ಮೂರನೇ ಹಂತದ ಮತದಾನ: ಗಾಂಧಿನಗರದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆ ಚುನಾವಣೆಯ 3 ನೇ ಹಂತದ ಮತದಾನ ಮಂಗಳವಾರ ಆರಂಭವಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಇಂದು ಮೂರನೇ ಹಂತದ ಮತದಾನ. ನಮ್ಮ ದೇಶದಲ್ಲಿ ‘ದಾನ’ಕ್ಕೆ ಹೆಚ್ಚಿನ ಮಹತ್ವವಿದ್ದು, ಅದೇ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ಇನ್ನೂ 4 ಸುತ್ತಿನ ಮತದಾನ ಬಾಕಿ ಇದೆ” ಎಂದರು. ಗುಜರಾತಿನ ಮತದಾರನಾಗಿ ನಾನು ನಿಯಮಿತವಾಗಿ ಮತ ಚಲಾಯಿಸುವ ಏಕೈಕ […]

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತೀಯ ಪುರುಷರ ರಿಲೇ ತಂಡ

ನವದೆಹಲಿ: ಮುಹಮ್ಮದ್ ಅನಾಸ್, ಯಾಹಿಯಾ, ಮುಹಮ್ಮದ್ ಅಜ್ಮಲ್, ಅರೋಕಿಯಾ ರಾಜೀವ್ ಮತ್ತು ಅಮೋಸ್ ಜಾಕೋಬ್ ಅವರನ್ನೊಳಗೊಂಡ ಭಾರತದ ಪುರುಷರ 4×400 ಮೀ ರಿಲೇ ತಂಡವು ಒಲಿಂಪಿಕ್ ಕ್ರೀಡಾಕೂಟದ ಅರ್ಹತೆಯಲ್ಲಿ 2 ನೇ ಸ್ಥಾನದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದೆ.

ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ನೋಟು! ಇಡಿ ಕಾರ್ಯಾಚರಣೆಯಲ್ಲಿ ಅಕ್ರಮ ಹಣ ಹೊರಬಂತು

ರಾಂಚಿ: ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆ ಸೇರಿದಂತೆ ರಾಂಚಿಯ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ಆರಂಭಿಸಿದೆ. ಸಂಜೀವ್ ಲಾಲ್ ಅವರ ಮನೆಯಿಂದ 20 ರಿಂದ 30 ಕೋಟಿ ರೂಪಾಯಿ ಎಂದು ಅಂದಾಜಿಸಲಾದ ಬೃಹತ್ ಮೊತ್ತದ ನಗದು ಪತ್ತೆಯಾಗಿದೆ. ಎಣಿಕೆಯನ್ನು ಮುಂದುವರಿಸಲು ನಗದು ಯಂತ್ರಗಳನ್ನು ನಿಯೋಜಿಸಲಾಗುತ್ತಿರುವುದರಿಂದ ನಗದು ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಅಲಂಗೀರ್ ಆಲಂ ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ. ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿನ ಕೆಲವು ಯೋಜನೆಗಳ […]

ರಾಮಲಲ್ಲಾ ದರ್ಶನ ಪಡೆದ ಪ್ರಧಾನಿ ಮೋದಿ-ಮುಖ್ಯಮಂತ್ರಿ ಯೋಗಿ: ಭರ್ಜರಿ ರೋಡ್ ಶೋ

ಅಯೋಧ್ಯಾ: ಜನವರಿ 22 ರಂದು ಪವಿತ್ರ ನಗರದಲ್ಲಿ ಐತಿಹಾಸಿಕ ರಾಮ ಮಂದಿರದ(Ram Mandir) ಶಂಕುಸ್ಥಾಪನೆಯ ನಂತರ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯ ಮೂರನೇ ಹಂತದ ಚುನಾವಣಾ ಪ್ರಚಾರದ ನಡುವೆ ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದರು. ಪ್ರಧಾನಿ ಮೋದಿ ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕೂಡ ರಾಮ ಮಂದಿರಕ್ಕೆ ಭೇಟಿ […]

ಪೂಂಚ್‌ನಲ್ಲಿ ಐಎಎಫ್ ಬೆಂಗಾವಲು ಪಡೆ ಮೇಲೆ ಭಯೋತ್ಪಾದಕ ದಾಳಿ: ಒರ್ವ ಸಿಬ್ಬಂದಿ ಸಾವು; ಉಗ್ರರ ಶೋಧಕ್ಕೆ ಕಾರ್ಯಾಚರಣೆ

ಶ್ರೀನಗರ: ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಐಎಎಫ್ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾರತೀಯ ವಾಯುಪಡೆ (ಐಎಎಫ್) ಬೆಂಗಾವಲು ಪಡೆ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಇಂದು (ಮೇ 5) ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಎಎನ್‌ಐ ವರದಿಯ ಪ್ರಕಾರ ದಾಳಿಯ ಹೊಣೆ ಹೊತ್ತಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚುವುದು ಶೋಧ ಕಾರ್ಯಾಚರಣೆಯ ಉದ್ದೇಶವಾಗಿತ್ತು […]