ಪಾಕಿಸ್ತಾನದ ವಶದಲ್ಲಿರುವ ಮಿಗ್ ಯುದ್ದ ವಿಮಾನದ ಪೈಲಟ್ ಅಭಿನಂದನ್ ವರ್ತಮಾನ್ ಅವರಿಗಾಗಿ ಇದೀಗ ದೇಶ ಪ್ರಾರ್ಥಿಸುತ್ತಿದೆ. ವರ್ತಮಾನ್ ಅವರು ಕಾಣೆಯಾಗಿರುವ ಕುರಿತು ಸೇನಾ ಮುಖ್ಯಸ್ಥರು ಕೂಡ ಇದೀಗ ಅಧೀಕೃತ ಮಾಹಿತಿ ನೀಡಿದ್ದು,ಅಭಿನಂದನ್ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲೇಬೇಕು.ನಾವು ಅಭಿನಂದನ್ ಜೊತೆಗಿದ್ದೇವೆ.ಎನ್ನುವ ಅಭಿಯಾನ ವಾಟ್ಸಾಸ್,ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.ಇದೀಗ ಇಡೀ ದೇಶದಲ್ಲಿ ಅಭಿನಂದನ್ ಹೆಸರು ಕೇಳಿಬರುತ್ತಿದ್ದು, ಅಭಿನಂದನ್ ಸುರಕ್ಷಿತವಾಗಿ ಮರಳಿ ಬರಲಿ ಎನ್ನುವ ಪ್ರಾರ್ಥನೆಯನ್ನು ಇಡೀ ದೇಶ ಸಲ್ಲಿಸುತ್ತಿದೆ.ವೀ ಆರ್ ವಿತ್ ಅಭಿನಂದನ್, ಬ್ರಿಂಗ್ ಬ್ಯಾಕ್ ಅಭಿನಂದನ್ ಅಭಿಯಾನಕ್ಕೆ ದೇಶಾದ್ಯಂತ ಒಂದೇ ಸಲ ಚಾಲನೆ ಸಿಕ್ಕಿದೆ.
ಭಾರತದ ವಾಯುವಲಯ ಪ್ರವೇಶಿಸಿದ ಪಾಕಿಸ್ತನದ ಯುದ್ದ ವಿಮಾನವನ್ನು ಭಾರತದ ಮಿಗ್ ೨೧ ಯುದ್ದ ವಿಮಾನ ಹೊಡೆದುರುಳಿಸಿದೆ. ಆದರೆ ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್ ೨೧ ವಿಮಾನ ಪತನಗೊಂಡಿದ್ದು, ಅದರ ಪೈಲಟ್ ಅಭಿನಂದನ್ ಕಾಣೆಯಾಗಿದ್ದರು.