ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ಹಗರಣ: ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ.

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ) ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿ ಅವರ ಕಿರಿಯ ಸಹೋದರ ನೇಹಲ್ ಮೋದಿಯನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನೇಹಲ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಮೆರಿಕಕ್ಕೆ ಜಂಟಿಯಾಗಿ ಮನವಿ ಸಲ್ಲಿಸಿದ್ದವು. ನೇಹಲ್ ಮೋದಿಯನ್ನು ಶುಕ್ರವಾರ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಭಾರತಕ್ಕೆ ಮಾಹಿತಿ ನೀಡಿದ್ದಾರೆ. ‘ಈ ಪ್ರಕರಣದ ಮುಂದಿನ ವಿಚಾರಣೆ […]
ಐ ಲವ್ ಯೂ ಹೇಳುವುದು ಭಾವನೆಯ ಅಭಿವ್ಯಕ್ತಿ, ಲೈಂಗಿಕ ಕಿರುಕುಳವಲ್ಲ:ಹೈ ಕೋರ್ಟ್

ಮಹಾರಾಷ್ಟ್ರ: ಐ ಲವ್ ಯೂ ಎಂದು ಹೇಳುವುದು ಭಾವನೆ ಅಭಿವ್ಯಕ್ತಿ. ಈ ಮಾತಿನ ಹಿಂದೆ ಲೈಂಗಿಕ ಉದ್ದೇಶ ಇರುವುದಿಲ್ಲ ಎಂದು ಮುಂಬೈ ಹೈ ಕೋರ್ಟ್ ನ ನಾಗಪುರ ಪೀಠ ಹೇಳಿದೆ. 17 ವರ್ಷದ ಬಾಲಕಿಗೆ 35 ವರ್ಷದ ವ್ಯಕ್ತಿಯೊಬ್ಬ ಐ ಲವ್ ಯೂ ಎನ್ನುವ ಮೂಲಕ ಪ್ರೇಮ ನಿವೇದನೆ ಮಾಡಿದ್ದ ಇದರ ವಿರುದ್ಧ ಬಾಲಕಿ ದೂರು ನೀಡಿದ್ದಳು. ಆರೋಪಿಯ ಮೇಲೆ ಪೊಲೀಸರು ಫೋಕ್ಸೋ ಕೇಸ್ ದಾಖಲಿಸಿದ್ದರು.ಈ ಪ್ರಕರಣವಾಗಿ ಹತ್ತು ವರ್ಷಗಳಾದ ಮೇಲೆ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ […]
ಮಾನವನ ದೇಹಕ್ಕೆ ಹಂದಿ ಲಿವರ್ ಅಳವಡಿಸಿ ಅದ್ಬುತವನ್ನೇ ಸೃಷ್ಟಿಸಿದ್ರು ಚೀನಾ ವೈದ್ಯರು.

ವುಹಾಂಗ್: ಚೀನಾದ ವೈದ್ಯರು ಹಲವು ಯಶಸ್ವಿ ಪ್ರಯೋಗ ಮಾಡುವಲ್ಲಿ ಸಂಶೋಧನೆ ಮಾಡುತ್ತಲೇ ಬಂದಿದ್ದಾರೆ. ಅಂತಹ ಇನ್ನೊಂದು ಐತಿಹಾಸಿಕ ಅದ್ಬುತವೊಂದನ್ನು ಈಗ ಮತ್ತೆ ಸಾಧಿಸಿದ್ದಾರೆ ಅದೆಂದರೆ ಮಾನವನ ದೇಹಕ್ಕೆ ಮೊದಲ ಬಾರಿಗೆ ಜೀನ್-ಸಂಪಾದಿತ ಹಂದಿಯ ಯಕೃತ್ತನ್ನು (Pig Liver) ಮಾನವ ದೇಹಕ್ಕೆ ಕಸಿ ಮಾಡಿ ಯಶಸ್ವಿಯಾದದ್ದು ಹೌದು. ಚೀನಾ ವೈದ್ಯರ ಈ ಪ್ರಯೋಜ ವೈದ್ಯಕೀಯ ಕ್ಷೇತ್ರದ ಅಚ್ಚರಿಗಳಲ್ಲೊಂದು ಎಂದು ಬಿಂಬಿಸಲಾಗುತ್ತಿದೆ. ಈ ಕಸಿ ಮೂಲಕ ಭವಿಷ್ಯದಲ್ಲಿ ಅಂಗಗಳ ದೊಡ್ಡ ಕೊರತೆಯನ್ನು ನೀಗಿಸಲು ಹಂದಿಯ ಅಂಗಗಳನ್ನು ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. […]
ಈ ಸಿಹಿತಿಂಡಿಯ ಬೆಲೆ ಬರೋಬ್ಬರಿ 50,000 ರೂಪಾಯಿ, ಅಂತದ್ದೇನಿದೆಯಪ್ಪಾ ಇದ್ರಲ್ಲಿ ಅಂತೀರಾ?

ಉತ್ತರ ಭಾರತದ ಕಡೆ ಹೋಳಿ ಹಬ್ಬಕ್ಕೇ ತುಸು ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಅದರಲ್ಲೂ ಈ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗೆ ಇರುವಷ್ಟು ಬೇಡಿಕೆ ಬೇರೆ ಯಾವುದಕ್ಕೂ ಇಲ್ಲ. ಇದೀಗ ಉತ್ತರಪ್ರದೇಶದ ಗುಜಿಯಾ ಎಂದು ಕರೆಯಲಾಗುವ ಒಂದು ಬಗೆಯ ಫೇಮಸ್ ಸಿಹಿತಿಂಡಿ ಬೆಲೆಯ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ. ಅಂದ ಹಾಗೆ ಈ ಸಿಹಿತಿಂಡಿಯ ರೇಟು ಬರೋಬ್ಬರಿ ಪ್ರತಿ ಕಿಲೋಗೆ 50,000 ರೂಪಾಯಿ. ಹೌದು ಅಂದರೆ ಒಂದು ಪೀಸ್ ನ ಬೆಲೆ 1,300, ಅಂತದ್ದೇನಿದೆಯಪ್ಪಾ ಈ ಸಿಹಿತಿಂಡಿಯಲ್ಲಿಎಂದು ನೀವು ಕೇಳಬಹುದು. ಉತ್ತರ […]
ದೆಹಲಿ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ; ಬಿಜೆಪಿ ಘೋಷಣೆ.

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಪದಗ್ರಹಣಕ್ಕೆ ನಾಳೆ ಮುಹೂರ್ತ ನಿಗದಿಯಾಗಿದ್ದರೂ ಮುಖ್ಯಮಂತ್ರಿಯ ಹೆಸರನ್ನು ಮಾತ್ರ ಬಿಜೆಪಿ ಬಿಟ್ಟುಕೊಟ್ಟಿರಲಿಲ್ಲ. ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿದಾಗಿನಿಂದಲೂ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಶ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಸಿಎಂ ರೇಸ್ನಲ್ಲಿ ಕಾಣಿಸಿಕೊಂಡಿತ್ತು. ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ […]