ವಿಶ್ವ ಕಾಫಿ ಮೂರು ದಿನಗಳ ಸಮಾವೇಶಕ್ಕೆ ತೆರೆ

ಬೆಂಗಳೂರ :ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಜಿ ಜಗದೀಶ್ ಕಳೆದ ಮೂರು ದಿನಗಳಿಂದ ನಗರದ ಅರಮನೆ ಮೈದಾನದಲ್ಲಿ ನಡೆದ “ವಿಶ್ವ ಕಾಫಿ ಸಮಾವೇಶ” ಗುರುವಾರ ತೆರೆ ಕಂಡಿತು. ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಜಿ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಭಾರತೀಯ ರೊಬಾಸ್ಟಾ ಕಾಫಿ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ […]
ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂಎಸ್ ಸ್ವಾಮಿನಾಥನ್ ವಿಧಿವಶ

ಚೆನ್ನೈ: ಭಾರತದ ಹಸಿರು ಕ್ರಾಂತಿಯ ಪಿತಾಮಹನೆಂದು ಖ್ಯಾತಿವೆತ್ತ ಮಂಕೊಂಬು ಸಾಂಬಶಿವನ್ ಸ್ವಾಮಿನಾಥನ್ (98) ಅವರು ಗುರುವಾರ ಚೆನ್ನೈನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಸುಮಾರು ಅರ್ಧ ಶತಮಾನದ ವೃತ್ತಿಜೀವನದಲ್ಲಿ ಅವರ ಮಾರ್ಗದರ್ಶನದಲ್ಲಿ ಕೃಷಿ ವಿಜ್ಞಾನಿಗಳು ಭಾರತದ ಲಕ್ಷಾಂತರ ಜನರನ್ನು ಮಾರಣಾಂತಿಕ ಕ್ಷಾಮದಿಂದ ರಕ್ಷಿಸಿದ್ದಾರೆ. 1987 ರಲ್ಲಿ ವಿಶ್ವ ಆಹಾರ ಪ್ರಶಸ್ತಿ ವಿಜೇತರಾದ ಸ್ವಾಮಿನಾಥನ್ ಅವರ ನಿಧನಕ್ಕೆ ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕ ಶೋಕ ವ್ಯಕ್ತವಾಗಿದೆ. 1950 ರ ದಶಕದಲ್ಲಿ ಬಡತನದಿಂದ ಬಳಲುತ್ತಿರುವ ಮೆಕ್ಸಿಕೋಕ್ಕಾಗಿ ಬೋರ್ಲಾಗ್ ಅಭಿವೃದ್ಧಿಪಡಿಸಿದ ಹೆಚ್ಚಿನ ಇಳುವರಿ […]
ನಿಫ್ಟಿ 51, ಸೆನ್ಸೆಕ್ಸ್ 173 ಪಾಯಿಂಟ್ ಏರಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಬುಧವಾರದ ವಹಿವಾಟು ಕೊನೆಗೊಳಿಸಿವೆ.30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 173.22 ಪಾಯಿಂಟ್ ಅಥವಾ ಶೇಕಡಾ 0.26 ರಷ್ಟು ಏರಿಕೆ ಕಂಡು 66,118.69 ಕ್ಕೆ ತಲುಪಿದೆ. ಸೂಚ್ಯಂಕವು ಬೆಳಗಿನ ವಹಿವಾಟಿನಲ್ಲಿ 65,549.96 ಕ್ಕೆ ಇಳಿದಿತ್ತು. ಆದಾಗ್ಯೂ, ರಿಲಯನ್ಸ್, ಎಲ್ &ಟಿ, ಇನ್ಫೋಸಿಸ್ ಮತ್ತು ಮಾರುತಿ ಷೇರುಗಳ ಖರೀದಿಯಲ್ಲಿನ ಹೆಚ್ಚಳವು ನಷ್ಟ ತುಂಬಲು ಸಹಾಯ ಮಾಡಿತು. ನಂತರ ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 226.8 ಪಾಯಿಂಟ್ ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 66,172.27 ಕ್ಕೆ […]
ಭಾರತೀಯರ ಮೆಚ್ಚಿನ ಆನ್ಲೈನ್ ಪ್ಲಾಟ್ಫಾರ್ಮ್ ಆದ ಯೂಟ್ಯೂಬ್

ನವದೆಹಲಿ: ಯೂಟ್ಯೂಬ್ ಭಾರತದಲ್ಲಿ ಪ್ರತಿ ಐವರ ಪೈಕಿ ನಾಲ್ವರ ಅತ್ಯಂತ ಮೆಚ್ಚಿನ ಆನ್ಲೈನ್ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಸ್ವತಃ ಯೂಟ್ಯೂಬ್ ಹೇಳಿಕೊಂಡಿದೆ. ಯೂಟ್ಯೂಬ್ ಭಾರತದಲ್ಲಿ ಮೆಚ್ಚಿನ ವೀಡಿಯೊ ವೀಕ್ಷಣೆಯ ತಾಣವಾಗಿ ಹೊರಹೊಮ್ಮಿದೆ.ಜಾಗತಿಕವಾಗಿ ಸರಾಸರಿ 70 ಬಿಲಿಯನ್ ದೈನಂದಿನ ವೀಕ್ಷಣೆ ಹೊಂದಿರುವ ಯೂಟ್ಯೂಬ್ ಶಾರ್ಟ್ಸ್ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಯೂಟ್ಯೂಬ್ ಶಾರ್ಟ್ಸ್ನ ಸರಾಸರಿ ದೈನಂದಿನ ವೀಕ್ಷಣೆಗಳು ಜಾಗತಿಕವಾಗಿ ವರ್ಷದಿಂದ ವರ್ಷಕ್ಕೆ (ವೈಒವೈ) ಶೇಕಡಾ 120 ಕ್ಕಿಂತ ಹೆಚ್ಚಾಗಿದೆ. ಕಳೆದ 12 ತಿಂಗಳುಗಳಲ್ಲಿ 18-44 ವರ್ಷ ವಯಸ್ಸಿನವರಲ್ಲಿ 88 ಪ್ರತಿಶತದಷ್ಟು ಜನರು […]
ಸ್ಮಾರ್ಟ್ ಸಿಟಿ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು : ಇಂದೋರ್ ದೇಶದ ಅತ್ಯಂತ ಸ್ವಚ್ಛ ನಗರಿ

ಇಂದೋರ್ (ಮಧ್ಯಪ್ರದೇಶ) : ಸತತ 6ನೇ ಬಾರಿ ದೇಶದ ‘ಅತ್ಯಂತ ಸ್ವಚ್ಛ ನಗರಿ’ ಎಂಬ ಖ್ಯಾತಿ ಮಧ್ಯಪ್ರದೇಶದ ಇಂದೋರ್ ಪಾಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಶಸ್ತಿಯನ್ನು ಬುಧವಾರ ನೀಡಿದರು.ಗುಜರಾತ್‌ನ ಸೂರತ್ ನಗರ ದ್ವಿತೀಯ, ಉತ್ತರಪ್ರದೇಶದ ಆಗ್ರ ತೃತೀಯ ಸ್ಥಾನ ಪ್ರಶಸ್ತಿ ಪಡೆಯಿತು. 2023 ನೇ ಸಾಲಿನ ದೇಶದ ಸ್ಮಾರ್ಟ್ ಸಿಟಿ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ರಾಜ್ಯವಾರು ಪೈಕಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ.ಮಧ್ಯಪ್ರದೇಶದ ಇಂದೋರ್ ದೇಶದ ಅತ್ಯಂತ […]