ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: 24 ವರ್ಷಗಳ ಬಳಿಕ ಗಾಂಧಿಯೇತರ ಅಧ್ಯಕ್ಷ

ನವದೆಹಲಿ: ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿ 24 ವರ್ಷಗಳ ಬಳಿಕ ಮೊದಲ ಗಾಂಧಿಯೇತರ ಮತ್ತು ನಾಲ್ಕು ದಶಕಗಳ ಬಳಿಕ ಮೊದಲ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 1988 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯದ ಮೂಲಕ ಸೋನಿಯಾ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರಾಗಲು ಆಹ್ವಾನಿಸಿ, ಸೀತಾರಾಮ್ ಕೇಸರಿ ಅವರನ್ನು ಅನೌಪಚಾರಿಕವಾಗಿ ಪದಚ್ಯುತಗೊಳಿಸಿದ ನಂತರ 24 ವರ್ಷಗಳಲ್ಲಿ ಕಾಂಗ್ರೆಸ್ ಅನ್ನು ಮುನ್ನಡೆಸುವ ಮೊದಲ ಗಾಂಧಿಯೇತರ ವ್ಯಕ್ತಿಯಾಗಿ […]

ದೇಶದ ಭದ್ರತೆಯಲ್ಲಿ ಗುಜರಾತಿನ ಪಾತ್ರ ನಿರ್ಣಾಯಕ: ಪ್ರಧಾನಿ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ 2022 ಅನ್ನು ಉದ್ಘಾಟಿಸಿ, ದೀಸಾದಲ್ಲಿ ಹೊಸ ವಾಯುನೆಲೆಗೆ ಶಂಕುಸ್ಥಾಪನೆ ಮಾಡಿದರು. ಹೊಸ ವಾಯುನೆಲೆಯು ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ಗುಜರಾತ್ ಭಾರತದ ರಕ್ಷಣಾ ಕೇಂದ್ರವಾಗಲಿದೆ ಮತ್ತು ಭಾರತದ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದ ಅವರು, ಹೊಸ ಏರ್‌ಫೀಲ್ಡ್ ನಿರ್ಮಾಣದ ಬಗ್ಗೆ ದೀಸಾದ ಜನರು ಉತ್ಸುಕರಾಗಿದ್ದಾರೆಂದು ನಾನು ಪರದೆಯ ಮೇಲೆ ನೋಡುತ್ತಿದ್ದೆ. ಈ ಏರ್‌ಫೀಲ್ಡ್ ಪ್ರಮುಖ ಪಾತ್ರ ವಹಿಸುತ್ತದೆ. ದೀಸಾ […]

ಮಮತಾ ಬ್ಯಾನರ್ಜಿಗೆ ಸಂಕಷ್ಟ: ಪಶ್ಚಿಮ ಬಂಗಾಳದ ಮೊಮಿನ್‌ಪುರ ಹಿಂಸಾಚಾರದ ತನಿಖೆ ಎನ್‌ಐಎ ತೆಕ್ಕೆಗೆ

ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಸಂಕಷ್ಟ ಎದುರಾಗಿದ್ದು, ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಮೊಮಿನ್‌ಪುರ ಮತ್ತು ಅಕ್ಕ ಪಕ್ಕದಲ್ಲಿ ಅಕ್ಟೋಬರ್ 9 ರಂದು ನಡೆದ ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ವರದಿ ಪಡೆದ ನಂತರ ಗೃಹ ಸಚಿವಾಲಯವು ಎನ್‌ಐಎ ತನಿಖೆಗೆ ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಹಿಂದೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ರಾಜ್ಯದ ಹಿಂಸಾಚಾರ ಪೀಡಿತ […]

ತಾಯಿ ಚಾಕೋಲೇಟ್ ಕದ್ದಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮೂರು ವರ್ಷದ ಪೋರ: ವೀಡಿಯೋ ವೈರಲ್

ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್‌ಪುರ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ವಿರುದ್ಧ ದೂರು ನೀಡಿರುವ ವೀಡಿಯೋ ವೈರಲ್ ಆಗಿದೆ. ಮಗು ತನ್ನ ತಾಯಿಯ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರಿಗೆ ಭಾನುವಾರ ದೂರು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾ ನಾಯಕ್ ಕರ್ತವ್ಯದಲ್ಲಿರುವ ಬುರ್ಹಾನ್‌ಪುರ್ ಠಾಣೆಗೆ ಈ ಮಗು ಬಂದು ತಾಯಿ ಮೇಲೆ ದೂರು ನೀಡಬೇಕು ಎಂದಿದೆ. ಮಗುವಿನ ದೂರನ್ನು ಬರೆಯಲು ಪ್ರಿಯಾಂಕ ಕಾಗದ […]

ನೊಯ್ಡಾ: ಬೀದಿನಾಯಿ ಹಾವಳಿಗೆ ಏಳು ತಿಂಗಳ ಕಂದಮ್ಮ ಬಲಿ

ನೊಯ್ಡಾ: ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 100 ರ ಬಹುಮಹಡಿ ಕಟ್ಟಡದ ಸೊಸೈಟಿಯಲ್ಲಿ ಸೋಮವಾರ ಸಂಜೆ ಕಾರ್ಮಿಕನೊಬ್ಬನ ಏಳು ತಿಂಗಳ ಮಗುವನ್ನು ಬೀದಿನಾಯಿಯೊಂದು ಕೊಂದು ಹಾಕಿದೆ. ಅಂಬೆಗಾಲಿಡುತ್ತಿದ್ದ ಗಾಯಾಳು ಮಗುವನ್ನು ಐಸಿಯುಗೆ ದಾಖಲಿಸಲಾಗಿತ್ತು. ನಾಯಿ ದಾಳಿಯಲ್ಲಿ ಮಗುವಿನ ಕರುಳು ಹೊರಬಂದಿದ್ದು, ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ದುರದೃಷ್ಟವಶಾತ್ ಅದು ಯಶಸ್ವಿಯಾಗಲಿಲ್ಲ. ರಾತ್ರಿಯಿಡೀ ಚಿಂತಾಜನಕ ಸ್ಥಿತಿಯಲ್ಲಿದ್ದ ಮಗು ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಸೆಕ್ಟರ್ 100 ರಲ್ಲಿರುವ ಲೋಟಸ್ ಬೌಲೆವಾರ್ಡ್ ಎಂಬ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ […]