ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗೆ ಒಂದು ವರ್ಷದ ಹಿಂದೆಯೆ ರೂಪಿಸಲಾಗಿತ್ತು ಸಂಚು? ಗುಪ್ತಚರ ಮೂಲಗಳಿಂದ ಬಯಲಾಯ್ತು ಸತ್ಯ

ನವದೆಹಲಿ: ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ಪಂಡಿತರ ಉದ್ದೇಶಿತ ಹತ್ಯೆಗೆ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮುಜ಼ಫ್ಫರಾಬಾದ್ ನಲ್ಲಿ ಕುಳಿತು ಈ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

21 ಸೆಪ್ಟಂಬರ್ 2021 ರಂದು ಮುಜ಼ಫ್ಫರಾಬಾದ್ ನಲ್ಲಿ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐ ಎಸ್ ಐ ನ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಿಒಕೆಯ ಭಯೋತ್ಪಾದಕ ಸಂಘಟನೆಗಳ ಜೊತೆಗೂಡಿ ಕಾಶ್ಮೀರ ಪಂಡಿತರ ಉದ್ದೇಶಿತ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಕನಿಷ್ಟ 200 ಜನರ ಪಟ್ಟಿ ತಯಾರಿಸಿ, ಕೇಂದ್ರ ಸರಕಾರದ ಉದ್ಯೋಗಿಗಳು, ಭದ್ರತಾ ಪಡೆಗಳು, ಪಂಡಿತರು, ಆರ್ ಎಸ್ ಎಸ್ ಮತ್ತು ಬಿಜೆಪಿಯ ಸ್ಥಳೀಯ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಭಾರತೀಯ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಒಂದು ವರ್ಷದ ಹಿಂದೆಯೆ ಸಂಚು ರೂಪಿಸಿದ್ದ ಉಗ್ರರು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಭಾಗವಾಗಿ ಕಣಿವೆಯಲ್ಲಿ ಉದ್ದೇಶಿತ ಹತ್ಯೆಗಳನ್ನು ಉಗ್ರರು ಕೈಗೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