ಜುಲೈ 1ರಿಂದ 15ರ ವರೆಗೆ ನಡೆಯುತ್ತೆ ಸಿಬಿಎಸ್‌ಇ ಪರೀಕ್ಷೆ: ಇಲ್ಲಿದೆ ವೇಳಾಪಟ್ಟಿ

ನವದೆಹಲಿ: ಸಿಬಿಎಸ್‌ಇಯು 10 ಮತ್ತು 12ನೇ ತರಗತಿಯ ಬಾಕಿ ಇರುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಜುಲೈ 1ರಿಂದ 15ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಾರ್ಚ್‌ 25ರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲ್ಪಟ್ಟಿತ್ತು. 10ನೇ ತರಗತಿ ಪರೀಕ್ಷೆಗೆ ಜುಲೈ 1ರಿಂದ ಮೊದಲುಗೊಂಡು ನಾಲ್ಕು ದಿನಾಂಕ ನಿಗದಿಪಡಿಸಲಾಗಿದೆ. ಮೊದಲ ಪರೀಕ್ಷೆ ಸಮಾಜ ವಿಜ್ಞಾನ ವಿಷಯದ್ದಾಗಿರಲಿದೆ. ಮರುದಿನ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ. […]

9, 11ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ: ಸಿಬಿಎಸ್ಇ

ಉಡುಪಿ: ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ 9 ಮತ್ತು 11ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಸಿಬಿಎಸ್ ಇ ಕಂಟ್ರೋಲರ್ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸುವ ಉಡುಪಿ ಜಿಲ್ಲೆಯ ನಾಗರೀಕರಿಗೆ ಜಿಲ್ಲಾಡಳಿತದಿಂದ ಬೆಳಗಾವಿಯ ಗಡಿಯಲ್ಲಿ ಸಹಾಯ ಕೇಂದ್ರ ಆರಂಭ

ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬರುವ ಸಾರ್ವಜನಿಕರಿಗೆ, ರಾಜ್ಯಕ್ಕೆ  ಪ್ರವೇಶಿಸಲು ಅಗತ್ಯ ನೆರವು ನೀಡುವ ಉದ್ದೇಶದಿಂದ, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆಯಂತೆ ಉಡುಪಿಯಿಂದ ತೆರಳಿರುವ ಅಧಿಕಾರಿಗಳ ತಂಡ, ಬೆಳಗಾವಿಯ  ಗಡಿಭಾಗವಾದ ನಿಪ್ಪಾಣಿಯಲ್ಲಿ ತೆರದಿರುವ  ಸಹಾಯಕೇಂದ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಾರಾಷ್ಟ್ರದಿಂದ ಬರುವ ಜಿಲ್ಲೆಯ ನಾಗರೀಕರ, ಉಡುಪಿ ಜಿಲ್ಲೆಯಲ್ಲಿನ ವಿಳಾಸದ ಕುರಿತು ಪರಿಶೀಲನೆ ನಡೆಸಿ ಅದನ್ನು ದೃಢೀಕರಿಸಿ, ಅವರು ರಾಜ್ಯ ಪ್ರವೇಶಿಸಲು ಸಹಾಯ ಮಾಡುತ್ತಿದ್ದು ಮಾತ್ರವಲ್ಲದೇ, ಉಡುಪಿ ಜಿಲ್ಲೆಗೆ ಆಗಮಿಸಿದ ನಂತರದ ಇಲ್ಲಿನ ಕ್ವಾರಂಟೈನ್ ಕ್ರಮಗಳು, ಜಿಲ್ಲಾಡಳಿತದಿಂದ ಒದಗಿಸುವ ಸೌಲಭ್ಯಗಳು, […]

ವಿದೇಶದಲ್ಲಿ ಸಿಲುಕಿಕೊಂಡ 177 ಕರಾವಳಿಗರು ಇಂದು‌ ಮಂಗಳೂರಿಗೆ

ಮಂಗಳೂರು: ಕೊರೊನಾದಿಂದ ವಿದೇಶದಲ್ಲಿ ಸಿಲುಕಿಕೊಂಡಿದ್ದ 177 ಕರಾವಳಿಗರು ಇಂದು ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಏರ್ ಇಂಡಿಯಾ IX 0384 ವಿಮಾನದ ಮೂಲಕ ದುಬೈನಿಂದ ಭಾರತೀಯ ಕಾಲಮಾನ ಸಂಜೆ 4.10ಕ್ಕೆ ವಿಮಾನ ಹೊರಡಲಿದ್ದು, ರಾತ್ರಿ ಸುಮಾರು 9.10ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆ. ದುಬೈಯಿಂದ ಬರುವ 177 ಪ್ರಯಾಣಿಕರ‌ಲ್ಲಿ ಎಷ್ಟು ಮಹಿಳೆಯರು, ಪುರುಷರು ಹಾಗೂ ಗರ್ಭಿಣಿಯರು, ಆರೋಗ್ಯ ಸಮಸ್ಯೆ ಎಂಬುವುದು ದುಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಆದ ಬಳಿಕವಷ್ಟೇ […]

ಕೊರೊನಾ ವೈರಸ್: ಜಗತ್ತಿನಾದ್ಯಂತ 41 ಲಕ್ಷ ಜನರಲ್ಲಿ ಸೋಂಕು ದೃಢ, 2 ಲಕ್ಷ ಜನರು ಬಲಿ

ಕೊರೊನಾ ಅಟ್ಟಹಾಸಕ್ಕೆ ಅಮೇರಿಕಾ ಕಳೆದ 24 ಗಂಟೆಯಲ್ಲಿ 20,000 ಜನರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಅಮೆರಿಕದಲ್ಲಿ 13.6 ಲಕ್ಷ ಜನರು  ಸೋಂಕಿನಿಂದ ಬಳಲುತ್ತಿದ್ದು, 80,574 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು 187 ರಾಷ್ಟ್ರಗಳಿಗೆ ಹರಡಿದ್ದು, ಇಲ್ಲಿಯವರೆಗೂ 41 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ. 2.10 ಲಕ್ಷ ಜನರು ಕೋವಿಡ್‌-19 ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 67,000  ದಾಟಿದ್ದು, […]