ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆ: 8 ಮಂದಿ ಸಾವು, ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥ

ವಿಶಾಖಪಟ್ಟಣ: ಇಲ್ಲಿನ ವೆಂಕಟಾಪುರದಲ್ಲಿರುವ ಎಲ್‌ಜಿ ಪಾಲಿಮರ್ಸ್‌ನಲ್ಲಿ ಇಂದು ಸಂಭವಿಸಿದ ಅನಿಲ ಸೋರಿಕೆ ದುರ್ಘಟನೆಯಲ್ಲಿ 8 ಮಂದಿ ಸಾವಿಗೀಡಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ದುರಂತ ನಡೆದ ಬಳಿಕ ಪ್ರಜ್ಞೆ ತಪ್ಪಿದ ಮಕ್ಕಳನ್ನು ಎತ್ತಿಕೊಂಡು ಓಡುತ್ತಿರುವ ಹೆತ್ತವರು, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿರುವ ಜನರ ಚಿತ್ರಣ ಮನಕಲಕುವಂತಿತ್ತು. ವಿಶಾಖಪಟ್ಟಣದ ಕಾರ್ಖಾನೆಯಲ್ಲಿ ಬೆಳ್ಳಂಬೆಳಿಗ್ಗೆ ಸಿಂಥೆಟಿಕ್ ರಬ್ಬರ್ ಮತ್ತು ರೆಸಿನ್ಸ್ ಮಾಡಲು ಬಳಸುವ ರಾಸಾಯನಿ ಸ್ಟೈರೆನ್ ಸೋರಿಕೆಯಾಗಿದೆ. ಇದರಿಂದ ನಿದ್ರೆಯ ಮಂಪರಿನಲ್ಲಿದ್ದ ಗೋಪಾಲಪಟನಂ ಗ್ರಾಮದಲ್ಲಿನ ಜನರು ಕಂಗಾಲಾಗಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ನಿದ್ದೆಯಲ್ಲಿಯೇ ಹಲವಾರು […]
ಮೇ 17ರ ವರೆಗೆ ಲಾಕ್‍ಡೌನ್ ಅವಧಿ: ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ: ಲಾಕ್‌ಡೌನ್ ಅವಧಿಯನ್ನು ಮೇ.17ರವರೆಗೆ ವಿಸ್ತರಣೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ದೇಶವ್ಯಾಪಿ ಲಾಕ್‌ಡೌನ್ ಮೇ.3ಕ್ಕೆ ಮುಗಿಯಬೇಕಿತ್ತು. ಆದರೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಲಾಕ್‌ಡೌನ್ ಅವಧಿ ವಿಸ್ತರಿಸಲಾಗಿದೆ. ಮೇ.3ರ ನಂತರ ಎರಡು ವಾರ ಲಾಕ್‍ಡೌನ್ ವಿಸ್ತರಿಸಿರುವುದಾಗಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ಈ ಅವಧಿಯಲ್ಲಿ ಕೆಲವು ಕಾರ್ಯಗಳಿಗೆ ನಿಯಂತ್ರಣ ಹೇರುವ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಿದ ಪ್ರದೇಶಗಳಲ್ಲಿ ಈ ರೀತಿ ನಿರ್ಬಂಧಗಳಿರಲಿವೆ. ಹೊಸ ಮಾರ್ಗ ಸೂಚಿಯ […]
ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ವಿಧಿವಶ

ಉಡುಪಿ: ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ (67) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಿಗ್ಗೆ ನಿಧನರಾದರು. ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಬಾಲಿವುಡ್ ನ ಖ್ಯಾತ ಕ್ರಿಯಾಶೀಲ ನಟ ಇರ್ಫಾನ್ ಖಾನ್ ಇನ್ನಿಲ್ಲ

ಮುಂಬಯಿ:ಬಾಲಿವುಡ್ ನ ಖ್ಯಾತ ಕ್ರಿಯಾಶೀಲ ನಟ ಇರ್ಫಾನ್ ಖಾನ್(54) ಬುಧವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಬೈಯ ಕೋಕಿಲ ಬೇನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಇರ್ಪಾನ್ ಎರಡು ವರ್ಷದ ಹಿಂದೆ ನ್ಯೂರೋ ಎಂಡೋಕ್ರ್ಐನ್ ಟ್ಯೂಮರ್ ಕ್ಯಾನ್ಸರ್ ಗೆ ತುತ್ತಾಗಿದ್ದರು. ಕಳೆದ ವಾರಷ್ಟೇ ಇವರ ತಾಯಿ ನಿಧನರಾಗಿದ್ದರು. ಇದೀಗ ಮಗನೂ ಸಾವಿನತ್ತ ಸಾಗಿರುವುದು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಬಾಲಿವುಡ್ ನ ಶ್ರೇಷ್ಠ ಸಿನಿಮಾಗಳಲ್ಲಿ […]
ಕಿಮ್ ಜಾಂಗ್ ಉನ್ ಆರೋಗ್ಯವಾಗಿದ್ದಾರೆ: ದಕ್ಷಿಣ ಕೊರಿಯಾ ಸ್ಪಷ್ಟನೆ

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯದ ಕುರಿತಾಗಿ ಹಬ್ಬಿದ್ದ ಊಹಾಪೋಹಗಳಿಗೆ ದಕ್ಷಿಣ ಕೊರಿಯಾ ತೆರೆಎಳೆದಿದೆ. ಕಿಮ್ ಜಾಂಗ್ ಉನ್ ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇಯ್ ಇನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್ ಚುಂಗ್ ಇನ್ ಹೇಳಿದ್ದಾರೆ ಎಂದು ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ಸಿಎನ್‌ಎನ್ ವರದಿ ಮಾಡಿದೆ. ಕಿಮ್ ಜಾಂಗ್ ಉನ್ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ವದಂತಿಗಳು ಹರಡಿದ್ದವು. ಶಸ್ತ್ರಚಿಕಿತ್ಸೆ ನಂತರ […]