ಪಾಕಿಸ್ತಾನದ ಹಲವೆಡೆ ಇಂಟರ್​ನೆಟ್​ ಸಂಪೂರ್ಣ ಸ್ಥಗಿತ : ಇಮ್ರಾನ್ ಪಕ್ಷದಿಂದ ವರ್ಚುವಲ್​ ಸಭೆ

ಲಾಹೋರ್​ (ಪಾಕಿಸ್ತಾನ): ಅಪ್ಲಿಕೇಶನ್‌ಗಳು, ವಿಶೇಷವಾಗಿ ವೆಬ್‌ಸೈಟ್ ಆವೃತ್ತಿಗಳು ಸುಮಾರು 8 ಗಂಟೆಯಿಂದ ಸ್ಥಗಿತಗೊಂಡಿವೆ. ಸ್ಥಳೀಯ ಸಮಯ ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿ, ಲಾಹೋರ್, ಮೀರ್​ ಪುರ್ ಖಾಸ್ ಮತ್ತು ರಾವಲ್ಪಿಂಡಿ ನಗರಗಳು ದೇಶದ ಅತಿ ಹೆಚ್ಚು ಇಂಟರ್​ನೆಟ್​ ಸ್ಥಗಿತದ ತೊಂದರೆ ಅನುಭವಿಸಿದ ನಗರಗಳಾಗಿವೆ. ಕೆಲವು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಲು WhatsApp ಅನ್ನು ಬಳಸಿಕೊಂಡಿದ್ದಾರೆ. ಜೈಲಿನಲ್ಲಿರುವ ಇಮ್ರಾನ್ ಖಾನ್​ ಪಕ್ಷವು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ವರ್ಚುವಲ್ ಸಭೆಯನ್ನು ಆಯೋಜಿಸಿತ್ತು. ಆದರೆ ಅದಕ್ಕೂ ಮೊದಲು X, […]

16 ಜನ ಸಾವು, ಅನೇಕರಿಗೆ ಗಾಯ: ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದಲ್ಲಿ ಗುಂಡಿನ ದಾಳಿ

ಗ್ವಾನಾಜುವಾಟೊ (ಮೆಕ್ಸಿಕೋ): ಗ್ವಾನಾಜುವಾಟೊ ರಾಜ್ಯದ ಅಧಿಕಾರಿಗಳು ಗುಂಡಿನ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸಲ್ವಾಟಿಯೆರಾ ನಗರದಲ್ಲಿ ಹಿಂಸಾಚಾರ ನಡೆದಿದೆ. ಇದುವರೆಗೆ, 16 ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ ಅಂತಾ ರಾಜ್ಯ ಪ್ರಾಸಿಕ್ಯೂಟರ್ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ. ಸೆಂಟ್ರಲ್ ಮೆಕ್ಸಿಕೋದಲ್ಲಿ ಭಾನುವಾರ ಮುಂಜಾನೆ ಕ್ರಿಸ್‌ಮಸ್ ಧಾರ್ಮಿಕ ಸಮಾರಂಭದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 16ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.ಮೆಕ್ಸಿಕೋದ […]

ಒಂದೇಟಿಗೆ ನಾಲ್ಕು ಹಕ್ಕಿ!! ಒಂದೇ ಬಾರಿಗೆ ನಾಲ್ಕು ಟಾರ್ಗೆಟ್ ಗಳನ್ನು ಧ್ವಂಸ ಮಾಡಿ ಶಕ್ತಿ ಪ್ರದರ್ಶಿಸಿದ ಭಾರತದ ಆಕಾಶ್ ಮಿಸೈಲ್ ಲಾಂಚರ್!

