ಮಣಿಪುರದ ಮೋರೆಹ ಗಡಿ ಪಟ್ಟಣದಲ್ಲಿ ಉಗ್ರರ ಗುಂಡಿಗೆ ಎಸ್‌ಡಿಪಿಒ ಬಲಿ

ಇಂಫಾಲ (ಮಣಿಪುರ): ಶಂಕಿತ ಬುಡಕಟ್ಟು ಉಗ್ರಗಾಮಿಗಳ ಗುಂಡಿಗೆ ಉಪವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಣಿಪುರದ ತೆಂಗನೌಪಾಲ್​ ಜಿಲ್ಲೆಯ ಮೋರೆಹ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬುಲೆಟ್​ ತಗುಲಿದ್ದ ಎಸ್​ಡಿಪಿಒ ಚಿಂಗ್ತಮ್​ ಆನಂದ್ ಅವರನ್ನು ಮೋರೆಹದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷವಾಗಿ ಮೊರೆಹದಲ್ಲಿ ನೆಲೆಗೊಂಡಿರುವ ಹಲವಾರು ನಾಗರಿಕ ಸಮಾಜ ಸಂಘಟನೆಗಳು ಗಡಿ ಪಟ್ಟಣದಿಂದ ರಾಜ್ಯ ಪಡೆಗಳನ್ನು ತೆಗೆದುಹಾಕಲು ಒತ್ತಾಯಿಸಿದ ವಾರದ ನಂತರ ಈ ಘಟನೆ ನಡೆದಿದೆ. ಮಣಿಪುರದ […]

ಭಾರತದಲ್ಲಿ ಶೇ 10ರಷ್ಟು ಹೆಚ್ಚಳ : ವಿಶ್ವದಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿತ

ನವದೆಹಲಿ: 2023ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಚಿನ್ನದ ಬೇಡಿಕೆಯು ಶೇ 6ರಷ್ಟು ಕುಸಿದು 1,147.5 ಟನ್​ಗಳಿಗೆ ತಲುಪಿದೆ ಎಂದು ವರ್ಲ್ಡ್​ ಗೋಲ್ಡ್​ ಕೌನ್ಸಿಲ್ (ಡಬ್ಲ್ಯುಜಿಸಿ) ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಚಿನ್ನದ ಗಟ್ಟಿಗಳು ಮತ್ತು ನಾಣ್ಯಗಳ ಬೇಡಿಕೆ ಕಡಿಮೆಯಾಗಿರುವುದು ಮತ್ತು ಕೇಂದ್ರೀಯ ಬ್ಯಾಂಕುಗಳಿಂದ ಖರೀದಿ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ಇಳಿಮುಖವಾಗಿದೆ. 2023ರ ಮೂರನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದೆ. ಜಾಗತಿಕವಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಬೇಡಿಕೆ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 14ರಷ್ಟು […]

ಶ್ರೀ ಸೋಮನಾಥ ಟ್ರಸ್ಟ್ ನ ಅಧ್ಯಕ್ಷರಾಗಿ ಪ್ರಧಾನಿ ಮೋದಿ ಮರು ಆಯ್ಕೆ: ಅಧಿಕಾರಾವಧಿ ಐದು ವರ್ಷಗಳಿಗೆ ಏರಿಕೆ

ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೆರಾವಲ್ ಬಳಿಯ ಐತಿಹಾಸಕ ಮಾನ್ಯತೆ ಇರುವ ಸೋಮನಾಥ ದೇವಾಲಯದ ಮಾಲೀಕತ್ವವನ್ನು ಹೊಂದಿರುವ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಆದ ಶ್ರೀ ಸೋಮನಾಥ ಟ್ರಸ್ಟ್ (ಎಸ್‌ಎಸ್‌ಟಿ) ನ ಅಧ್ಯಕ್ಷರಾಗಿ ಐದು ವರ್ಷಗಳ ಕಾಲದವರೆಗೆ ಆಯ್ಕೆಯಾಗಿದ್ದಾರೆ. ಗುಜರಾತ್‌ನ ಚಾರಿಟಿ ಕಮಿಷನರ್ ಇತ್ತೀಚೆಗೆ ಟ್ರಸ್ಟ್‌ನ ಕರಾರು ಪತ್ರಕ್ಕೆ ತಿದ್ದುಪಡಿಯನ್ನು ಅನುಮೋದಿಸಿದ ನಂತರ, ಎಸ್‌ಎಸ್‌ಟಿ ಅಧ್ಯಕ್ಷರ ಅಧಿಕಾರಾವಧಿಯು ಒಂದು ವರ್ಷಕ್ಕೆ ಬದಲಾಗಿ ಐದು ವರ್ಷಗಳಾಗಿರುತ್ತದೆ ಎಂದು ಟ್ರಸ್ಟಿಗಳು ತಿಳಿಸಿದ್ದಾರೆ. ಸೋಮವಾರ ಗಾಂಧಿನಗರದ ರಾಜಭವನದಲ್ಲಿ ಕರೆಯಲಾದ ಎಸ್‌ಎಸ್‌ಟಿಯ ಟ್ರಸ್ಟಿಗಳ […]

81.5 ಕೋಟಿ ಭಾರತೀಯರ ದತ್ತಾಂಶ ಡಾರ್ಕ್ ವೆಬ್ ನಲ್ಲಿ ಮಾರಾಟ? ಅಮೇರಿಕಾ ಏಜೆನ್ಸಿಯಿಂದ ಬಹಿರಂಗ

ನವದೆಹಲಿ: 81.5 ಕೋಟಿ ಭಾರತೀಯರಿಗೆ ಸೇರಿದ ಸೂಕ್ಷ್ಮ ಮಾಹಿತಿಯು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದ್ದು ಇದು ಭಾರತದ ಇತಿಹಾಸದಲ್ಲಿ ಅತಿದೊಡ್ಡ ಡೇಟಾ ಉಲ್ಲಂಘನೆಯಾಗಿದೆ. ಡಾರ್ಕ್ ವೆಬ್‌ನಲ್ಲಿ ಕದ್ದ ಮಾಹಿತಿಯನ್ನು ಜಾಹೀರಾತು ಮಾಡಿದ ‘pwn0001’ ಎಂಬ ಹ್ಯಾಕರ್ ಸೋರಿಕೆಯನ್ನು ಗಮನಕ್ಕೆ ತಂದಿದೆ. ಕೋವಿಡ್-19 ಪರೀಕ್ಷೆಯ ಸಮಯದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಂಗ್ರಹಿಸಿದ ಮಾಹಿತಿಯಿಂದ ಈ ಡೇಟಾ ಕದಿಯಲಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ, ಸೋರಿಕೆಯ ಕೇಂದ್ರ ಬಿಂದು ಇನ್ನೂ ತಿಳಿದಿಲ್ಲ. ಹ್ಯಾಕರ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಕದ್ದ […]

ದೆಹಲಿ ಮದ್ಯ ನೀತಿ ಪ್ರಕರಣ: ನ.2 ರಂದು ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ಕೇಜ್ರಿವಾಲ್ ಗೆ ಇಡಿ ಸಮನ್ಸ್

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ED) ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕರೆಸಿದೆ. ನವೆಂಬರ್ 2 ರಂದು (ಗುರುವಾರ) ತನ್ನ ಮುಂದೆ ಹಾಜರಾಗುವಂತೆ ಹಣಕಾಸು ನಿಗಾ ಸಂಸ್ಥೆ ಅರವಿಂದ್ ಕೇಜ್ರಿವಾಲ್‌ಗೆ ತಿಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಕ್ಟೋಬರ್ 4 ರಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ […]