udupixpress
Home Trending ಸೆಲೂನ್ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ತಮಿಳುನಾಡು ಸರಕಾರ

ಸೆಲೂನ್ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ತಮಿಳುನಾಡು ಸರಕಾರ

ಚೆನ್ನೈ: ಕೊವೀಡ್-19 ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸೋಂಕು ಹರಡುವಿಕೆಯನ್ನು ತಡೆಗಟ್ಟಲು  ಸಲೂನ್‌, ಸ್ಪಾ, ಬ್ಯೂಟಿ ಪಾರ್ಲರ್‌ ಗಳಿಗೆ ಬರುವ ಗ್ರಾಹಕರ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಕಡ್ಡಾಯವಾಗೆ ಪಡೆದುಕೊಳ್ಳಲಾಗುವುದು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಸಾಮಾನ್ಯವಾಗಿ ಎಲ್ಲಾ ಗ್ರಾಹಕರು ಹೆಸರು, ವಿಳಾಸ, ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ಒಳಗೊಂಡ ಮಾಹಿತಿಯನ್ನು ಹೊಂದಿರುವುದು ಕಡ್ಡಾಯ. ಆದರಿಂದ ಕೊರೋನಾ ಸಂಪರ್ಕವನ್ನು ಸುಲಭವಾಗಿ ಮತ್ತು ವೇಗವಾಗಿ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರದಿಂದ ಚೆನ್ನೈ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಲವು ನಿಯಮಗಳನ್ನು ವಿಧಿಸಿ ಸಲೂನ್‌ ಮತ್ತು ಬ್ಯೂಟಿ ಪಾರ್ಲರ್‌ ಕಾರ‍್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.
error: Content is protected !!