ಹೈದರಾಬಾದ್: ಆಂಧ್ರಪ್ರದೇಶದ ಸೂರ್ಯಲಂಕಾ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಇತ್ತೀಚೆಗೆ ನಡೆದ ‘ಅಸ್ತ್ರಶಕ್ತಿ 2023’ ವಾಯು ವ್ಯಾಯಾಮದ ಸಮಯದಲ್ಲಿ ಭಾರತದಲ್ಲಿ ನಿರ್ಮಿಸಲಾದ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಶಕ್ತಿಯನ್ನು ಪ್ರದರ್ಶಿಸಲಾಯಿತು. ಡಿಸೆಂಬರ್ 12 ರಂದು ಭಾರತೀಯ ವಾಯುಪಡೆ (ಐಎಎಫ್) ನಡೆಸಿದ ಅಸ್ತ್ರಶಕ್ತಿ ವ್ಯಾಯಾಮದ ಸಮಯದಲ್ಲಿ ಒಂದೇ ಒಂದು ಆಕಾಶ್ ಕ್ಷಿಪಣಿ ವ್ಯವಸ್ಥೆಯು ಏಕಕಾಲದಲ್ಲಿ ನಾಲ್ಕು ಮಾನವರಹಿತ ವೈಮಾನಿಕ ಗುರಿಗಳನ್ನು ಹೊಡೆದುರುಳಿಸಿದೆ. ಒಂದೇ ಫೈರಿಂಗ್ ಘಟಕವನ್ನು ಬಳಸಿಕೊಂಡು ಕಮಾಂಡ್ ಮಾರ್ಗದರ್ಶನದ ಮೂಲಕ ಸುಮಾರು 30 ಕಿಮೀ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಾಲ್ಕು ಗುರಿಗಳನ್ನು […]

ಸಂಸತ್ತಿನಲ್ಲಿ ಭದ್ರತಾ ಲೋಪ: ತನಿಖೆ ಚುರುಕು ಗೊಳಿಸಿದ ಪೊಲೀಸರು; ಮಾಸ್ಟರ್ ಮೈಂಡ್ ವಶಕ್ಕೆ

ನವದೆಹಲಿ: ಸಂಸತ್ತಿನ ಮೇಲೆ 2001 ರ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ದಿನವಾದ ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಪ್ರಕರಣ ಕುರಿತು ದೆಹಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಯ ‘ಮಾಸ್ಟರ್ ಮೈಂಡ್’ ಲಲಿತ್ ಝಾನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಯೋಜನೆಯ ವಿವರಗಳನ್ನು ಪೊಲೀಸರಿಗೆ ಬಹಿರಂಗಪಡಿಸಿರುವ ಆತ, ಇದರಲ್ಲಿ ‘ಪ್ಲಾನ್ ಎ ಮತ್ತು ಪ್ಲಾನ್ ಬಿ’ ಕೂಡ ಸೇರಿತ್ತು ಎಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಝಾ ಮತ್ತು ಬಂಧಿತರಾಗಿರುವ ಇತರ ಐವರು, […]

ಚಂದ್ರನ ಅಂಗಳದಲ್ಲಿ ಹಾರಾಟ ನಡೆಸಲಿರುವ ನಾಸಾದ ಗಗನಯಾನಿಗಳಿಗೆ ಆತಿಥ್ಯ ನೀಡಿದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್( ಅಮೆರಿಕ)​​: 50 ವರ್ಷದ ಬಳಿಕ ಇದೀಗ ನಾಲ್ಕು ಮಂದಿ ಗಗನಯಾನಿಗಳು ಚಂದ್ರನ ಅಂಗಳದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದು, ಇವರಿಗೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್​​​​ ಅವರು ಶ್ವೇತ ಭವನದಲ್ಲಿ ಆತಿಥ್ಯ ನೀಡಿದರು.ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್​ ಕ್ಯಾಪ್ಸುಲ್​ನಲ್ಲಿ ಹಾರಾಡಲಿದ್ದಾರೆ. ಈ ವೇಳೆ, ಓವಲ್​ ಕಚೇರಿಯಲ್ಲಿ ಅಪೋಲೋ ಕಾಲಘಟ್ಟದಲ್ಲಿ ಸಂಗ್ರಹಿಸಿ ಚಂದ್ರನ ಕಲ್ಲುಗಳನ್ನು ತೋರಿಸಲಾಯಿತು. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಯೋಜನೆ ಸಾಕಾರಗೊಳ್ಳಲಿದೆ. ಈ ನಾಲ್ವರು ಗಗನಯಾನಿಗಳು ಮೊದಲಿಗೆ […]