ಕೋವಿಡ್ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದರೆ 7 ವರ್ಷ ಜೈಲು: ಕೇಂದ್ರ ಸರ್ಕಾರದಿಂದ ಕಠಿಣ ಕ್ರಮ

ನವದೆಹಲಿ:  ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರಕಾರ ಹಲ್ಲೆ ನಡೆಸುವವರಿಗೆ  7 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವುಳ್ಳ ಸುಗ್ರೀವಾಜ್ಞೆ ರೂಪಿಸಿದೆ. ಇಂತಹ ಪ್ರಕರಣಗಳನ್ನು ಸಂಜ್ಞೇಯ ಅಪರಾಧ (ಕಾಗ್ನೈಜಿಬಲ್) ಎಂದು ಪರಿಗಣಿಸಲು ಮತ್ತು ಜಾಮೀನು ನೀಡದೇ ಇರಲು ಸುಗ್ರೀವಾಜ್ಞೆಯಲ್ಲಿ ಅವಕಾಶವಿದೆ. ‘ನಾವು ಸುಗ್ರೀವಾಜ್ಞೆ ರೂಪಿಸಿದ್ದೇವೆ. ಇದರ ಅನ್ವಯ ತಪ್ಪಿತಸ್ಥರಿಗೆ ₹ 1 ಲಕ್ಷದಿಂದ ₹ 5 ಲಕ್ಷದ ವರೆಗೆ ದಂಡ ವಿಧಿಸಲೂ […]

ಮಹಾನಗರ ಮುಂಬೈನಲ್ಲಿ 6 ಮಂದಿ ಪತ್ರಕರ್ತರಿಗೆ ಕೊರೊನ: ಪತ್ರಕರ್ತರೇ ಜಾಗೃತರಾಗೋಣ

ಮಂಗಳೂರು: ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕಿದೆ. ಪತ್ರಕರ್ತರು ಕೊರೊನಾ ಜಾಗೃತಿ ಮೂಡಿಸಲು ಮತ್ತು ಸುದ್ದಿಯ ಧಾವಂತದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಇದರ ಪರಿಣಾಮ ಜನರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿರುವುದು ಒಪ್ಪತಕ್ಕಂತಹ ಸತ್ಯ. ಅದೇ ರೀತಿ ಪತ್ರಕರ್ತರು ತಮ್ಮ ಬಗ್ಗೆಯೂ ಎಚ್ಚರವಹಿಸಬೇಕಾಗಿದೆ. ಮುಂಬಯಿಯಲ್ಲಿ 6 ಮಂದಿ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಧ್ಯಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು, ಕಾಸರಗೋಡಿನಲ್ಲೂ ಪತ್ರಕರ್ತರು ತೀವ್ರ […]

ಚಿಣ್ಣರ ಮೊಗದಲ್ಲಿ ನಗು ಉಕ್ಕಿಸಿದ “ಟಾಮ್ ಅಂಡ್ ಜೆರ್ರಿ” ನಿರ್ದೇಶಕ ಜೆನಿ ಡಿಚ್ ಇನ್ನಿಲ್ಲ

ಚಿಣ್ಣರ ಮೊಗದಲ್ಲಿ ನಗು ಉಕ್ಕಿಸಿದ “ಟಾಮ್ ಅಂಡ್ ಜೆರ್ರಿ” ನಿರ್ದೇಶಕ ಜೆನಿ ಡಿಚ್ ಅಮೇರಿಕಾದಲ್ಲಿ ನಿಧನರಾಗಿದ್ದಾರೆ. ಇವರು 1962 ರಿಂದ ನಿರ್ಮಿಸಿದ್ದ ಕಾಮಿಕ್ಸ್ ಮಕ್ಕಳ ಧಾರವಾಹಿಯನ್ನು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ಮಂದಿ ಮುಗಿಬಿದ್ದು ನೋಡುತ್ತಿದ್ದರು. ಈಗಲೂ ಟಾಮ್ ಅಂಡ್ ಜೆರ್ರಿ ನೋಡುವವರಿಗೂ ಏನೂ ಕಮ್ಮಿ ಇಲ್ಲ. ಈ ಧಾರಾವಾಹಿ  ಜೆನಿ ಡಿಚ್ ಅವರ ಕನಸಿನ ಕೂಸಾಗಿತ್ತು. ಜಗತ್ತಿನಲ್ಲೇ ಈ ಧಾರಾವಾಹಿ ಮೆಚ್ಚುಗೆ ಗಳಿಸಿತ್ತು.  ಇದೀಗ ಆ ಕನಸು ಹುಟ್ಟಿಸಿದ್ದ ಡಿಚ್ ಅವರು ನಿಧನರಾಗಿದ್ದಾರೆ.

ಭಾರತದಲ್ಲಿ 11 ಸಾವಿರ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ಮಾಹಿತಿ ಬಿಡುಗಡೆಗೊಳಿಸಿದ ಆರೋಗ್ಯ ಸಚಿವಾಲಯ

ನವದೆಹಲಿ:  ದೇಶದಲ್ಲಿ ಕೊರೊನಾ ಮಹಾಮಾರಿ  ಸೋಂಕಿಗೆ ಒಳಗಾದವರ ಸಂಖ್ಯೆ 11,933ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಸಂಜೆ ತಿಳಿಸಿದೆ. ಕೊರೊನಾ ಸೋಂಕಿಗೆ ಇದುವರೆಗೆ 392 ಮಂದಿ ಮೃತಪಟ್ಟಿದ್ದಾರೆ. ಹಾಗೂ 10,197 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 1,344 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ನಾಳೆ ಬೆಳಿಗ್ಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ದೇಶ: ಮಂಗಳವಾರ ಬೆಳಗ್ಗೆ 10ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾತನಾಡಲಿದ್ದಾರೆ. ಕೊರೊನಾ ವೈರಸ್‌ ತಡೆಯುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ನಾಳೆಗೆ ಮುಕ್ತಾಯವಾಗಲಿದೆ. ನಾಳೆಯ ಭಾಷಣದಲ್ಲಿ ಹೊಸ ನಿರ್ಧಾರಗಳನ್ನು ಘೋಷಿಸುವ ಅಥವಾ ಲಾಕ್‌ಡೌನ್‌ ವಿಸ್ತರಿಸುವ ಅನುಮಾನಗಳಿಗೆ ನಾಳೆ ತೆರೆ ಬೀಳುವ ಸಾಧ್ಯತೆಗಳಿವೆ.