ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಂತೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲು

ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 10ನೇ ತರಗತಿ ಪರೀಕ್ಷೆ ನಡೆಸಬಾರದು ಎಂದು ಬೆಳಗಾವಿ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ ಎನ್ನುವವರು ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೂನ್ 25ರಿಂದ ಜುಲೈ 4ರ ವರೆಗೆ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಕೋವಿಡ್-19 ಸಂಕಷ್ಟದಲ್ಲಿ ಪರೀಕ್ಷೆಗಳನ್ನು ನಡೆಸುವುದರಿಂದ ಮಕ್ಕಳ ಜೀವಕ್ಕೆ ಅಪಾಯವಿದೆ. ಇದರೊಂದಿಗೆ ಶಿಕ್ಷಕರು, ಮಕ್ಕಳ ಪೋಷಕರಿಗೂ ಸೋಂಕು ಭಯ ಕಾಡುತ್ತದೆ. ಹೀಗಾಗಿ ಬಾರಿ 10 ತರಗತಿ ಮಕ್ಕಳಿಗೆ […]
ಕೊರೊನಾ ವೈರಸ್ ಗೆ ಬ್ರೆಜಿಲ್‌ನಲ್ಲಿ ಒಂದೇ ದಿನ 1,005 ಮಂದಿ ಬಲಿ

ಕೊರೊನಾ ಸೋಂಕು ಲ್ಯಾಟಿನ್ ಅಮೆರಿಕದ ಬ್ರೆಜಿಲ್ ಗೆ ವ್ಯಾಪಿಕವಾಗಿ ಹರಡಿದ್ದು, ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಯಲ್ಲಿ 1,005 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಸೋಂಕಿಗೆ ಬ್ರೆಜಿಲ್‌ನಲ್ಲಿ ಒಟ್ಟು 34,000ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದೆಹಾಕಿದೆ. ಜಾಗತಿಕವಾಗಿ ಕೊರೊನಾ ಸೋಂಕಿನಿಂದ ಸಾವೀಗಿಡದವರ ಸಂಖ್ಯೆ 4,00,000 ಸಮೀಪಿಸಿದೆ. ಸಾವಿನ ಲೆಕ್ಕಾಚಾರದಲ್ಲಿ ಬ್ರೆಜಿಲ್ ಈಗ ಮೂರನೇ ಸ್ಥಾನದಲ್ಲಿದೆ. ಜಗತ್ತಿನಾದ್ಯಂತ ಒಟ್ಟು 68,44,705 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 3,98,141 […]
ಸೆಲೂನ್ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ತಮಿಳುನಾಡು ಸರಕಾರ

ಚೆನ್ನೈ: ಕೊವೀಡ್-19 ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್ ಗಳಿಗೆ ಬರುವ ಗ್ರಾಹಕರ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗೆ ಪಡೆದುಕೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಸಾಮಾನ್ಯವಾಗಿ ಎಲ್ಲಾ ಗ್ರಾಹಕರು ಹೆಸರು, ವಿಳಾಸ, ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ಒಳಗೊಂಡ ಮಾಹಿತಿಯನ್ನು ಹೊಂದಿರುವುದು ಕಡ್ಡಾಯ. ಆದರಿಂದ ಕೊರೋನಾ ಸಂಪರ್ಕವನ್ನು ಸುಲಭವಾಗಿ ಮತ್ತು ವೇಗವಾಗಿ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಿಂದ ಚೆನ್ನೈ ಪೊಲೀಸ್ ಠಾಣೆ […]
ಪುಲ್ವಾಮಾ ಪ್ರದೇಶದಲ್ಲಿ ಗುಂಡಿನ ದಾಳಿ: ಮೂವರು ಉಗ್ರರು ಎನ್ ಕೌಂಟರ್ ಗೆ ಬಲಿ
ಪುಲ್ವಾಮಾ: ಪುಲ್ವಾಮಾ ಕಂಗಾನ್ ಪ್ರದೇಶದಲ್ಲಿ ಜೂನ್ 3ರಂದು ಬೆಳಗ್ಗೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಬಲಿಯಾದ ಉಗ್ರರಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈಗ ಆ ಪ್ರದೇಶದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಹೆಚ್ಚಿನ ಮಾಹಿತಿ ಇನ್ನೂ ಬರಬೇಕಾಗಿದೆ. ಜೂನ್ 2 ಕ್ಕೆ ಟ್ರಾಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರೂ ಜೈಶ್ ಎ. ಮೊಹಮ್ಮದ್ […]
ಇನ್ನೂ ಜಗತ್ತನ್ನೇ ನೋಡದ ನನ್ನ ಗರ್ಭದಲ್ಲಿರುವ ಕಂದಮ್ಮನನ್ನು ಕೊಂದು ಬಿಟ್ಟೆಯಲ್ಲಾ!

ಗರ್ಭ ಧರಿಸಿದ ಆನೆಯೊಂದು ಮನುಷ್ಯನ ದುಷ್ಟ ಕೃತ್ಯಕ್ಕೆ ಬಲಿಯಾದ ಘಟನೆ ದೇಶವನ್ನೇ ಕಲಕುತ್ತಿದೆ.ಅನಾನಾಸ್ ನಲ್ಲಿ ಪಟಾಕಿ ಇಟ್ಟು ಆನೆಯನ್ನು ಸಾಯಿಸಿದ ದುಷ್ಟರ ಬಗ್ಗೆ ಸಹೃದಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡೀ ಘಟನೆ ಮಾನವರಿಂದ ಮುಗ್ದ ಪ್ರಾಣಿಗಳು ಹೇಗೆ ಸಂಘರ್ಷಕ್ಕೊಳಗಾಗುತ್ತವೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ. ಬರಹಗಾರ್ತಿ ಜಯಾ ಬಿ ಬರೆದ ಬರಹವನ್ನೊಮ್ಮೆ ಓದಿ. ಈ ಬರಹ ನಿಜಕ್ಕೂ ಕಣ್ಣಂಚಿನಲ್ಲಿ ನೀರು ಭರಿಸುತ್ತದೆ.ಯಾವ ಮುಗ್ದ ಪ್ರಾಣಿಗಳನ್ನು ಇನ್ನು ಮುಂದೆ ನಾವು ಬಲಿ ತಗೊಳಲ್ಲ ಎನ್ನುವ ಪ್ರತಿಜ್ಞೆ ಮಾಡೋಣ ಕ್ಷಮಿಸಿ ಬಿಡು […]