udupixpress
Home Trending ಕಿಮ್‌ ಜಾಂಗ್‌ ಉನ್‌ ಆರೋಗ್ಯವಾಗಿದ್ದಾರೆ: ದಕ್ಷಿಣ ಕೊರಿಯಾ ಸ್ಪಷ್ಟನೆ

ಕಿಮ್‌ ಜಾಂಗ್‌ ಉನ್‌ ಆರೋಗ್ಯವಾಗಿದ್ದಾರೆ: ದಕ್ಷಿಣ ಕೊರಿಯಾ ಸ್ಪಷ್ಟನೆ

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಆರೋಗ್ಯದ ಕುರಿತಾಗಿ ಹಬ್ಬಿದ್ದ ಊಹಾಪೋಹಗಳಿಗೆ ದಕ್ಷಿಣ ಕೊರಿಯಾ ತೆರೆಎಳೆದಿದೆ. ಕಿಮ್‌ ಜಾಂಗ್‌ ಉನ್‌ ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇಯ್‌ ಇನ್‌ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್‌ ಚುಂಗ್‌ ಇನ್‌ ಹೇಳಿದ್ದಾರೆ ಎಂದು ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮ ಸಿಎನ್‌ಎನ್‌ ವರದಿ ಮಾಡಿದೆ.
ಕಿಮ್‌ ಜಾಂಗ್‌ ಉನ್‌ ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ವದಂತಿಗಳು ಹರಡಿದ್ದವು. ಶಸ್ತ್ರಚಿಕಿತ್ಸೆ ನಂತರ ಗಂಭೀರಗೊಂಡಿದ್ದು, ಮೃತಪಟ್ಡಿದ್ದಾರೆಂದು ಊಹಾಪೋಹಗಳು ಜಗತ್ತಿನಾದ್ಯಂತ ಹಬ್ಬಿದ್ದವು.‌ ಈ ನಡುವೆಯೇ ದಕ್ಷಿಣ ಕೊರಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಕಿಮ್‌ ಜಾಂಗ್‌ ಉನ್‌ ಅವರು ಚನ್ನಾಗಿದ್ದಾರೆ. ಅವರು ಏ.13ರಿಂದ ವೋನ್‌ ಸಾನ್‌ನಲ್ಲಿ ಇದ್ದಾರೆ. ಅಲ್ಲಿ ಯಾವುದೇ ಅನುಮಾನಾಸ್ಪದ ಚಲನವಲನಗಳು ಕಂಡು ಬಂದಿಲ್ಲ ಎಂದು ಮೂನ್‌ ಚುಂಗ್‌ ತಿಳಿಸಿದ್ದಾರೆ.
error: Content is protected !!