ಮುಂದಿನ ತಿಂಗಳವರೆಗೆ ಏರುಗತಿಯಲ್ಲಿರಲಿದೆ ಈರುಳ್ಳಿ ಬೆಲೆ: ಡಿಸೆಂಬರ್ ವೇಳೆಗೆ ಇಳಿಕೆ ಸಾಧ್ಯತೆ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಬೆಂಗಳೂರಿನ ಯಶವಂತಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರತಿ ಕಿಲೋಗ್ರಾಂಗೆ ₹ 65-70ರಂತೆ ಈರುಳ್ಳಿ ಮಾರಾಟ ಮಾಡಿದೆ. ನವರಾತ್ರಿಯ ಬಳಿಕ ಈರುಳ್ಳಿ ಬೆಲೆಯು ಸತತ ಏರಿಕೆಯ ಹಾದಿ ತುಳಿದಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರ, ಈರುಳ್ಳಿಯ ಗರಿಷ್ಠ ಬೆಲೆ ಪ್ರತಿ ಕಿಲೋಗ್ರಾಂಗೆ ₹ 70 ರಷ್ಟಿದ್ದು, ಈ ಏರುಮುಖ ಪ್ರವೃತ್ತಿ ಡಿಸೆಂಬರ್‌ವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಈರುಳ್ಳಿಯ ಒಳಹರಿವು ಕಡಿಮೆಯಾಗಿದ್ದು, ಹೆಚ್ಚಿನ ದರಕ್ಕೆ ಕಾರಣವಾಗುತ್ತದೆ. […]

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಪದಕಗಳ ಗಡಿ ದಾಟಿ ಇತಿಹಾಸ ರಚಿಸಿದ ಭಾರತ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಭಾರತ 100 ಪದಕಗಳ ಗಡಿಯನ್ನು ಮುಟ್ಟಿದೆ. ಭಾರತೀಯ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ಸಮರ್ಪಣೆ ಮತ್ತು ಪರಿಶ್ರಮವು ಈ ಯಶಸ್ಸಿಗೆ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಮೈಲಿಗಲ್ಲನ್ನು ಶ್ಲಾಘಿಸಿದ್ದಾರೆ.

ಕರಡು ವರದಿಗೆ ಸಂಸದೀಯ ಸ್ಥಾಯಿ ಸಮಿತಿ ತಡೆ: ಹೊಸ ಕ್ರಿಮಿನಲ್​ ಕಾನೂನು ಮಸೂದೆ

ನವದೆಹಲಿ: ದೇಶದಲ್ಲಿ ಅಸ್ತಿತ್ವದಲ್ಲಿರುವ ಐಪಿಸಿ​, ಸಿಆರ್​ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಸೇರಿ ಕ್ರಿಮಿನಲ್​ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳ ಕರಡು ವರದಿಯನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು  ಶುಕ್ರವಾರ ತಡೆಹಿಡಿದಿದೆ. ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ-2023 ಮಸೂದೆಗಳ ಕರಡು ವರದಿಯನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ತಡೆಹಿಡಿದಿದೆ. ಈ ಮೂರು ಮಸೂದೆಗಳ ಕರಡು ವರದಿಗಳನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ವಹಿಸಲಾಗಿದೆ. […]

ಬೇಹುಗಾರಿಕೆ ಆರೋಪದಡಿ 8 ಭಾರತೀಯ ಯೋಧರಿಗೆ ಮರಣದಂಡನೆ ಶಿಕ್ಷೆ ಘೋಷಿಸಿದ ಕತಾರ್; ಎಲ್ಲ ಕಾನೂನು ಆಯ್ಕೆಗಳ ಪರಿಗಣನೆಗೆ ಭಾರತ ಸಿದ್ದ

ಹೊಸದಿಲ್ಲಿ: ಇಸ್ರೇಲ್ ಪರವಾಗಿ ಕತಾರ್ ನಲ್ಲಿ ಗೂಢಾಚಾರಿಕೆ ಮಾಡಿ ದೇಶದ್ರೋಹ ಮಾಡಿದ್ದಾರೆ ಎನ್ನುವ ಆರೋಪ ಹೊರಿಸಿ ಭಾರತೀಯ ನೌಕಾಪಡೆಯ ಯೋಧರಿಗೆ ಕತಾರ್ ಮರಣದಂಡನೆ ಶಿಕ್ಷೆ ಘೋಷಿಸಿದೆ. ಮರಣದಂಡನೆಗೆ ಗುರಿಯಾಗಿರುವ ಎಂಟು ಭಾರತೀಯ ನೌಕಾಪಡೆ ಯೋಧರು ಕತಾರ್ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಎಂಟು ಪುರುಷರಲ್ಲಿ ಒಂದು ಕಾಲದಲ್ಲಿ ಭಾರತೀಯ ಯುದ್ಧ ನೌಕೆಗಳಿಗೆ ಕಮಾಂಡರ್ ಆಗಿದ್ದ ಅಲಂಕೃತ ಅಧಿಕಾರಿಗಳು ಇದ್ದಾರೆ. ಆಗಸ್ಟ್ 2022 ರಲ್ಲಿ ಬಂಧಿತರಾದ ಯೋಧರು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, […]

ಸಂಸತ್ತಿನಲ್ಲಿ ಪಶ್ನೆ ಕೇಳಲು ಲಂಚ ತೆಗೆದುಕೊಂಡ ಆರೋಪ: ಅ.31 ರಂದು ಹಾಜರಾಗುವಂತೆ ಟಿಎಂಸಿ ಸದಸ್ಯೆಗೆ ಲೋಕಸಭೆಯ ನೈತಿಕ ಸಮಿತಿ ಫರ್ಮಾನು

ನವದೆಹಲಿ: ಲೋಕಸಭೆಯ ನೈತಿಕ ಸಮಿತಿಯು ಇಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯೆ ಮಹುವಾ ಮೊಯಿತ್ರಾ ಅವರ ವಿರುದ್ಧದ ‘ಪ್ರಶ್ನೆಗಾಗಿ ನಗದು’ ಆರೋಪಗಳಿಗೆ ಸಂಬಂಧಿಸಿದಂತೆ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಅಕ್ಟೋಬರ್ 31 ರಂದು ಸಮಿತಿ ಮುಂದೆ ಹಾಜರಾಗುವಂತೆ ಕೇಳಿಕೊಂಡಿದೆ. ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ನೇತೃತ್ವದ ನೈತಿಕ ಸಮಿತಿಯು ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಮೊಯಿತ್ರಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಸಹಾಯವನ್ನು ಕೋರಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು […]