‘ಒಂದು ರಾಷ್ಟ್ರ ಒಂದು ಚಿನ್ನದ ದರ’ ಕಡೆಗೆ ಹೆಜ್ಜೆಯಿಡುತ್ತಿರುವ ಭಾರತ: ಭಾರತೀಯ ಆಭರಣಕಾರರಿಗೆ ಅಂತರರಾಷ್ಟ್ರೀಯ ಬೆಲೆಯಲ್ಲಿ ಚಿನ್ನ ಆಮದಿಗೆ ಅನುಮತಿ

ಗಾಂಧಿನಗರ: ಶುಕ್ರವಾರ ಗುಜರಾತಿನ ಗಾಂಧಿನಗರದ ‘ಗಿಫ್ಟ್’ ನಗರದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಬುಲಿಯನ್ ಎಕ್ಸ್‌ಚೇಂಜ್ ಪ್ರಾರಂಭವಾದ ನಂತರ, ಭಾರತೀಯ ಚಿನ್ನ ವ್ಯಾಪಾರಿಗಳು ಉತ್ಸುಕರಾಗಿದ್ದಾರೆ. ಈ ವಿನಿಮಯವು ಭಾರತೀಯ ಚಿನ್ನ ವ್ಯಾಪಾರಿಗಳು ಅಂತರರಾಷ್ಟ್ರೀಯ ಬೆಲೆಯಲ್ಲಿ ಚಿನ್ನವನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಸರಕು ಸಾಗಣೆಯಲ್ಲಿ ದೊಡ್ಡ ಮೊತ್ತ ಉಳಿತಾಯವಾಗುತ್ತದೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಅರ್ಹ ಆಭರಣ ವ್ಯಾಪಾರಿಗಳು ಮತ್ತು ಬ್ಯಾಂಕುಗಳು ಅಂತರರಾಷ್ಟ್ರೀಯ ಬೆಲೆಗೆ ಚಿನ್ನವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುವುದರಿಂದ ವಿನಿಮಯವು ‘ಒಂದು ರಾಷ್ಟ್ರ ಒಂದು ಚಿನ್ನದ ದರ’ ಕಡೆಗೆ […]
ಮಧ್ಯಪ್ರಾಚ್ಯದ ಇಸ್ರೇಲಿನಲ್ಲಿ ಜಗನ್ನಾಥನ ಪ್ರಪ್ರಥಮ ರಥ ಯಾತ್ರೆ: ಭಾರತೀಯ ರಂಗಿನಲ್ಲಿ ಮಿಂದೆದ್ದ ಇಸ್ರೇಲಿಗರು

ಟೆಲ್ ಅವೀವ್: ಭಾರತ ಮತ್ತು ಇಸ್ರೇಲ್ ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಘನಿಷ್ಠ ಮಿತ್ರತ್ವವನ್ನು ಹೊಂದಿರುವ ದೇಶಗಳು. ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಯಹೂದಿಯರ ಹತ್ಯಾಕಾಂಡ ನಡೆಯುತ್ತಿದ್ದಾಗ, ತಮ್ಮ ದೇಶ ತೊರೆದು ಸುರಕ್ಷಿತ ಸ್ಥಾನಗಳಿಗಾಗಿ ಅರಸುತ್ತಿದ್ದ ಯಹೂದಿಯರಿಗೆ ಮೊಟ್ಟ ಮೊದಲ ಬಾರಿಗೆ ಆಶ್ರಯ ನೀಡಿದ್ದು ಭಾರತ. ಅಂದಿನಿಂದ ಇಂದಿನವರೆಗೂ ಭಾರತ ಮತ್ತು ಇಸ್ರೇಲ್ ಅತ್ಯಂತ ಆಪ್ತ ಮಿತ್ರರಾಗಿ ಉಳಿದುಕೊಂಡಿವೆ. https://www.youtube.com/watch?v=Z0aAHwMKGQ0 ಭಾರತ ಮತ್ತು ಇಸ್ರೇಲಿನ ಸಂಬಂಧದ ಕುರುಹಿನ ಪ್ರತಿಯಾಗಿ ಇದೀಗ ಪ್ರಪ್ರಥಮ ಬಾರಿಗೆ ಇಸ್ರೇಲಿನಲ್ಲಿ ಪುರಿ […]
ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ: ಮಹಿಳಾ ಆಯೋಗದಿಂದ ನೋಟಿಸ್

