ಅಸ್ಸಾಂನಲ್ಲಿ ಪ್ರವಾಹದ ಅಬ್ಬರ: 7 ಜಿಲ್ಲೆಗಳ 3 ಲಕ್ಷಕ್ಕೂ ಅಧಿಕ ಜನ ಸಂಕಷ್ಟದಲ್ಲಿ, ಮೃತರ ಸಂಖ್ಯೆ 78ಕ್ಕೆ ಏರಿಕೆ

ಗುವಾಹಾಟಿ: ಅಸ್ಸಾಂ ರಾಜ್ಯದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ. ರಾಜ್ಯದ ಏಳು ಜಿಲ್ಲೆಗಳ 3 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು, ಈ ವರ್ಷದ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು, 21,500 ಹೆಕ್ಟೇರ್‌ಗೂ ಹೆಚ್ಚು ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ. ಅಧಿಕೃತ ಮಾಹಿತಿಯ ಪ್ರಕಾರ ಶಿವಸಾಗರ, ಚರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ವಿಶ್ವನಾಥ್ ಹಾಗೂ ಕಾಮರೂಪ್ ಜಿಲ್ಲೆಗಳು ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿವೆ. ಒಟ್ಟು 21 ಕಂದಾಯ […]
ಭಾರತೀಯ ಶೇರ್ ಮಾರ್ಕೆಟ್ ಬಗ್ಗೆ ಪ್ರಾಥಮಿಕ ಹಂತದ ಉಚಿತ ಮಾಹಿತಿ ಕಾರ್ಯಗಾರ

ಭಾರತೀಯ ಶೇರ್ ಮಾರ್ಕೆಟ್ ಬಗ್ಗೆ ಪ್ರಾಥಮಿಕ ಹಂತದ ಉಚಿತ ಮಾಹಿತಿ ಕಾರ್ಯಗಾರ ಇದೇ ಜುಲೈ 31 ರ ಶುಕ್ರವಾರದಂದು ಸಂಜೆ5 ರಿಂದ 6 ಗಂಟೆವರೆಗೆ ಉಡುಪಿಯ ಬುಲ್ಫೋರ್ಸ್ ಆಫೀಸ್ ನಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿ/ನೋಂದಾವಣೆಗಾಗಿ ಸಂಪರ್ಕಿಸಿ:98864321978310356533( ಮೊದಲು ನೋಂದಾಯಿಸಿದ 15 ಮಂದಿಗೆ ಮಾತ್ರ ಅವಕಾಶ)
‘ವಾರಕ್ಕೆ 70 ಗಂಟೆ ಕೆಲಸ ಮಾಡಿ’ ಸೂತ್ರ ಹೇಳಿಕೆ ಬೆನ್ನಲ್ಲೇ ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ₹1.9 ಕೋಟಿ ದಂಡ! ಕಾರ್ಮಿಕ ಕಾನೂನು ಉಲ್ಲಂಘನೆ ಆರೋಪ

ನವದೆಹಲಿ: ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವಂತೆ ಯುವಜನತೆಗೆ ಸಲಹೆ ನೀಡಿ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಹೇಳಿಕೆ ಮತ್ತೆ ಸುದ್ದಿಯಲ್ಲಿದೆ. ಈ ನಡುವೆ, ಫ್ರಾನ್ಸ್‌ನಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಇನ್ಫೋಸಿಸ್‌ಗೆ 1,75,000 ಯುರೋ (ಸುಮಾರು ₹1.9 ಕೋಟಿ) ದಂಡ ವಿಧಿಸಲಾಗಿದೆ. ಫ್ರಾನ್ಸ್‌ನ ಕಾರ್ಮಿಕ ನಿಯಮಗಳಿಗೆ ಅನುಗುಣವಾಗಿರದ ಉದ್ಯೋಗಿಗಳ ಕೆಲಸದ ಸಮಯ ದಾಖಲಿಸುವ (Time Tracking) ವ್ಯವಸ್ಥೆಯನ್ನು ಬಳಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಪರಿಶೀಲನೆಯ ವೇಳೆ […]
‘Gen-Z ಎಂದರೆ ಜನರೇಷನ್ ಗಟರ್’ ಎಂದ ಕಂಗನಾಗೆ ಕ್ಯಾಕರಿಸಿ ಉಗಿದ ನೆಟ್ಟಿಗರು, ರಾಜಕೀಯ ಮಾಡಿದ ನಟಿಗೆ Gen-Z ಗಳಿಂದಲೇ ಕ್ಲಾಸ್

ಮುಂಬೈ (ಜು. 28): ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚಿನ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, Gen-Z ಯುವಜನತೆಯನ್ನು ಗುರಿಯಾಗಿಸಿಕೊಂಡು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು ನೆಟ್ಟಿಗರು ರಾಜಕೀಯ ಮಾಡಿದ ನಟಿಗೆ ಕ್ಯಾಕರಿಸಿ ಉಗಿದಿದ್ದಾರೆ. ದೆಹಲಿ ಜಂತರ್ ಮಂತರ್ ಸೇರಿದಂತೆ ವಿವಿಧೆಡೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ಪ್ರತಿಭಟನಾಕಾರರು ಬಳಸಿದ ಭಾಷೆ, ಪೋಸ್ಟರ್‌ಗಳು ಹಾಗೂ […]
ನೀಟ್ ಪ್ರತಿಭಟನೆ: ಬಂಧಿತ ವಿದ್ಯಾರ್ಥಿಗಳ ವಿರುದ್ಧ ಬಲವಂತದ ಕ್ರಮ ಬೇಡ: ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಹೊಸದಿಲ್ಲಿ: ದಿಲ್ಲಿಯ ಜಂತರ್ ಮಂತರ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ನೀಟ್ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬಂಧಿತ ಪ್ರತಿಭಟನಾಕಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ನಿರ್ದೇಶನ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರನ್ನು ಒಳಗೊಂಡು ವಿಚಾರಣೆ ನಡೆಸಿ, ವಿವಿಧ ರಾಜ್ಯಗಳಲ್ಲಿ ಬಂಧಿತರಾಗಿರುವ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿದೆ. ಪ್ರತಿಭಟನೆ […]