ಮಹೀಂದ್ರಾ XUV 3XO ಬಿಡುಗಡೆ: ಆರಂಭಿಕ (ಎಕ್ಸ್ ಶೋ ರೂಂ) ಬೆಲೆ ರೂ. 7.49 ಲಕ್ಷ ರೂ.

ನವದೆಹಲಿ: ಮಹೀಂದ್ರಾ ಅಂತಿಮವಾಗಿ XUV 3XO ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ. 7.49 ಲಕ್ಷದಿಂದ ಪ್ರಾರಂಭ. ನವೀಕರಿಸಿದ XUV 3XO ಹೊಸ ವಿನ್ಯಾಸ, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನ ಮತ್ತು ಅದರ ಪೂರ್ವವರ್ತಿಯಾದ XUV 300 ಗಿಂತ ವರ್ಧಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಮಹೀಂದ್ರಾ XUV 3XO ಅನ್ನು MX1, MX2, MX3, MX2 Pro, MX3 Pro, AX5, AX5L, AX7, ಮತ್ತು AX7L ವೇರಿಯಂಟ್ ಗಳಲ್ಲಿ ಹೊಂದಬಹುದು. ವಿನ್ಯಾಸಕ್ಕೆ […]

ಲಂಡನ್: ಕೋವಿಡ್ -19 ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದೆಂದು ಒಪ್ಪಿಕೊಂಡ ಅಸ್ಟ್ರಾಜೆನೆಕಾ

ಲಂಡನ್: ಗಮನಾರ್ಹ ಬೆಳವಣಿಗೆಯಲ್ಲಿ ಅಸ್ಟ್ರಾಜೆನೆಕಾ, ತನ್ನ ಕೋವಿಡ್ -19 ಲಸಿಕೆ ಅಪರೂಪದ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಕೋವಿಶೀಲ್ಡ್ ಮತ್ತು ವ್ಯಾಕ್ಸ್‌ಜೆವ್ರಿಯಾ ಎಂಬ ಬ್ರಾಂಡ್‌ಗಳ ಅಡಿಯಲ್ಲಿ ಜಾಗತಿಕವಾಗಿ ಮಾರಾಟ ಮಾಡಲಾಗಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಲಸಿಕೆಯಿಂದ ಉಂಟಾಗುವ ಗಂಭೀರವಾದ ಸಮಸ್ಯೆಗಳು ಮತ್ತು ಸಾವುಗಳನ್ನು ಆರೋಪಿಸಿ ಔಷಧೀಯ ಕಂಪನಿಯು ಮೊಕದ್ದಮೆಯನ್ನು ಎದುರಿಸುತ್ತಿದೆ. ಏಪ್ರಿಲ್ 2021 ರಲ್ಲಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಪಡೆದ ನಂತರ ಶಾಶ್ವತ ಮಿದುಳಿನ ಸಮಸ್ಯೆ […]

ಇವಿಎಂ ಮತದಾನ ವ್ಯವಸ್ಥೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್: ಬ್ಯಾಲಟ್ ಬಾಕ್ಸ್ ಮತದಾನಕ್ಕೆ ನಕಾರ

ನವದೆಹಲಿ: ಏಪ್ರಿಲ್ 26 ರಂದು ಸುಪ್ರೀಂ ಕೋರ್ಟ್ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತದಾನದ ವ್ಯವಸ್ಥೆಯನ್ನು ಎತ್ತಿಹಿಡಿದಿದೆ ಮತ್ತು ಕಾಗದದ ಮತಪತ್ರಗಳನ್ನು (ಬ್ಯಾಲಟ್ ಬಾಕ್ಸ್) ಪುನರುಜ್ಜೀವನಗೊಳಿಸುವ ಮನವಿಯನ್ನು ತಿರಸ್ಕರಿಸಿದೆ. ಒಂದು ಸಂಸ್ಥೆ ಅಥವಾ ವ್ಯವಸ್ಥೆಯ ಬಗ್ಗೆ “ಕುರುಡು ಅಪನಂಬಿಕೆ” ಎಂದು ಹೇಳುವುದು ಅನಗತ್ಯ ಸಂದೇಹವನ್ನು ಹುಟ್ಟುಹಾಕುತ್ತದೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು, ಲೋಕಸಭೆಗೆ ಎರಡನೇ ಹಂತದ ಸಾರ್ವತ್ರಿಕ ಚುನಾವಣೆಗೆ ಹೊಂದಿಕೆಯಾಗುವ ತೀರ್ಪಿನಲ್ಲಿ, ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ […]

ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಮತ ಚಲಾವಣೆ

ತಿರುವನಂತಪುರಂ: ದೇಶದ ಹೆಮ್ಮೆಯ ಸಂಸ್ಥೆ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಕೇರಳದ ತಿರುವನಂತಪುರಂನಲ್ಲಿರುವ ಮತಗಟ್ಟೆಯಲ್ಲಿ ಇತರ ಮತದಾರರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಕಾಂಗ್ರೆಸ್ಸಿನ ‘ಸಂಪತ್ತಿನ ಸಮಾನ ಹಂಚಿಕೆ’ ಬಳಿಕ ‘ಪಿತ್ರಾರ್ಜಿತ ತೆರಿಗೆ’ ಹೇಳಿಕೆ ವಿರುದ್ದ ಹರಿಹಾಯ್ದ ಪ್ರಧಾನಿ ಮೋದಿ

ನವದೆಹಲಿ: ಸುರ್ಗುಜಾ (ಛತ್ತೀಸ್‌ಗಢ): ಹಿರಿಯ ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ ಅವರ ಮುಖ್ಯ ಸಲಹೆಗಾರ ಎಂದೇ ಬಿಂಬಿತವಾಗಿರುವ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಬಗ್ಗೆ ಬಿಜೆಪಿಯ ವಾಗ್ದಾಳಿಯನ್ನು ಮುನ್ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷವು ಪಿತ್ರಾರ್ಜಿತ ತೆರಿಗೆಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ನ ಗ್ಯಾರಂಟಿಗಳನ್ನು ಪೂರೈಸಲು ಮಧ್ಯಮವರ್ಗದವರು ಹೆಚ್ಚಿನ ತೆರಿಗೆ ಪಾವತಿಸಲು ತಯಾರಾಗಿರಬೇಕು ಎನ್ನುವ ಹೇಳಿಕೆ ನೀಡಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ […]