ಅಂತರರಾಷ್ಟ್ರೀಯ ಎಲ್ಲಾ ವಿಮಾನಯಾನ ಸೇವೆಗಳು ಜುಲೈ 15ರವರೆಗೆ ರದ್ದು

ನವದೆಹಲಿ: ಮುಂದಿನ ಜುಲೈ 15ರವರೆಗೆ ಅಂತರರಾಷ್ಟ್ರೀಯ ಎಲ್ಲಾ ವಿಮಾನಯಾನ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ನಿರ್ದಿಷ್ಟ ಪ್ರಕರಣಗಳನ್ನು ಆಧರಿಸಿ ಆಯ್ದ ಮಾರ್ಗಗಳಲ್ಲಿ ಅನುಮತಿ ನೀಡಬಹುದು ಎಂದು ತಿಳಿಸಿದೆ. ದೇಶದಲ್ಲಿ ಸದ್ಯಕ್ಕೆ ವಂದೇ ಮಾತರಂ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ಮತ್ತು ಕೆಲ ಖಾಸಗಿ ವೈಮಾನಿಕ ಸಂಸ್ಥೆಗಳು ಕೆಲವೊಂದು ವಿಮಾನ ಸೇವೆಯನ್ನು ಒದಗಿಸುತ್ತಿದೆ.
ಇನ್ನು ಮುಂದೆ ಫೇರ್ ಆ್ಯಂಡ್ ಲೈವ್ಲಿಯಲ್ಲಿ “ಫೇರ್ “ಪದ ಮಾಯ ಇನ್ನೇನಿದ್ರೂ “ಗ್ಲೋ ಆ್ಯಂಡ್ ಲವ್ಲಿ”

ಮುಖವನ್ನು ಕಾಂತಿಯುತ ಮಾಡುವ ಕ್ರೀಮ್ ಗಳಲ್ಲಿ ಒಂದಾಗಿದ್ದ ಹಿಂದುಸ್ತಾನ್ ಯುನಿಲಿವರ್ ಕಂಪೆನಿಯ ಉತ್ಪನ್ನವಾದ ಫೇರ್ ಆ್ಯಂಡ್ ಲೈವ್ಲಿಯಲ್ಲಿ ಹೆಸರು ಇನ್ನು ಮುಂದೆ ಬದಲಾಗಲಿದೆ. ಹೆಸರಿನಿಂದ ಫೇರ್ ಅನ್ನುವ ಪದವನ್ನು ತೆಗೆಯಲು ಕಂಪೆನಿ ನಿರ್ಧರಿಸಿದೆ.ಇನ್ನು ಮುಂದೆ ‘ಗ್ಲೋ ಆ್ಯಂಡ್ ಲವ್ಲಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.
ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಕೊರೋನಾ ಸೋಂಕು!

ಯಾದಗಿರಿ: ಹತ್ತಿರದ ಮಹಾರಾಷ್ಟ್ರದಿಂದ ಯಾದಗಿರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ವಿದ್ಯಾರ್ಥಿ ಒಟ್ಟಿಗೆ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿದೆ. ವಿದ್ಯಾರ್ಥಿಯು ಯಾದಗಿರಿ ಸಮೀಪದ ಯಡಳ್ಳಿ ಗ್ರಾಮದವನಾಗಿದ್ದು, ಕಳೆದ ಎರಡು ತಿಂಗಳ ಲಾಕ್ ಡೌನ್ ಸಮಯದಲ್ಲಿ ಈತ ಮಹಾರಾಷ್ಟ್ರದ ಪುಣೆಯಲ್ಲಿ ಸಿಲುಕಿದ್ದನು. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಈತ ಜೂನ್ 22ರಂದು ರಾಜ್ಯಕ್ಕೆ ಮರಳಿದ್ದು, ಪ್ರಯಾಣದ ಹಿನ್ನೆಲೆ ಜಿಲ್ಲಾಡಳಿತ ವಿದ್ಯಾರ್ಥಿಯನ್ನು ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಿತ್ತು. ನಂತರ ವಿದ್ಯಾರ್ಥಿಯ ರಕ್ತದ ಮಾದರಿ […]
ಮುಂಬೈ ಐಐಟಿಯ ಮುಂದಿನ ಸೆಮಿಸ್ಟರ್ ಸಂಪೂರ್ಣ ಆನ್ ಲೈನ್: ನಿರ್ದೇಶಕ ಸುಭಾಶಿಸ್ ಚೌಧರಿ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಆನ್ ಲೈನ್ ತಂತ್ರಜ್ಞಾನದ ಮೊರೆಹೋಗಿದೆ. ಸಂಸ್ಥೆಯು ಮುಂದಿನ ಸೆಮಿಸ್ಟರ್ ಸಂಪೂರ್ಣ ಆನ್ ಲೈನ್ ನಲ್ಲಿ ಮಾಡಲು ಮುಂದಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ಮುಂಬೈನ ಐಐಟಿ ನಿರ್ದೇಶಕ ಸುಭಾಶಿಸ್ ಚೌಧರಿ, ಈಗಾಗಲೇ ಆನ್ ಲೈನ್ ಶಿಕ್ಷಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ಮುಂದಿನ ಸೆಮಿಸ್ಟರ್ ಸಂಪೂರ್ಣವಾಗಿ ಆನ್ ಲೈನ್ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಹಾಗೂ […]
ದೇಶದಲ್ಲಿ ಕೊರೊನಾಗೆ ಒಂದೇ ದಿನ 418 ಮಂದಿ ಸಾವು

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 16,922 ಪ್ರಕರಣಗಳು ದಾಖಲಾಗಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಕೊರೊನಾ ಸೋಂಕಿಗೆ ಒಂದೇ ದಿನ 418 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ದೇಶದಲ್ಲಿ ಒಟ್ಟು 4,73,105 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಮೃತರ ಸಂಖ್ಯೆಯು 14,894ಕ್ಕೆ ಏರಿಕೆಯಾಗಿದೆ. 1,86,514 ಸಕ್ರಿಯ ಪ್ರಕರಣಗಳಿದ್ದು, 2,71,697 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ […]