ಜಮ್ಮು ಮತ್ತು ಕಾಶ್ಮೀರ: ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರ ಹತ್ಯೆ

ಜಮ್ಮು: ಸೋಮವಾರ ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಏಳು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ರಾತ್ರಿಯ ಕಾರ್ಯಾಚರಣೆಯಲ್ಲಿ ಸತ್ತವರ ಸಂಖ್ಯೆ 4 ಕ್ಕೆ ತಲುಪಿದೆ. ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿ ನಡೆದ […]

ಭಾರತದಿಂದ 192,000 ಕೆಜಿ ಹಸುವಿನ ಸಗಣಿ ಕುವೈತ್‌ಗೆ ರಫ್ತು: ಕನಕಪುರ ರೈಲು ನಿಲ್ದಾಣದಿಂದ ಮೊದಲ ಬ್ಯಾಚ್ ರವಾನೆ

ನವದೆಹಲಿ: ಭಾರತದಿಂದ 192,000 ಕೆಜಿ ಹಸುವಿನ ಸಗಣಿ ಕುವೈತ್‌ಗೆ ರಫ್ತಾಗುತ್ತಿದ್ದು, ಸಾವಯವ ಕೃಷಿಗಾಗಿ ಕುವೈತ್‌ಗೆ ಸಗಣಿ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಜೂನ್ 15 ಬುಧವಾರದಂದು ಕನಕಪುರ ರೈಲು ನಿಲ್ದಾಣದಿಂದ ಮೊದಲ ಬ್ಯಾಚ್ ನ ಸಗಣಿ ಕುವೈತ್‌ಗೆ ಹೊರಟಿದೆ. ಕಸ್ಟಮ್ಸ್ ಇಲಾಖೆಯ ಉಸ್ತುವಾರಿಯಲ್ಲಿ ಸಗಣಿ ಪೊಟ್ಟಣ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ. ಜೈಪುರದ ಗೋಶಾಲೆಯಿಂದ ಸಗಣಿ ಕಳುಹಿಸಲಾಗುತ್ತಿದ್ದು, ಕುವೈತ್ ನ ಖಾಸಗಿ ಕಂಪನಿಯೊಂದಕ್ಕೆ ಸಗಣಿಯನ್ನು ರಫ್ತು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಈಗಾಗಲೇ […]

ಅಗ್ನಿಪಥ್ ಯೋಜನೆ: ಈ ವರ್ಷಕ್ಕೆ ಗರಿಷ್ಠ ವಯಸ್ಸಿನ ಮಿತಿ 23 ಕ್ಕೆ ಏರಿಕೆ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಸೇನೆಯ ಸೇವೆಗಳಿಗೆ ಯಾವುದೇ ನೇಮಕಾತಿ ನಡೆದಿಲ್ಲವಾದ್ದರಿಂದ ಈ ವರ್ಷ ಯೋಜನೆಯ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಎರಡು ವರ್ಷಗಳ ಸಡಿಲಿಕೆಯನ್ನು ಕೇಂದ್ರ ರಕ್ಷಣಾ ಸಚಿವಾಲಯವು ಘೋಷಿಸಿದ್ದು, ಈಗ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸನ್ನು 21 ರಿಂದ 23 ಕ್ಕೆ ಏರಿಸಲಾಗಿದೆ. ನೇಮಕಾತಿ ಸ್ಥಗಿತಗೊಂಡಿದ್ದಾಗ, 2020 ರಲ್ಲಿ 21 ವರ್ಷ ವಯಸ್ಸು ಪೂರ್ತಿಗೊಳಿಸಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಈ ವರ್ಷಕ್ಕೆ ಮಾತ್ರ ಅರ್ಹರಾಗಲು ಅವಕಾಶ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಂಗಳವಾರ ಘೋಷಿಸಲಾದ ಮೂಲ […]

ಅಗ್ನಿಪಥ್ ಯೋಜನೆ ಎಂದರೇನು? ಅಗ್ನಿವೀರರಾಗಲು ಬೇಕಾಗುವ ಅರ್ಹತೆ ಮತ್ತು ಮಾನದಂಡಗಳೇನು? ಮಾಹಿತಿ ಇಲ್ಲಿದೆ

ಭಾರತೀಯ ಸೇನೆಯ ಮೂರು ಸೇವೆಗಳಲ್ಲಿ ಸೈನಿಕರನ್ನು ನೇಮಿಸಿಕೊಳ್ಳಲು ಸರ್ಕಾರ ಹೊಸ ಅಗ್ನಿಪಥ್ ಯೋಜನೆಯನ್ನು ಮಂಗಳವಾರ ಅನಾವರಣಗೊಳಿಸಿದೆ. ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿಯಿಂದ ಅನುಮತಿ ಪಡೆದಿರುವ ಹೊಸ ರಕ್ಷಣಾ ನೇಮಕಾತಿ ಸುಧಾರಣೆಯು ತಕ್ಷಣವೇ ಜಾರಿಗೆ ಬರಲಿದ್ದು, ಯೋಜನೆಯಡಿಯಲ್ಲಿ ನೇಮಕಗೊಂಡ ಸೈನಿಕರನ್ನು ‘ಅಗ್ನಿವೀರ್’ ಎಂದು ಕರೆಯಲಾಗುತ್ತದೆ. ಹೊಸ ವ್ಯವಸ್ಥೆಯು ಅಧಿಕಾರಿ ಶ್ರೇಣಿಗಿಂತ ಕೆಳಗಿನ ಸಿಬ್ಬಂದಿಗೆ ಮಾತ್ರ. 1. ಹೊಸ ಯೋಜನೆಯಡಿ, ವಾರ್ಷಿಕವಾಗಿ ಸುಮಾರು 45,000 ರಿಂದ 50,000 ಸೈನಿಕರನ್ನು ನೇಮಿಸಿಕೊಳ್ಳಲಾಗುವುದು ಮತ್ತು ಹೆಚ್ಚಿನವರು ಕೇವಲ ನಾಲ್ಕು ವರ್ಷಗಳಲ್ಲಿ ಸೇವೆಯನ್ನು ತೊರೆಯುತ್ತಾರೆ. […]

ರಾಹುಲ್ ಗಾಂಧಿಗೆ ಇಡಿ ಸಮನ್ಸ್: ಮೋದಿ ಸರ್ಕಾರದಿಂದ ಇಡಿ ದುರ್ಬಳಕೆಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಇಡಿ ಪ್ರಶ್ನಿಸುವ ಮುನ್ನವೇ ಕೇಂದ್ರ ಸರ್ಕಾರದ ಇಡಿ ದುರ್ಬಳಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಮ್ಮು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಇಂದು ರಾಹುಲ್ ಗಾಂಧಿ ವಿಚಾರಣೆಗಾಗಿ ಇಡಿ ಕಚೇರಿಗೆ ತೆರಳುವ ಸಾಧ್ಯತೆಯಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ರಾಹುಲ್ ಜೊತೆ ಇಡಿ ಕಚೇರಿಗೆ ಹೋಗಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಸತ್ಯ ಕಾ ಸಂಗ್ರಾಮ್’ ಮುಂದುವರೆಯಲಿದೆ ಎಂದು […]