ಮಧ್ಯಪ್ರದೇಶದಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ

ನವದೆಹಲಿ: ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಇಂದು ಬಿಜೆಪಿ ಸೇರಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಕ್ಷೀಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಕಮಲ್ ನಾಥ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದೆ. ಈ ನಡುವೆ ಸಿಂಧಿಯಾ ಬಿಜೆಪಿ ಸೇರ್ಪಡೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದೆ. ಸಿಂಧಿಯಾ ಬೆಂಬಲಿಗರೆಂದು ಎನ್ನಲಾದ 22 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಪತನದ ಅಂಚಿಗೆ ತಲುಪಿದೆ. ಶಾಸಕರ ಮನವೊಲಿಕೆ ಕಾರ್ಯ […]
ಕೇರಳದಲ್ಲಿ ಹಕ್ಕಿ ಜ್ವರ: ಕೋಳಿಗಳ ಸಾಮೂಹಿಕ ಹತ್ಯೆಗೆ ಮುಂದಾದ ಸರ್ಕಾರ

ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸಾಕಿದ ಕೊಳಿ ಹಾಗೂ ಹಕ್ಕಿಗಳನ್ನು ಸಾಮೂಹಿಕ ಹತ್ಯೆ ಮಾಡುವ ಮೂಲಕ ಮುನ್ನೆಚ್ಚರಿಕಾ ಕ್ರಮವನ್ನು ಕೇರಳ ಸರ್ಕಾರ ಕೈಗೊಂಡಿದೆ. ಕೇರಳದ ವೆಂಗೆರಿ ಮತ್ತು ಕೊಡಿಯಾಥೂರ್ ಪ್ರದೇಶದಲ್ಲಿ ಇರುವ ಎರಡು ಪೌಟ್ರಿಯಲ್ಲಿದ್ದ 12,000ಹಕ್ಕಿಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಇದರಲ್ಲಿ ಹೆಚ್ಚಿನವು ಸಾಕು ಕೋಳಿ, ಟರ್ಕಿ ಮತ್ತು ಲವ್ ಬರ್ಡ್‌ಗಳು ಹೊಂದಿದೆ. ಹಾಗೇಯೆ ಅದರ ಜೊತೆಗೆ ಪಕ್ಷಿಗಳ ಪಂಜರವನ್ನು ಸಂಪೂರ್ಣವಾಗಿ ಸುಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೋಳಿಯ ದರ ರೂ.60 ರಿಂದ 65ಕ್ಕೆ ಇಳಿತ […]
ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

ನವದೆಹಲಿ: ಕರ್ನಾಟಕದ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ ಹಂಸರಾಜ್ ಭಾರದ್ವಾಜ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ರಾತ್ರಿ ನಿಧನರಾದರು. 2009ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಣವ್ ಮುಖರ್ಜಿ ಅವರು ಟ್ವೀಟ್ ನಲ್ಲಿ ಬರೆದು “ಅನಾರೋಗ್ಯದಿಂದ ಬಳಲುತ್ತಿದ್ದ ಭಾರದ್ವಾಜ್ ಅವರು ನಿಧನರಾಗಿದ್ದು, ಅವರು ಕೇಂದ್ರ ಕಾನೂನು ಸಚಿವರಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರರ್ಣಾಹ ಎಂದು ಸಂತಾಪ ಸೂಚಿಸಿದ್ದು, ಅವರ ಕುಟುಂಬ ವರ್ಗಕ್ಕೆ ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ. ಭಾರದ್ವಾಜ್ ಅವರ ಅಂತ್ಯಸಂಸ್ಕಾರವು ಸೋಮವಾರ […]
ಮಹಿಳಾ ವಿಶ್ವಕಪ್ ಟಿ20: ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

ಐಸಿಸಿ ಮಹಿಳಾ ವಿಶ್ವಕಪ್ ಟಿ20 ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೋರಾಟ ನಡೆಸಲಿದೆ. ವಿಶ್ವಕಪ್ ಟಿ20 ಟೂರ್ನಿ ಸೆಮಿಫೈನಲ್ ಪಂದ್ಯಕ್ಕೆ ಮಳೆ ವಿಪರೀತ ಅಡ್ಡಿಯಾಗಿದ್ದು, ಅಂಕಪಟ್ಟಿ ಆಧಾರದಲ್ಲಿ ಇಂಗ್ಲೆಂಡ್ ಹಿಂದಿಕ್ಕಿದ ಭಾರತ ವನಿತೆಯರು ಫೈನಲ್ ಪ್ರವೇಶಿಸಿದ್ದರು. ಹಾಗೇಯೆ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಮಾ.8 ರಂದು ನಡೆಯಲಿರುವ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಪ್ರಧಾನಿ ಮೋದಿ ಭಾನುವಾರ ಸೋಶಿಯಲ್ ಮೀಡಿಯಾ ವೇದಿಕೆಯಿಂದ ದೂರ..

ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾ ವೇದಿಕೆಯಿಂದ ಹೊರ ಹೋಗುತ್ತಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಅಚ್ಚರಿಯ ವಿಷಯವನ್ನು ತಿಳಿಸಿದ್ದಾರೆ. ಅವರು ತಮ್ಮ ಟ್ವೀಟರ್ ನಲ್ಲಿ, ಈ ಭಾನುವಾರದಿಂದ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ದೂರ ಉಳಿಯಲು ಚಿಂತಿಸುತ್ತಿದ್ದೇನೆ. ಹಾಗೇ ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ , ಯೂಟ್ಯೂಬ್‍ಗಳಿಂದ ದೂರ ಉಳಿಯಲು ಚಿಂತಿಸಿದ್ದೆನೆ. ಮುಂದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಬರೆದು ಹೇಳಿದ್ದಾರೆ. ಈ ಎರಡು ಸಾಲುಗಳನ್ನು ಬರೆಯುವ ಮೂಲಕ ತಮ್ಮ ವಿಚಾರವನ್ನು ಹಿಂಬಾಲಕರೊಂದಿಗೆ ಮೋದಿ ಹಂಚಿಕೊಂಡಿದ್ದಾರೆ.