ಶಿಕ್ಷಕರಿಗೆ ನ್ಯಾಯಯುತ ವೇತನ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ!

ನವದೆಹಲಿ: ಶಿಕ್ಷಕರನ್ನು ಗೌರವದಿಂದ ನಡೆಸಿಕೊಳ್ಳದೇ ಇದ್ದರೆ ಅಥವಾ ಗೌರವಯುತ ವೇತನ ನೀಡದೇ ಇದ್ದರೆ ಅದು ದೇಶವು ಜ್ಞಾನಕ್ಕೆ ನೀಡುವ ಮೌಲ್ಯವನ್ನು ಕಡಿಮೆಗೊಳಿಸಿದಂತೆ ಆಗುತ್ತದೆ. ಅಲ್ಲದೆ ಅದು ಬೌದ್ಧಿಕ ಬಂಡವಾಳ ನಿರ್ಮಿಸುವ ಜವಾಬ್ದಾರಿ ಹೊಂದಿರುವವರ ಪ್ರೇರಣೆಯನ್ನೂ ಹಾಳುಗೆಡವುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗುರುಬ್ರಹ್ಮ ಗುರುವಿಷ್ಣು, ಗುರುದೇವೋ ಮಹೇಶ್ವರಃ ಎಂದು ಪಠಿಸುವುದು ಸಾಕಾಗುವುದಿಲ್ಲ. ಈ ಘೋಷಣೆಗೆ ತಕ್ಕಂತೆ ದೇಶವು ಶಿಕ್ಷಕರನ್ನು ನಡೆಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜೊಯಮಲ್ಯ ಬಾಗ್ಚಿ ಅವರ ಪೀಠ ಕಿವಿಮಾತು ಹೇಳಿತು. […]

ಫುಡ್ ಡೆಲಿವರಿಗೂ ಬಂತು‌ 15 ಕಿ.ಮೀ ವೇಗದಲ್ಲಿ ಸಂಚರಿಸುವ ರೋಬೋ ಶ್ವಾನ!

ರೋಬಾಟ್​ಗಳು ಈಗ ಎಲ್ಲಾ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು, ಹೊಸ ಪ್ರಯೋಗವೊಂದರಲ್ಲಿ ರೋಬೋ ಶ್ವಾನವನ್ನು ಬಳಸಿ ಫುಡ್ ಡೆಲಿವರಿ ಮಾಡುವಲ್ಲಿ ಆಹಾರ ವಿತರಣಾ ಕಂಪನಿ ಯಶಸ್ವಿಯಾಗಿದೆ. ಡಚ್ ಮೂಲದ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪನಿ ಜಸ್ಟ್ ಈಟ್ ಟೇಕ್​ಅವೇ ಡಾಟ್ ಕಾಮ್ ಸ್ವಿಟ್ಜರ್​ಲ್ಯಾಂಡ್​ನ ರೋಬೋಟಿಕ್ಸ್ ಕಂಪನಿಯ ಸಹಯೋಗದೊಂದಿಗೆ ಸ್ವಿಟ್ಜರ್​ಲ್ಯಾಂಡ್​ನ ಜ್ಯೂರಿಚ್​ನಲ್ಲಿ ಪ್ರಾಯೋಗಿಕವಾಗಿ ಫುಡ್ ಡೆಲಿವರಿ ಆರಂಭಿಸಿದೆ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಈ ರೋಬೋ ಶ್ವಾನಗಳ ಕಾಲುಗಳಿಗೆ ಚಕ್ರ ಅಳವಡಿಸಲಾಗಿದ್ದು, ಇವು ಗಂಟೆಗೆ 15 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ ಮತ್ತು […]

ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್: ಬೀದಿ ನಾಯಿಗಳ ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬೀದಿ ನಾಯಿಗಳನ್ನು ಆಶ್ರಯ ತಾಣದಲ್ಲಿ ಬಂಧಿಸದೇ ಕೇವಲ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಿ ಬಿಡುಗಡೆ ಮಾಡುವ ಮೂಲಕ ಶ್ವಾನ ಪ್ರಿಯರಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​ ನೀಡಿದೆ. ಆದರೆ ರೇಬಿಸ್​ ನಾಯಿಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಈ ಹಿಂದಿನ ಆದೇಶವನ್ನು ಪರಿಶೀಲಿಸಿ, ಬೀದಿ ನಾಯಿಗಳ ವಿಷಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಅನೇಕ ವಿಷಯಗಳನ್ನು […]

ಪತ್ನಿ ಕಾಯಂ ಜೀವನಾಂಶ ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶ!

ನವದೆಹಲಿ: ವಿಚ್ಛೇದಿತ ಮಹಿಳೆಗೆ ಜೀವನಾಂಶ ಒದಗಿಸುವಾಗ ಪತಿಯ ಸಾಮರ್ಥ್ಯ ಹಾಗೂ ಪತ್ನಿಯ ಅಗತ್ಯಗಳ ನಡುವೆ ಸಮತೋಲಿತ ಧೋರಣೆ ಅನುಸರಿಸುವುದಕ್ಕೆ ಸುಪ್ರೀಂ ಕೋರ್ಟ್ ಒಲವು ತೋರಿದೆ. ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಇದ್ದ ಪೀಠ, ವೈದ್ಯ ಪತಿಯು ಎಂಟೆಕ್ (ಕಂಪ್ಯೂಟರ್ ಸೈನ್ಸ್) ಮತ್ತು ಎಲ್​ಎಲ್​ಬಿ ಪದವಿಗಳನ್ನು ಹೊಂದಿರುವ ಪತ್ನಿಗೆ ನೀಡಬೇಕಾದ ಕಾಯಂ ಪರಿಹಾರ ವನ್ನು 15 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಸುವ ಸಂದರ್ಭ, ಪತಿಗೆ ಹೆಚ್ಚಿನ ಮೊತ್ತ ಪಾವತಿಸುವ ಸಾಮರ್ಥ್ಯವಿದೆ ಎಂಬುದನ್ನು ಗಮನಿಸಿತು. […]

ನಕಲಿ ಪ್ರಕರಣ ದಾಖಲಿಸಿದ ವಕೀಲನಿಗೆ ಜೀವಾವಧಿ ಶಿಕ್ಷೆ; ನ್ಯಾಯಾಲಯ ತೀರ್ಪು

ಲಖನೌ: ದಲಿತ ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡು ಎದುರಾಳಿಗಳ ವಿರುದ್ಧ ನಕಲಿಪ್ರಕರಣಗಳನ್ನು ದಾಖಲಿಸಿದ ವಕೀಲನಿಗೆ ಲಖನೌನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡ ವಿಧಿಸಿದೆ. ವಿಶೇಷ ನ್ಯಾಯಾಧೀಶ (ಎಸ್​ಸಿ/ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ) ವಿವೇಕಾನಂದ ಶರಣ್ ತ್ರಿಪಾಠಿ ವಕೀಲ ಪರಮಾನಂದ ಗುಪ್ತಾ ಎಂಬ ವಕೀಲನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಿಚಾರಣೆ ವೇಳೆ ವಿಷಯ ಬೆಳಕಿಗೆ: ರಾವತ್ ಎಂಬಾತನೊಂದಿಗೆ ಶಾಮೀಲಾಗಿದ್ದ ಗುಪ್ತಾ ತನ್ನ ಎದುರಾಳಿ ಪಕ್ಷದ ವಿರುದ್ಧ ತಾನು 18 ಪ್ರಕರಣಗಳನ್ನು […]