Karnataka Dams: ಕರ್ನಾಟಕದ ಜಲಾಶಯಗಳ ಅಪ್‍ಡೇಟ್, ಮುಳುಗಡೆಯ ಭೀತಿಯಾ? ಅಥವಾ ರೈತರ ಮೊಗದಲ್ಲಿ ಮಂದಹಾಸವೇ.

ಕರ್ನಾಟಕದಲ್ಲಿ ಮಳೆಯ ಅಬ್ಬರ: ಕಾವೇರಿ, ಕೃಷ್ಣಾ ಜಲಾಶಯಗಳ ನೀರಿನ ಮಟ್ಟ ಏರಿಕೆ. ಹಾರಂಗಿ 92%, ಕಬಿನಿ 95%, ಆಲಮಟ್ಟಿ 90% ಭರ್ತಿ. ನದಿ ತೀರದ ಜನರಿಗೆ ಎಚ್ಚರಿಕೆ. ಕಾವೇರಿ ಕೊಳ್ಳದ ಜಲಾಶಯಗಳ ರಭಸ ಹಾರಂಗಿ ಅಣೆಕಟ್ಟು: ಶೇಕಡಾ 92.08% ರಷ್ಟು ಭರ್ತಿಯಾಗಿದ್ದು, ಗರಿಷ್ಠ ಮಟ್ಟವಾದ 2859 ಅಡಿಗೆ ತಲುಪಲು ಕೇವಲ ಕೆಲವೇ ಅಡಿಗಳು ಬಾಕಿ ಇವೆ. ಒಳಹರಿವು 11,645 ಕ್ಯೂಸೆಕ್‍ಗಳಷ್ಟಿದೆ. ಹೇಮಾವತಿ ಅಣೆಕಟ್ಟು: ಶೇಕಡಾ 76.56% ದಾಟಿದ್ದು, ಪ್ರಸ್ತುತ ಮಟ್ಟ 2912.24 ಅಡಿಯಲ್ಲಿದೆ.
ಡಾಬರ್ ಜೇನುತುಪ್ಪ, ಎಣ್ಣೆ ಸೇರಿ ಹಲವು ಉತ್ಪನ್ನಗಳಿಗೆ FSSAI ಬ್ರೇಕ್: ‘100% ಶುದ್ಧ’ ಹೇಳಿಕೆಯೇ ವಿವಾದಕ್ಕೆ ಕಾರಣವಾಗ್ತಿದೆ!

ನವದೆಹಲಿ: ದೇಶದ ಪ್ರಮುಖ FMCG ಕಂಪನಿಗಳಲ್ಲಿ ಒಂದಾದ ಡಾಬರ್ ಇಂಡಿಯಾಗೆ (Dabur India) ಆಹಾರ ಸುರಕ್ಷತಾ ನಿಯಂತ್ರಕ FSSAI ದೊಡ್ಡ ಶಾಕ್ ನೀಡಿದೆ. ಜೇನುತುಪ್ಪ, ಎಣ್ಣೆ, ತುಪ್ಪ, ಆಪಲ್ ಸೈಡರ್ ವಿನೆಗರ್ ಸೇರಿದಂತೆ ಹಲವು ಆಹಾರ ಉತ್ಪನ್ನಗಳ ಮೇಲೆ ಬಳಸಲಾಗಿರುವ ‘100%’ ಸಂಬಂಧಿತ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ FSSAI, ಪ್ರಶ್ನಾರ್ಹ ಉತ್ಪನ್ನಗಳ ಮಾರಾಟವನ್ನು ತಕ್ಷಣ ನಿಲ್ಲಿಸುವಂತೆ ಕಂಪನಿಗೆ ನಿರ್ದೇಶಿಸಿದೆ. ಈ ಕುರಿತು 15 ದಿನಗಳೊಳಗೆ Action Taken Report (ATR) ಸಲ್ಲಿಸುವಂತೆಯೂ ಸೂಚಿಸಿದೆ. ಏನಿದು ‘100%’ […]
ಹಬ್ಬದ ಸೀಸನ್ ಮೊದಲೇ ಜನತೆಗೆ ಬೆಲೆ ಏರಿಕೆಯ ಶಾಕ್,ಟೂತ್‌ಪೇಸ್ಟ್‌ನಿಂದ ಪೇಂಟ್‌ವರೆಗೆ ಹಲವು ಉತ್ಪನ್ನಗಳು ದುಬಾರಿ

ನವದೆಹಲಿ: ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ. ಟೂತ್‌ಪೇಸ್ಟ್, ಡಿಟರ್ಜೆಂಟ್, ವಾಲ್ ಪೇಂಟ್, ಟೈರ್ ಸೇರಿದಂತೆ ಹಲವು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಲು ಪ್ರಮುಖ ಕಂಪನಿಗಳು ಸಜ್ಜಾಗಿವೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆ ಇದಕ್ಕೆ ಪ್ರಮುಖ ಕಾರಣ ಎಂದು ಕಂಪನಿಗಳು ತಿಳಿಸಿವೆ. ಬ್ಲೂಮ್ಬರ್ಗ್ ವರದಿ ಪ್ರಕಾರ, ಹಿಂದೂಸ್ತಾನ್ ಯೂನಿಲಿವರ್ (HUL), ಏಷ್ಯನ್ ಪೇಂಟ್ಸ್, ಹ್ಯಾವೆಲ್ಸ್, ಡೋಡ್ಲಾ ಡೈರಿ ಸೇರಿದಂತೆ ಕನಿಷ್ಠ […]
ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ’: ದೆಹಲಿ ಪ್ರತಿಭಟನೆಯಲ್ಲಿ PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ.!

ಕೈಮುಗಿದು ಕಾಣಿಸಿಕೊಂಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಅದರ ನೈಜತೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ಸ್ವತಂತ್ರವಾಗಿ ದೃಢೀಕರಿಸಿಲ್ಲ. ದೆಹಲಿ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಪ್ರತಿಭಟನಾಕಾರ್ತಿ, ಕ್ಷಮೆಯಾಚಿಸಿದ್ದಾಳೆ. ತಾನು ಕೇವಲ 15 ವರ್ಷದವಳಾಗಿದ್ದು, ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದವರ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ. ಕೈಮುಗಿದು […]
ತಮಿಳುನಾಡು ಸಿಎಂ ಕರ್ನಾಟಕಕ್ಕೆ ಬರೋದು ಬೇಡ ಎಂದ ಡಿಕೆಶಿ; ಕಾರಣವೇನು?

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸದ್ಯಕ್ಕೆ ಕರ್ನಾಟಕಕ್ಕೆ ಭೇಟಿ ನೀಡುವುದು ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ಕುರಿತು ತಮಿಳುನಾಡು ಮುಖ್ಯಮಂತ್ರಿ ನಮ್ಮೊಂದಿಗೆ ಮಾತುಕತೆ ನಡೆಸಲು ಆಸಕ್ತಿ ತೋರಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಮಾತುಕತೆ ಶಾಂತಿಯುತ ವಾತಾವರಣದಲ್ಲಿ ನಡೆಯಬೇಕು. ಪ್ರಸ್ತುತ ರಾಜ್ಯದಲ್ಲಿ ಕಾವೇರಿ ವಿಚಾರವಾಗಿ ಬಿಗುವಿನ ವಾತಾವರಣ […]