ಕೇರಳದಲ್ಲಿ ಮತ್ತೊಂದು ಸಾಂಕ್ರಾಮಿಕ: ರಾಜ್ಯದಲ್ಲಿ ನೊರೊವೈರಸ್ ನ ಎರಡು ಪ್ರಕರಣಗಳು ದೃಢ

ತಿರುವನಂತಪುರಂ: ರೋಟವೈರಸ್‌ನಂತೆಯೇ ಅತಿಸಾರವನ್ನು ಉಂಟುಮಾಡುವ ನೊರೊವೈರಸ್ ಸೋಂಕು ಇಲ್ಲಿನ ಇಬ್ಬರು ಮಕ್ಕಳಲ್ಲಿ ದೃಢಪಟ್ಟಿದೆ ಎಂದು ಕೇರಳ ಸರ್ಕಾರ ಭಾನುವಾರ ತಿಳಿಸಿದೆ. ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿದ್ದು, ಕಲುಷಿತ ನೀರು ಮತ್ತು ಆಹಾರದ ಮೂಲಕ ವೈರಸ್ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದ್ದು, ಜನರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಒತ್ತಾಯಿಸಿದ್ದಾರೆ. ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, […]
ನೋಟುಗಳ ಮೇಲೆ ರವೀಂದ್ರನಾಥ ಟ್ಯಾಗೋರ್, ಎಪಿಜೆ ಅಬ್ದುಲ್ ಕಲಾಂ ವಾಟರ್‌ಮಾರ್ಕ್? ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲ್ಲಿರುವ ಆರ್‌ಬಿಐ

ನವದೆಹಲಿ: ಇದೇ ಮೊದಲ ಬಾರಿಗೆ, ಭಾರತೀಯ ನೋಟುಗಳ ಮೇಲೆ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್‌ಮಾರ್ಕ್‌ಗಳನ್ನು ಪರಿಚಯಿಸಲು ಆರ್‌ಬಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಆರ್‌ಬಿಐ ಜೊತೆಗೆ ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಟ್ಯಾಗೋರ್ ಮತ್ತು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಕಲಾಂ ಅವರ ಚಿತ್ರವುಳ್ಳ ವಾಟರ್‌ಮಾರ್ಕ್ ಅನ್ನು ಕೆಲವು ಮುಖಬೆಲೆಯ ನೋಟುಗಳ […]
ಕೇರಳ: ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ ಹಜ್ ಯಾತ್ರಾರ್ಥಿಗಳ ಮೊದಲನೆ ತಂಡ

ಕೇರಳ : ಸೌದಿ ಅರೇಬಿಯಾದ ಮದೀನಾಕ್ಕೆ ಹಜ್ ಯಾತ್ರಾರ್ಥಿಗಳ ಮೊದಲನೆ ಬ್ಯಾಚ್ ನ ಮೊದಲ ವಿಮಾನ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು. ಕೇರಳದ ವಕ್ಫ್ ಮತ್ತು ಹಜ್ ಯಾತ್ರೆಯ ಸಚಿವರಾದ ವಿ ಅಬ್ದುರಹಿಮಾನ್ ಅವರು ಧ್ವಜಾರೋಹಣ ಮಾಡುವ ಮೂಲಕ ಮೊದಲನೆ ಬ್ಯಾಚ್ ಅನ್ನು ಬೀಳ್ಕೊಟ್ಟರು. ಸೌದಿ ಅರೇಬಿಯ ಏರ್‌ಲೈನ್ಸ್‌ನ ಎಸ್ ವಿ 5747 ವಿಮಾನದಲ್ಲಿ 377 ಪ್ರಯಾಣಿಕರು ಹಜ್ ಯಾತ್ರೆಗೆ ಹೊರಟಿದ್ದಾರೆ. “ಭಾರತೀಯ ಹಜ್ ಯಾತ್ರಿಕರ ಮೊದಲ ಬ್ಯಾಚ್ ಇಂದು ಹೊರಟಿದೆ ಮತ್ತು ಕೊನೆಯ ವಿಮಾನ […]
ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ

ಉಡುಪಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಸರಣಿ ಹತ್ಯೆಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜನರ ಸುರಕ್ಷತೆಯನ್ನು ಖಾತ್ರಿಪಡಿಸುತ್ತಾ, ಭದ್ರತೆ ಮತ್ತು ಸ್ಥಳೀಯ ಗುಪ್ತಚರವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕಾಶ್ಮೀರಿ ಪಂಡಿತರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಮತ್ತು ಕಣಿವೆಯಿಂದ ಹೊರಕ್ಕೆ ವರ್ಗಾವಣೆ ಮಾಡಬೇಕೆಂಬ ಅವರ ಬೇಡಿಕೆಯ ಬಗ್ಗೆ ಸರ್ಕಾರವು ಚಿಂತಿತವಾಗಿದೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಆದರೆ ಕಾಶ್ಮೀರ ಕಣಿವೆಯಿಂದ ಹೊರಕ್ಕೆ ಸ್ಥಳಾಂತರಿಸಲಾಗುವುದಿಲ್ಲ, ಇದರಿಂದ ಸರ್ಕಾರದ ಬಗ್ಗೆ […]
ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗೆ ಒಂದು ವರ್ಷದ ಹಿಂದೆಯೆ ರೂಪಿಸಲಾಗಿತ್ತು ಸಂಚು? ಗುಪ್ತಚರ ಮೂಲಗಳಿಂದ ಬಯಲಾಯ್ತು ಸತ್ಯ

ನವದೆಹಲಿ: ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ಪಂಡಿತರ ಉದ್ದೇಶಿತ ಹತ್ಯೆಗೆ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜ಼ಫ್ಫರಾಬಾದ್ ನಲ್ಲಿ ಕುಳಿತು ಈ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 21 ಸೆಪ್ಟಂಬರ್ 2021 ರಂದು ಮುಜ಼ಫ್ಫರಾಬಾದ್ ನಲ್ಲಿ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐ ಎಸ್ ಐ ನ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಿಒಕೆಯ ಭಯೋತ್ಪಾದಕ ಸಂಘಟನೆಗಳ ಜೊತೆಗೂಡಿ ಕಾಶ್ಮೀರ ಪಂಡಿತರ ಉದ್ದೇಶಿತ […]