ಜ್ಞಾನವಪಿ ಮಸೀದಿ ಪ್ರಕರಣ: ಅಂಜುಮನ್ ಇಂತೇಜಮಿಯ ಅರ್ಜಿ ವಜಾಗೊಳಿಸಿದ ಜಿಲ್ಲಾ ನ್ಯಾಯಾಲಯ

ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯವು ಹಿಂದೂ ಪರ ತೀರ್ಪು ನೀಡಿದೆ. ಅಂಜುಮನ್ ಇಂತೇಜಾಮಿಯಾ ಸಮಿತಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಐದು ಮಹಿಳಾ ಹಿಂದೂ ಪಕ್ಷಗಳ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ. ಜ್ಞಾನವಾಪಿ ಶೃಂಗಾರ ಗೌರಿ ವಿವಾದ ಪ್ರಕರಣದ ತೀರ್ಪು ನೀಡುವಾಗ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರಿದ್ದ ಏಕ ಪೀಠವು ಪ್ರಕರಣ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿದೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, ನ್ಯಾಯಾಲಯವು ಮುಸ್ಲಿಂ ಕಡೆಯ […]
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: 2024-25 ರ ಅಂತ್ಯದ ವೇಳೆಗೆ 68 ಲಕ್ಷ ಉದ್ಯೋಗ ಸೃಜನೆ

ನವದೆಹಲಿ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಶನಿವಾರದಂದು ತನ್ನ ಎರಡನೇ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದೆ. 2024-25ರ ಅಂತ್ಯದ ವೇಳೆಗೆ ಈ ಯೋಜನೆಯು 68 ಲಕ್ಷ ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆ ವಲಯವು 2019-20 ರಿಂದ 2021-22 ರವರೆಗೆ 14.3 ಶೇಕಡಾದಷ್ಟು ಪ್ರಭಾವಶಾಲಿ ಬೆಳವಣಿಗೆಯನ್ನು ತೋರಿಸಿದೆ. 2021-22ರಲ್ಲಿ ಮೀನಿನ ಉತ್ಪಾದನೆಯು ಸಾರ್ವಕಾಲಿಕ ಗರಿಷ್ಠ 161.87 ಲಕ್ಷ ಟನ್‌ಗಳನ್ನು ತಲುಪಿದೆ. ಮುಖ್ಯವಾಗಿ ಸಿಗಡಿ ರಫ್ತು ಪ್ರಾಬಲ್ಯ ಹೊಂದಿರುವ ಈ ವಲಯವು 57 ಸಾವಿರದ 587 ಕೋಟಿ ರೂಪಾಯಿಗಳ ಮೊತ್ತದ […]
ಇದು ಬ್ರಿಟಿಷರ ಕಾಲದ ರಾಜಪಥ ಅಲ್ಲ: ಇನ್ನು ಮುಂದೆ ಇದು ಆತ್ಮನಿರ್ಭರ ಭಾರತದ ಕರ್ತವ್ಯ ಪಥ

ನವದೆಹಲಿ: ಬ್ರಿಟಿಷರ ಕಾಲದ ಗುಲಾಮಗಿರಿಯ ಎಲ್ಲಾ ಸಂಕೇತಗಳನ್ನು ನಿರ್ಮೂಲನೆ ಮಾಡುವ ಪಣ ತೊಟ್ಟಿರುವ ಪ್ರಧಾನಿ ಮೋದಿ, ಐ.ಎನ್. ಎಸ್ ವಿಕ್ರಾಂತ್ ನಲ್ಲಿರುವ ಬ್ರಿಟಿಷರ ಕಾಲದ ನೌಕಾ ಧ್ವಜವನ್ನು ಬದಿಗೊತ್ತಿ ಛತ್ರಪತಿ ಶಿವಾಜಿ ಮಹಾರಾಜರ ನೌಕಾ ಧ್ವಜದಿಂದ ಪ್ರೇರಿತ ಧ್ವಜವನ್ನು ಅನಾವರಣಗೊಳಿಸಿದ ಬೆನ್ನೆಲ್ಲೇ, ದೆಹಲಿಯ ರಾಜಪಥದ ಹೆಸರನ್ನು ಬದಲಿಸಿ ಇನ್ನು ಮುಂದೆ ಅದನ್ನು ‘ಕರ್ತವ್ಯ ಪಥ’ವೆಂದು ಘೋಷಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಸೆಂಟ್ರಲ್ ವಿಸ್ಟಾದ ಕರ್ತವ್ಯ […]
ಶಿಕ್ಷಕರ ದಿನಾಚರಣೆಯಂದು ಪಿಎಂ-ಶ್ರೀ ಶಾಲಾ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ

ನವದೆಹಲಿ: ಶಿಕ್ಷಕರ ದಿನಾಚರಣೆಯಂದು ಭಾರತದಾದ್ಯಂತದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಯೋಜನೆಗೆ ಪ್ರಧಾನಿ ಮೋದಿ ಶ್ರೀ ಕಾರ ನೀಡಿದ್ದಾರೆ. ಸೋಮವಾರ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, “ಇಂದು, ಶಿಕ್ಷಕರ ದಿನದಂದು ನಾನು ಹೊಸ ಉಪಕ್ರಮವನ್ನು ಘೋಷಿಸಲು ಸಂತೋಷಪಡುತ್ತೇನೆ. ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ಭಾರತದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣವಾಗಲಿದೆ. ಇವುಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪೂರ್ಣ ಚೈತನ್ಯವನ್ನು ಆವರಿಸುವ ಮಾದರಿ ಶಾಲೆಗಳಾಗುತ್ತವೆ” […]
ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ 60 ದಿನಗಳ ವಿಶೇಷ ಹೆರಿಗೆ ರಜೆ: ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ

ನವದೆಹಲಿ: ಕೇಂದ್ರ ಸರಕಾರದ ಹೊಸ ನೀತಿಯ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ಮಹಿಳಾ ನೌಕರರು 60 ದಿನಗಳ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ. ಜನನದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಅಥವಾ ಹೆರಿಗೆಯ ಮೊದಲು ಅಥವಾ ಹೆರಿಗೆಯ ಸಮಯದಲ್ಲಿ ಮಗುವನ್ನು ಕಳೆದುಕೊಂಡರೆ 60 ದಿನಗಳ ವಿಶೇಷ ಹೆರಿಗೆ ರಜೆ ನೀಡಲಾಗುತ್ತದೆ. ಈ ಸಂಬಂಧ ಶುಕ್ರವಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ. ತಾಯಿಯ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುವ ಮಗುವಿನ ಜನನದ ನಂತರ ಅಥವಾ […]