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧುರಿ ಅವರಿಗೆ ಖುದ್ದು ಹಾಜರಾಗುವಂತೆ ಮತ್ತು ಅಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿರುವ ಹೇಳಿಕೆಗಳಿಗೆ ಲಿಖಿತ ವಿವರಣೆಯನ್ನು ನೀಡುವಂತೆ ನೋಟಿಸ್ ಕಳುಹಿಸಿದೆ. ಮುಂದಿನ ತಿಂಗಳು 3ಕ್ಕೆ ವಿಚಾರಣೆ ನಿಗದಿಯಾಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮತ್ತು ಅವರ ಅವಹೇಳನಕಾರಿ ಹೇಳಿಕೆಗಾಗಿ ಚೌಧರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯೋಗವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದೆ. ಘಟನೆಯ ವಿವರ: ಸಂಸತ್ತಿನಲ್ಲಿ […]
17 ವರ್ಷ ವಯಸ್ಸಿನವರು ಮತದಾರರ ಗುರುತಿನ ಚೀಟಿಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು: ಚುನಾವಣಾ ಆಯೋಗ

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಮತದಾರರ ನೋಂದಣಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 17 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತದಾರರ ಗುರುತಿನ ಚೀಟಿಗಾಗಿ ಮುಂಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಪ್ರಕಟಿಸಿದೆ. ಈ ಮೊದಲು, ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನಾಗರಿಕರಿಗೆ ಜನವರಿ 1 ರಂದು 18 ವರ್ಷ ವಯಸ್ಸು ತುಂಬಬೇಕಾಗಿತ್ತು. ಈಗ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಯುವಕರು ಪ್ರತಿ ವರ್ಷ ನಾಲ್ಕು ಅವಕಾಶಗಳನ್ನು ಪಡೆಯುತ್ತಾರೆ. 17 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರಿಗಾಗಿ ಮೂರು ಅರ್ಹತಾ ದಿನಾಂಕಗಳನ್ನು ಉಲ್ಲೇಖಿಸಿ – […]
ಒಂದು ತಿಂಗಳಲ್ಲಿ 3,419 ಕೋಟಿ ವಿದ್ಯುತ್ ಬಿಲ್: ಮಧ್ಯಪ್ರದೇಶ ವಿದ್ಯುತ್ ನೌಕರನ ಅವಾಂತರಕ್ಕೆ ತಲೆ ತಿರುಗಿ ಆಸ್ಪತ್ರೆ ಸೇರಿದ ಮನೆ ಹಿರಿಸದಸ್ಯ

ಭೋಪಾಲ್: ಒಂದೇ ತಿಂಗಳಲ್ಲಿ 3,419 ಕೋಟಿ ರೂಪಾಯಿ ವಿದ್ಯುತ್ ಖರ್ಚು! ಈ ವಿದ್ಯುತ್ ಬಿಲ್ ನೋಡಿ ಮನೆಯ ಮಾಲೀಕರಿಗೆ ತಲೆ ತಿರುಗಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿ ನಿವಾಸಿ ಪ್ರಿಯಾಂಕಾ ಗುಪ್ತಾ ಮನೆಗೆ ಜುಲೈನಲ್ಲಿ 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಬಂದಾಗ ಮನೆ ಮಂದಿಯೆಲ್ಲಾ ಆಘಾತಕ್ಕೊಳಗಾಗಿ ಮನೆಯ ಹಿರಿಯ ಸದಸ್ಯ, ಪ್ರಿಯಾಂಕಾರವರ ಮಾವ ಅಸ್ವಸ್ಥರಾಗಿ ಆಸ್ಪತ್ರೆ ಸೇರಬೇಕಾಗಿ ಬಂದಿದೆ. ತನ್ನ ತಂದೆ ವಿದ್ಯುತ್ ಬಿಲ್ ನೋಡಿ […]