ಕೋವಿಡ್ 19: ಪ್ರತಿದಿನ 50 ಸಾವಿರ ಮಾಸ್ಕ್ ದೇಶೀಯ ಕಂಪೆನಿಗಳಿಂದ ತಯಾರಿ

ನವದೆಹಲಿ: ಕೋವಿಡ್-19 ತಡೆಗೆ ವಿವಿಧ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅಂದಹಾಗೆ ಈ ಸೋಂಕು ತಡೆಗೆ N95 ಮಾಸ್ಕ್ ಪರಿಣಾಮಕಾರಿಯಾಗಿದ್ದು, ಪ್ರತಿದಿನ 50 ಸಾವಿರ ಮಾಸ್ಕ್‌ಗಳನ್ನು ದೇಶೀಯ ಕಂಪನಿಗಳಿಂದ ತಯಾರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಮುಂದಿನ ವಾರದಲ್ಲಿ ಪ್ರತಿದಿನ ಮಾಸ್ಕ್‌ಗಳ ತಯಾರಿಕಾ ಸಾಮರ್ಥ್ಯವನ್ನು 1 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ. ಸದ್ಯ ದೇಶದ ಆಸ್ಪತ್ರೆಗಳಲ್ಲಿ 11.95 ಲಕ್ಷ N95 ಮಾಸ್ಕ್‌ಗಳು ಇವೆ. ಕಳೆದ ಎರಡು ದಿನಗಳಿಂದ ಹೆಚ್ಚುವರಿಯಾಗಿ 5 ಲಕ್ಷ ಮಾಸ್ಕ್‌ಗಳನ್ನು […]
ಕೊರೋನಾ ವೈರಸ್‌ನಿಂದ ಸಂಕಷ್ಟಗೊಂಡವರಿಗೆ 500 ಕೋಟಿ: ಟಾಟಾ ಟ್ರಸ್ಟ್

ಮುಂಬೈ: ದೇಶದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ತಡೆಗೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ 500 ಕೋಟಿ ರೂ. ನೀಡುವುದಾಗಿ ಟಾಟಾ ಟ್ರಸ್ಟ್ ಘೋಷಿಸಿದೆ. ಭಾರತದಲ್ಲಿ ಕೊರೊನಾ ಹೊಡೆತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ತತ್‌ಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವುದು ಅಗತ್ಯವಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗುವುದು ಅನಿವಾರ್ಯವಾಗಿದೆ ಎಂದು ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ ಪ್ರತಿಪಾದಿಸಿದ್ದಾರೆ. ಕೊರೋನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಯ ಸುರಕ್ಷತೆಗಾಗಿ ಅಗತ್ಯವಿರುವ ಪರಿಕರಗಳು, ಕೊರೋನಾ ಪೀಡಿತರಿಗೆ ಗುಣಪಡಿಸಲು ಬೇಕಾಗಿರುವ […]
ಕೊರೋನಾದಿಂದ ತಪ್ಪಿಸಿಕೊಳ್ಳಲು ಲಾಕ್‌ಡೌನ್ ಅನಿವಾರ್ಯವಾಗಿತ್ತು ದಯವಿಟ್ಟು ಸಹಕರಿಸಿ : ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ವ್ಯಾಪಕವಾಗುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಅನಿವಾರ್ಯ. ಲಾಕ್‌ಡೌನ್ ನಿರ್ಧಾರ ಬಿಟ್ಟು ಬೇರೆ ದಾರಿ ಇರಲಿಲ್ಲ, ಇದರಿಂದ ತುಂಬಾ ಜನರಿಗೆ ತೊಂಧರೆಯಾಗಿದೆ. ಅದಕ್ಕೆ ಕ್ಷಮೆ ಇರಲಿ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿಕೊಂಡರು. ಭಾನುವಾರ ಬೆಳಗ್ಗೆ ತಮ್ಮ ಜನಪ್ರಿಯ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಮಾತನಾಡಿದರು. ಇದೇ ಕೋವಿಡ್-19 ಪ್ರಕರಣಗಳ ಪರೀಕ್ಷೆ ನಡೆಸುತ್ತಿರುವ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ರೋಗಿಗಳನ್ನು ಗುಣಪಡಿಸಲು ಶ್ರಮಿಸುತ್ತಿರುವ ವೈದ್ಯರು ಸದಾ ಎಚ್ಚರಿಕೆಯಿಂದ ಇರಬೇಕು ಎಂದರು. […]
ಆರ್ ಬಿಐನಿಂದ ಸಾಲಗಾರರಿಗೆ ಬಿಗ್ ರಿಲೀಫ್: ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ ಗಳ ಸಾಲದ ಇಎಂಐ ಮೂರು ತಿಂಗಳು ಮುಂದೂಡಿಕೆ

ದೆಹಲಿ: ಆರ್ ಬಿಐ ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ್ದು, ವೈಯಕ್ತಿಕ ಸಾಲ, ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ಎಲ್ಲ ಮಾದರಿಯ ಸಾಲಗಳ ಇಎಂಐ ಕಂತನ್ನು ಮೂರು ತಿಂಗಳ ಮುಂದೂಡಿಕೆ ಮಾಡಿದೆ. ಇಂದು ದೆಹಲಿಯ ಆರ್ ಬಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಅಧಿಕೃತ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ, ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲ ಬ್ಯಾಂಕ್ ಗಳ ಸಾಲದ ಇಎಂಐ ಅನ್ನು ಆರ್ ಬಿಐ ಮುಂದೂಡಿಕೆ ಮಾಡಿದೆ.
ಕೊರೋನಾ ಎಫೆಕ್ಟ್: 1.70 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಕರೋನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿರುವ ಡಾಕ್ಟರ್ಸ್, ಆಶಾ ಕಾರ್ಯಕರ್ತೆಯರು, ನರ್ಸ್ಗಳು ಎಲ್ಲರಿಗೂ ಪ್ರತಿಯೊಬ್ಬರಿಗೂ ತಲಾ 50 ಲಕ್ಷರೂಪಾಯಿ ಮೌಲ್ಯದ ಮೆಡಿಕಲ್ ಇನ್ಶೂರೆನ್ಸ್ ಒದಗಿಸುತ್ತಿದ್ದೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಕೊರೋನಾ ಭೀತಿಯಿಂದ ದೇಶ ತತ್ತರಿಸಿ ಹೋಗಿದೆ.ಬಡವರು, ವಲಸಿಗರು, ಮಹಿಳೆಯರು ಮತ್ತು ಇತರೆ ಶ್ರಮಿಕ ವರ್ಗದವರನ್ನು, ಸೋಂಕು ನಿವಾರಣೆಗಾಗಿ ಹೋರಾಡುತ್ತಿರುವ ಕರೊನಾ ವಾರಿಯರ್ಸ್ ಅವರನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಿಸಿದೆ. ವಿಶೇಷ ಪ್ಯಾಕೇಜ್ ಬಿಡುಗಡೆ: ಬಡವರಿಗೆ […]