ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ರೈಲುಗಳ ಮಧ್ಯೆ ಡಿಕ್ಕಿ: 13 ಸಾವು; 50 ಜನರಿಗೆ ಗಾಯ

ಅಮರಾವತಿ: ಒಡಿಶಾದಲ್ಲಿ 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಮೂರು ರೈಲುಗಳ ಭೀಕರ ಡಿಕ್ಕಿ ನಡೆದ ತಿಂಗಳುಗಳ ಬಳಿಕ ಭಾನುವಾರದಂದು ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಿಗ್ನಲ್ ಅನ್ನು ದಾಟಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ. ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು […]

ಕೇರಳದ ಕಲಮಸ್ಸೆರಿಯ ಕ್ರೈಸ್ತ ಪ್ರಾರ್ಥನಾ ಸಭೆಯಲ್ಲಿ ಸ್ಪೋಟ; ಒಂದು ಸಾವು ಹಲವರಿಗೆ ಗಾಯ

ಎರ್ನಾಕುಲಂ: ಇಂದು ಬೆಳಗ್ಗೆ ಕೇರಳದ ಎರ್ನಾಕುಲಂನ ಕಲಮಸ್ಸೆರಿ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯೊಂದರಲ್ಲಿ ಅನೇಕ ಸ್ಫೋಟಗಳು ಸಂಭವಿಸಿದ ನಂತರ ಒಬ್ಬರು ಸಾವನ್ನಪ್ಪಿದ್ದು ಮತ್ತು ಹಲವರು ಗಾಯಗೊಂಡಿದ್ದಾರೆ. #WATCH | Kerala LoP and state Congress President VD Satheesan says, "I was told that there were two blasts and there was a fire. First, there was a major blast. The second one was minor. […]

ಮಹೀಂದ್ರಾ ಶ್ರೇಣಿಯ ಯಾವುದೇ ಕಾರನ್ನು ಆಯ್ಕೆ ಮಾಡುವ ಆಹ್ವಾನ; ಏಷ್ಯನ್ ಪ್ಯಾರಾ ಗೇಮ್ಸ್‌ ಚಿನ್ನದ ಪದಕ ವಿಜೇತೆ ಶೀತಲ್ ದೇವಿಗೆ ಆನಂದ್ ಮಹೀಂದ್ರಾ ಬಹುಮಾನ

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಜೀವನದಲ್ಲಿ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವನ್ನು ಪ್ರದರ್ಶಿಸುವ ವ್ಯಕ್ತಿಗಳ ಬೆಂಬಲಕ್ಕೆ ನಿಂತು ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಉದಾಹರಣೆಯಲ್ಲಿ, 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ತೋಳುರಹಿತ ಮಹಿಳಾ ಬಿಲ್ಲುಗಾರ್ತಿ, ಭಾರತಕ್ಕೆ ಚಿನ್ನದ ಪದಕಗಳನ್ನು ಭದ್ರಪಡಿಸಿದ ಗಮನಾರ್ಹ ಮತ್ತು ಅಸಾಮಾನ್ಯ ಪ್ರತಿಭೆ ಶೀತಲ್ ದೇವಿ ಅವರಿಗೆ ವ್ಯಾಪಾರ ಉದ್ಯಮಿ ತಮ್ಮ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತಾ ತಮ್ಮ ಕಂಪನಿಯ ಕಾರುಗಳಲ್ಲಿ ಆಕೆಗೆ ಇಷ್ಟಬಂದ ಯಾವುದೇ ಕಾರನ್ನು ಆಯ್ಕೆ ಮಾಡುವಂತೆ […]

ಒಂದೇ ಕುಟುಂಬದ 7 ಜನ ಸಾವು : ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

ರಾಜಸ್ಥಾನ: ಕಾರು ಮತ್ತು ಟ್ರೋಲಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಹನುಮಾನ್​ಗಡ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ರಾಜಸ್ಥಾನದ ಹನುಮಾನ್​ಗಡ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹನುಮಾನ್​ಗಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಎಸ್​ಪಿ ರಾಜೀವ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾರಿನಲ್ಲಿ 9 ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಏಳು ಜನ […]

ವರ್ಷದ ಕೊನೆಯ ಚಂದ್ರಗ್ರಹಣ ಗೋಚರ ಮೋಕ್ಷದ ನಂತರ ದೇವಾಲಯಗಳ ಶುದ್ಧೀಕರಣ, ವಿಶೇಷ ಪೂಜೆ

ನವದೆಹಲಿ: 2023ರ ಕೊನೆಯ ಚಂದ್ರಗ್ರಹಣ ಶನಿವಾರ ರಾತ್ರಿ ಸಂಭವಿಸಿತು.ಖಂಡಗ್ರಾಸ ಗ್ರಹಣವು ಒಟ್ಟು 3 ಗಂಟೆ 7 ನಿಮಿಷಗಳ ಕಾಲ ನಡೆಯಿತು. ಅಕ್ಟೋಬರ್ 29ರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭವಾದ ಗ್ರಹಣವು 2 ಗಂಟೆ 24 ನಿಮಿಷಕ್ಕೆ ಕೊನೆಗೊಂಡಿದೆ. 2023ರ ಕೊನೆಯ ಚಂದ್ರಗ್ರಹಣ ಕೊನೆಗೊಂಡಿದೆ. ಗ್ರಹಣ ಮೋಕ್ಷದ ನಂತರ ದೇಶದ ವಿವಿಧ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಜಗತ್ತಿನ ಹಲವೆಡೆ ಜನರು ಆಗಸದಲ್ಲಿ ಸಂಭವಿಸಿದ ಕೌತುಕ ವೀಕ್ಷಿಸಿದರು. ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ: ದೇಶದ ಪ್ರಸಿದ್ಧ […]