ಯುದ್ಧ ಸ್ಮಾರಕ ನಿರ್ಮಾಣದ ಬಗ್ಗೆ ಐಡಿಯಾ ಬಂದಿದ್ದು, ಉಡುಪಿಯ ಓಂಕಾರ ಶೆಟ್ಟಿಯಿಂದ :ಮೋದಿ

ಉಡುಪಿ: ಹುತಾತ್ಮರಿಗೆ ಗೌರವ ನೀಡಲೆಂದೇ ನಿರ್ಮಿಸಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಣೆ ಮಾಡಿದರು . ಈ ಬಗ್ಗೆ ನರೇಂದ್ರ ಮೋದಿ ಸಂತೋಷ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡ್ತಿರೋದು ನನಗೆ ಹೆಮ್ಮೆಯೆನಿಸುತ್ತದೆ. ನನಗೆ ಯುದ್ಧ ಸ್ಮಾರಕ ನಿರ್ಮಾಣದ ಬಗ್ಗೆ ಐಡಿಯಾ ಬಂದಿದ್ದು, ಕರ್ನಾಟಕದ ಉಡುಪಿ ಮೂಲದ ಓಂಕಾರ ಶೆಟ್ಟಿ ಅವರಿಂದ ಎಂದು  ಮೋದಿ ಹೇಳಿದ್ದಾರೆ. ಮನ್​​ ಕೀ ಬಾತ್​​ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, ‘ಪಿಎಂ ನರೇಂದ್ರ ಮೋದಿ’ ಆ್ಯಪ್‌ನಲ್ಲಿ ಉಡುಪಿಯ ಓಂಕಾರ […]

ಅಂತೂ ಇಂತೂ ಭಾರತದ ಒತ್ತಡಕ್ಕೆ ಮಣಿಯಿತು ಪಾಕ್: ನಾಳೆ ಅಭಿನಂದನ್ ಬಿಡುಗಡೆ

ಪಾಕಿಸ್ತಾನದ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಹೇಳಿಕೆ ನೀಡಿದೆ. ಭಾರತ ಮತ್ತು ಅಂತರಾಷ್ಟ್ರಿಯ ಸಮುದಾಯದ ಬಲವಾದ ಒತ್ತಡಕ್ಕೆ ಅಂತಿಮವಾಗಿ ಮಣಿದ ಪಾಕಿಸ್ತಾನ, ಅಭಿನಂದನ್ ಅವರನ್ನು ಬಿಡುಗಡೆಮಾಡಲು ನಿರ್ಧರಿಸಿದೆ. “ನಮ್ಮ ವಶದಲ್ಲಿರುವ ಅಭಿನಂದನ್ ಸುರಕ್ಷಿತವಾಗಿದ್ದಾರೆ.ಅವರನ್ನು ಮರಳೀ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಇಬ್ರಾನ್ ಖಾನ್, ಪಾಕಿಸ್ತಾನದ ವಿದೇಶಾಂಗ ಸಚಿವೆ ಮೊಹಮ್ಮದ್ ಖುರೇಶಿ ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದಾರೆ.

ಅಭಿನಂದನ್ ಗಾಗಿ ಪ್ರಾರ್ಥಿಸುತ್ತಿದೆ ಭಾರತ:bring back ಅಭಿನಂದನ್ ಅಭಿಯಾನಕ್ಕೆ ದೇಶಾದ್ಯಂತ ಭರ್ಜರಿ ಬೆಂಬಲ

ಪಾಕಿಸ್ತಾನದ ವಶದಲ್ಲಿರುವ ಮಿಗ್ ಯುದ್ದ ವಿಮಾನದ ಪೈಲಟ್ ಅಭಿನಂದನ್ ವರ್ತಮಾನ್ ಅವರಿಗಾಗಿ ಇದೀಗ ದೇಶ ಪ್ರಾರ್ಥಿಸುತ್ತಿದೆ. ವರ್ತಮಾನ್ ಅವರು ಕಾಣೆಯಾಗಿರುವ ಕುರಿತು ಸೇನಾ ಮುಖ್ಯಸ್ಥರು ಕೂಡ ಇದೀಗ ಅಧೀಕೃತ ಮಾಹಿತಿ ನೀಡಿದ್ದು,ಅಭಿನಂದನ್ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲೇಬೇಕು.ನಾವು ಅಭಿನಂದನ್ ಜೊತೆಗಿದ್ದೇವೆ.ಎನ್ನುವ ಅಭಿಯಾನ ವಾಟ್ಸಾಸ್,ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.ಇದೀಗ ಇಡೀ ದೇಶದಲ್ಲಿ ಅಭಿನಂದನ್ ಹೆಸರು ಕೇಳಿಬರುತ್ತಿದ್ದು, ಅಭಿನಂದನ್ ಸುರಕ್ಷಿತವಾಗಿ ಮರಳಿ ಬರಲಿ ಎನ್ನುವ ಪ್ರಾರ್ಥನೆಯನ್ನು ಇಡೀ ದೇಶ ಸಲ್ಲಿಸುತ್ತಿದೆ.ವೀ ಆರ್ […]

ಪಾಕ್ ಗೆ ಬಿಗ್ ಶಾಕ್: ಉಗ್ರರ ಅಡ್ಡಾ ಚೆಲ್ಲಾಡಿದ ಭಾರತ, ಉಗ್ರರನ್ನು ಮಟಾಶ್ ಮಾಡಿತು ಸೇನೆ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ)  ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಮಂಗಳವಾರ ಮುಂಜಾವಿನ ವೇಳೆ  ಧ್ವಂಸಗೊಳಿಸಿದೆ. ಗಡಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ ಎನ್ನಲಾಗಿದೆ.ಅಲ್ಲಿದ್ದ ಉಗ್ರರ ಸಂಘಟನೆಯ ಕ್ಯಾಂಪ್ ಸಂಪೂರ್ಣ ಧ್ವಂಸವಾಗಿದ್ದು, ಪುಲ್ವಾಮಾ ದಾಳಿಗೆ ದಿಟ್ಟ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಪಾಕ್ ಉಗ್ರ ನೆಲೆಯ ಮೇಲೆ ಏರ್ ಸರ್ಜಿಕಲ್ ಸ್ಟ್ರೈಕ್ ಪುಲ್ವಾಮ ಘಟನೆ ಪ್ರತೀಕಾರ