ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿಗೆ ಇಡಿ ಸಮನ್ಸ್, ಜುಲೈ 21 ರಂದು ಹಾಜರಾಗಲು ಕೋರಿಕೆ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜುಲೈ 21 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಸಮನ್ಸ್ ನೀಡಿದೆ. ಕೋವಿಡ್ -19 ರಿಂದ ಚೇತರಿಸಿಕೊಳ್ಳುವುದನ್ನು ಉಲ್ಲೇಖಿಸಿ ಸೋನಿಯಾ ಗಾಂಧಿ ಈ ಹಿಂದೆ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದರು. ಮೊದಲನೆ ನೋಟೀಸ್ ನೀಡಿದಾಗ ಸೋನಿಯಾ ಗಾಂಧಿಗೆ ಕೋವಿಡ್ ಪತ್ತೆ ಪರೀಕ್ಷೆಯಲ್ಲಿ ಸಂಕ್ರಮಣ ಇದೆ ಎಂದಾಗಿತ್ತು ಮತ್ತೆ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಜೂನ್ 23 ರಂದು ಹಾಜರಾಗಲು […]

ಗ್ರಾಮಾಭಿವೃದ್ದಿಯ ಹರಿಕಾರ ಧರ್ಮದರ್ಶಿ “ಶ್ರೀ ವೀರೇಂದ್ರ ಹೆಗ್ಗಡೆ”ಯವರಿಗೆ ರಾಜ್ಯಸಭೆ ನಾಮಾಂಕನದ ಗೌರವ

ನವೆಂಬರ್ 25, 1948 ರಂದು ಪ್ರಕೃತಿಯ ಒಡಲಲ್ಲಿ ಧರ್ಮದೇವತೆ ಶ್ರೀ ಮಂಜುನಾಥ ನೆಲೆಯಾದ ಪವಿತ್ರ ಭೂಮಿಯಲ್ಲಿ ಜನನ. ಕಡು ಕುಗ್ರಾಮವಾದ ಹಳ್ಳಿಯಲ್ಲಿ ಸೌಕರ್ಯಗಳೇ ಇಲ್ಲದಿದ್ದ ಕಾಲವದು. ಕುಡುಮ ಎಂಬ ಪುಟ್ಟ ಹಳ್ಳಿಯನ್ನು ಧರ್ಮಸ್ಥಳವಾಗಿಸಿ ದೇಶ ವಿದೇಶದ ಭಕ್ತ ಸಾಗರ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ ಕೀರ್ತಿ ಶ್ರೀಯುತ ವೀರೇಂದ್ರ ಹೆಗ್ಗಡಿಯವರಿಗಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ತಂದೆ ರತ್ನವರ್ಮ ಹೆಗ್ಗಡೆಯವರು ನಿಧನರಾದಾಗ ವೀರೇಂದ್ರ ಹೆಗ್ಗಡೆಯವರು ಇನ್ನೂ ಹದಿಹರೆಯದ ಹುಡುಗ. ಎಳವೆಯಲ್ಲೇ ಕ್ಷೇತ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಇವರು […]

ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ ಹೆಚ್ಚಳ

ಉಡುಪಿ: ಭಾರತದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು (ಒಎಂಸಿ) ತಲಾ 50 ರೂಪಾಯಿಗಳಷ್ಟು ಹೆಚ್ಚಿಸಿವೆ. ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೂ1,066 ಮತ್ತು ಉಡುಪಿ ಜಿಲ್ಲೆಯಲ್ಲಿ ರೂ 1,060.50 ಆಗಿದೆ. ಇದಕ್ಕೂ ಮೊದಲು, ದೇಶೀಯ ಎಲ್‌ಪಿಜಿ ಬೆಲೆಗಳನ್ನು ಮೇ 19 ರಂದು ಕೊನೆಯ ಬಾರಿಗೆ ಪರಿಷ್ಕರಿಸಲಾಗಿದ್ದು, ಪ್ರತಿ ಸಿಲಿಂಡರ್‌ಗೆ 3.50 ರೂ. ಹೆಚ್ಚಿಸಲಾಗಿತ್ತು. ಸಾಮಾನ್ಯವಾಗಿ, ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ […]

ಹೋಟೇಲು, ರೆಸ್ಟೋರೆಂಟ್ ಗಳು ಬಲವಂತ ಸೇವಾ ಶುಲ್ಕ ಸಂಗ್ರಹಿಸಿದಲ್ಲಿ ದೂರು ದಾಖಲಿಸಿ: ಗ್ರಾಹಕ ಸಂರಕ್ಷಣಾ ಪ್ರಾಧಿಕಾರ

ನವದೆಹಲಿ: ಯಾವುದೇ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಆಹಾರ ಬಿಲ್‌ಗೆ ಪೂರ್ವನಿಯೋಜಿತವಾಗಿ ಸೇವಾ ಶುಲ್ಕವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ನಿಟ್ಟಿನಲ್ಲಿ, ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಬೇರೆ ಯಾವುದೇ ಹೆಸರಿನಿಂದ ಸೇವಾ ಶುಲ್ಕದ ಸಂಗ್ರಹವನ್ನು ಮಾಡತಕ್ಕದ್ದಲ್ಲ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಸೇವಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಮತ್ತು ಸೇವಾ ಶುಲ್ಕವು […]