್ಲಾ ಸೂಪರ್ಚಾರ್ಜರ್ ಸ್ಟೇಷನ್ ಗಳನ್ನು ಬಳಕೆದಾರರಿಗೆ ಮುಕ್ತವಾಗಿಸಿದ್ದಾರೆ. ಟೆಸ್ಲಾ ಇಸ್ರೇಲ್‌ನಲ್ಲಿ 22 ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೂಪರ್‌ಚಾರ್ಜರ್‌ಗಳು ಟೆಸ್ಲಾದ ಅತ್ಯಂತ ವೇಗದ ಚಾರ್ಜಿಂಗ್ ಸ್ಟೇಷನ್‌ಗಳಾಗಿದ್ದು ಅದು 250 kW ವರೆಗೆ ಶಕ್ತಿಯನ್ನು ಒದಗಿಸುತ್ತದೆ. ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳು […]
ಶೇ 6.1 ರಿಂದ 6.3ಕ್ಕೆ ಜಿಡಿಪಿ ಅಂದಾಜಿಸಿದ ಐಎಂಎಫ್ : ಏರುಗತಿಯಲ್ಲಿ ಭಾರತದ ಆರ್ಥಿಕತೆ

ನವದೆಹಲಿ : ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಶ್ವ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತ, ಪ್ರಸ್ತುತ ವರ್ಷದಲ್ಲಿ ತನ್ನ ಹಿಂದಿನ ಅಂದಾಜಿಗಿಂತ ಹೆಚ್ಚಿನ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತನ್ನ ವರದಿಯಲ್ಲಿ ತಿಳಿಸಿದೆ.ಭಾರತವು ಪ್ರಸ್ತುತ ವರ್ಷದಲ್ಲಿ ಶೇ. 6.1ರಷ್ಟು ಆರ್ಥಿಕ ಪ್ರಗತಿ ಹೊಂದುವುದಾಗಿ ಅಂದಾಜಿಸಲಾಗಿತ್ತು. ಆದರೆ ಮೀರಿ ಈ ಬಾರಿ ಶೇ. 6.3ರಷ್ಟು ಆರ್ಥಿಕ ಪ್ರಗತಿ ಕಾಣಲಿದೆ ಎಂದು ಐಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ಆರ್ಥಿಕ ಚಟುವಟಿಕೆಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾದ […]
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 72 ಹೊಸ ಕೋವಿಡ್ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 72 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 348 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶವನ್ನು ಬಿಡುಗಡೆ ಮಾಡಿದೆ.ಕೋವಿಡ್ ಹೊಸ ರೂಪಾಂತಾರಿ ತಳಿಗಳಿಂದಾಗಿ ಭಾರತ ಸೇರಿದಂತೆ ಹಲವು ದೇಶದಲ್ಲಿ ಸೋಂಕಿನ ಪ್ರಕರಣಗಳ ಏರಿಕೆ ಕಾಣುತ್ತಿವೆ. ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಕೋವಿಡ್ನ ಹೊಸ ಉಪತಳಿಗಳಾದ ಏರಿಸ್, ಎಕ್ಸ್ಬಿಬಿ ಸೇರಿದಂತೆ ಹಲವು ತಳಿಗಳು ಹೊಸ ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ. ಈ ಸೋಂಕುಗಳಿಂದ ಪ್ರಕರಣಗಳು ದಾಖಲಾಗುತ್ತಿದ್ದರೂ, […]