2014 ರ ಮೊದಲಿನ ಆರ್ಥಿಕತೆಯ ದುರುಪಯೋಗದ ಬಗ್ಗೆ ಶ್ವೇತಪತ್ರ ಮಂಡನೆ; ಆದಾಯ ತೆರಿಗೆ ಯಥಾಸ್ಥಿತಿ, ಆವಾಸ್ ಯೋಜನೆ-ಆಯುಷ್ಮಾನ್ ಭಾರತ್ ವಿಸ್ತರಣೆ

ನವದೆಹಲಿ: ಆರನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಪ್ರಸರಣವನ್ನು ಕಂಡಿದೆ. ಅತ್ಯದ್ಭುತ ಕೆಲಸದ ಆಧಾರದ ಮೇಲೆ, ನಮ್ಮ ಸರ್ಕಾರವು ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು. ಹಿಂದಿನ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವೆ 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. 2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಮೋದಿ ಸರ್ಕಾರವು ಸಂಸತ್ತಿನಲ್ಲಿ […]

ಜ್ಞಾನವಾಪಿ ಮಂದಿರ ಪರಿಸರದಲ್ಲಿ ಹಿಂದೂ ಪಕ್ಷಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿಯ ಜಿಲ್ಲಾ ನ್ಯಾಯಾಲಯ

ವಾರಣಾಸಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರದಂದು ಹಿಂದೂ ಪಕ್ಷದವರಿಗೆ ಜ್ಞಾನವಾಪಿ ಮಂದಿರದ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂ ಕಡೆಯಿಂದ ಪೂಜೆಯನ್ನು ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. “ಏಳು ದಿನದೊಳಗೆ ಪೂಜೆ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ” ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ ಪೂಜೆಯ ವಿಧಿ ವಿಧಾನಗಳನ್ನು […]

ಸಾಂಪ್ರದಾಯಿಕ ಕುದುರೆಗಾಡಿಯಲ್ಲಿ ಸದನಕ್ಕಾಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸದನದಲ್ಲಿ ಸೆಂಗೋಲಿನ ಸಹಿತ ಭವ್ಯ ಸ್ವಾಗತ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣದ ಶತಮಾನಗಳ ಹಿಂದಿನ ಕನಸು ಈಗ ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಹೇಳಿದ್ದಾರೆ. ಸಂಸತ್ತಿನ ಸದನಕ್ಕೆ ಪಾರಂಪರಿಕ ಕುದುರೆಗಾಡಿಯಲ್ಲಿ ಆಗಮಿಸಿದ ಅವರನ್ನು ಸೆಂಗೋಲು ಮತ್ತು ಪಾರಂಪರಿಕ ವಾದ್ಯಗಳ ಮೂಲಕ ಸದನದೊಳಕ್ಕೆ ಭವ್ಯವಾಗಿ ಸ್ವಾಗತಿಸಲಾಯಿತು. ಅವರ ಆಗಮನವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು. ಬಜೆಟ್ ಅಧಿವೇಶನಕ್ಕೂ (Budget 2024) ಮುನ್ನಾದಿನ ಬುಧವಾರ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿ […]

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಸ್ವಾವಲಂಬಿ ‘ರಾಮು’!! ರಾಮುವಿನ ಅದ್ಬುತ ಕೌಶಲ್ಯಕ್ಕೆ ಮರುಳಾದ ಉದ್ಯಮಿ ಆನಂದ್ ಮಹೀಂದ್ರ!

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ‘ರಾಮು’, ಸಾಮಾನ್ಯ ಹೋರಿಯಲ್ಲ. ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರ ಈತನ ಕೆಲಸ ಕಾರ್ಯಕಂಡು ಸೂರ್ತಿ ಪಡೆದಿದ್ದಾರೆ. ದಿನವಿಡೀ ಕೆಲಸ ಮಾಡುವ ಹೋರಿಯ ವೀಡಿಯೊವನ್ನು ಹಂಚಿಕೊಂಡಿರುವ ಅವರು ಅದರ ಗಮನಾರ್ಹ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. “ರಾಮುವಿಗೆ ಮಾತನಾಡಲು ಸಾಧ್ಯವಾಗುತ್ತಿದ್ದರೆ, ಆತ ಪ್ರಪಂಚದ ಇತರ ಸ್ವಯಂ ಘೋಷಿತ ಪ್ರೇರಕ ಭಾಷಣಕಾರರಿಗಿಂತ ‘ಲೈಫ್-ಪಾಸಿಟಿವ್’ ಆಗಿರುವುದು ಹೇಗೆ ಎಂಬುದರ ಕುರಿತು ಉತ್ತಮ ಸಲಹೆಯನ್ನು ನೀಡುತ್ತಾನೆ ಎಂದು ನಾನು ದೃಢವಾಗಿ ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ. ರಾಮು ಸ್ವಯಂಪ್ರೇರಿತವಾಗಿ ಕಾರ್ಯಗಳನ್ನು […]

ಚಂಡೀಗಢದ ಮೇಯರ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೆಲುವು; ಇಂಡಿಯಾ ಬಣಕ್ಕೆ ಸೋಲು

ನವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಗೆಲುವು ಸಾಧಿಸಿದ್ದು ‘ಇಂಡಿಯಾ’ ಬಣಕ್ಕೆ ಸೋಲುಂಟಾಗಿದೆ. ಚಂಡೀಗಢದಲ್ಲಿ ಮಂಗಳವಾರ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಸೋಂಕರ್ ಅವರು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದರು. ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಮನೋಜ್ ಸೋಂಕರ್ 16 ಮತಗಳನ್ನು ಪಡೆದರೆ, ಕುಮಾರ್ 12 ಮತಗಳನ್ನು ಪಡೆದರು. ಎಂಟು ಮತಗಳು ಅಸಿಂಧುವಾಗಿವೆ. ಹೊಸದಾಗಿ ಆಯ್ಕೆಯಾದ ಮೇಯರ್ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಚುನಾವಣೆ […]